ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿಯೂ ಎದೆಗುಂದದೆ ವೃದ್ಧೆ ಗಂಗಮ್ಮನ ಸ್ವಾಭಿಮಾನಿ ಬದುಕು
Team Udayavani, May 1, 2021, 6:37 PM IST
ಗಂಗಾವತಿ: ಕೋವಿಡ್ ರೋಗ ಜಗತ್ತನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ ಜಾರಿಯಾಗಿದ್ದು ಜನಸಾಮಾನ್ಯರ ಬದುಕು ದುಸ್ತಾರವಾಗಿದೆ.
ಕರ್ಪ್ಯೂನಿಂದಾಗಿ ನಗರದ ಪ್ರದೇಶದಲ್ಲಿ ಎಲ್ಲ ಅಂಗಡಿಮುಂಗಟ್ಟುಗಳ ವ್ಯವಹಾರಗಳು ಸ್ಥಗಿತಗೊಂಡಿವೆ. ಬಡವರ ಬದುಕು ಬೀದಿಗೆ ಬಂದಿದೆ. ದಿನದುಡಿದು ಜೀವನ ನಡೆಸುವವರು ತೀವ್ರಸಂಕಷ್ಟದಲ್ಲಿದ್ದಾರೆ. ಗಂಗಾವತಿಯಲ್ಲಿ ಕೇಂದ್ರ ಬಸ್ ನಿಲ್ದಾಣ ಹಾಗೂ ಇತರೆ ಜನನಿಬಿಡ ಪ್ರದೇಶದಲ್ಲಿ ಬಾಳೆ ಹಣ್ಣು ಇತರೆ ತರಕಾರಿ ಮಾರಾಟ ಮಾಡುವವರು ಬೆಳ್ಳಿಗ್ಗೆ 6-10 ಗಂಟೆ ವರೆಗೆ ಮಾತ್ರ ವ್ಯಾಪಾರ ಮಾಡಿ ಬದುಕು ದೂಡುತ್ತಿದ್ದಾರೆ.
ಗಂಗಮ್ಮ ವಯೋವೃದ್ಧೆ ಬಾಳೆ ಹಣ್ಣು ವ್ಯಾಪಾರ ಮಾಡಿ ಬದುಕು ನಡೆಸುತ್ತಾಳೆ ಕರ್ಪ್ಯೂ ಸಂದರ್ಭದಲ್ಲಿಯೂ ರಸ್ತೆ ಬದಿಯಲ್ಲಿ ಅಥವಾ ನಗರದಲ್ಲಿ ಕಾಲ್ನಡಿಗೆಯಲ್ಲಿ ಸುತ್ತಿ ಬಾಳೆಹಣ್ಣಿನ ಪುಟ್ಟಿ ಹೊತ್ತುಕೊಂಡು ಈಗಲೂ ಮಾರಾಟ ಮಾಡಿ ನಿತ್ಯವೂ 200-300 ರೂ.ಗಳ ದುಡಿದು ಸ್ವಾವಲಂಬಿ ಬದುಕು ನಡೆಸುತ್ತಿದ್ದು ಕೋವಿಡ್ ಮಹಾಮಾರಿಗೆ ಹೆದರಿ ಬದುಕು ಕಷ್ಟ ಎನ್ನುವವರಿಗೆ ಮಾದರಿಯಾಗಿದ್ದಾಳೆ.
ಕುಳಿತು ಕೆಡಬಾರದು: ಜೀವ ದುಡಿಯಲು ಜನಿಸಿದೆ ಮರಣ ಹೊಂದುವವರಿಗೂ ದುಡಿದು ಉಣ್ಣಬೇಕು. ಕುಳಿತು ಕೆಡಬಾರದು. ನನಗೆ ಒರ್ವ ಮಗನಿದ್ದಾನೆ ನಾವು ಬಡವರು ಕೋವಿಡ್ ಕರ್ಪ್ಯೂ ನಿಂದ ಬದುಕು ಕಷ್ಟವಾಗುತ್ತದೆ. ಎಲ್ಲರೂ ಹಣ್ಣು ಮಾರಿದುಡಿದು ತಿನ್ನುತ್ತೇವೆ ಸರಕಾರ ಎಷ್ಟು ಕೊಡಲು ಸಾಧ್ಯ ನಾವೇ ದುಡಿದು ತಿನ್ನಬೇಕೆಂದು ವಯೋವೃದ್ದೆ ಗಂಗಮ್ಮ ಹೆಮ್ಮೆಯಿಂದ ಹೇಳುತ್ತಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.