ಕೋವಿಡ್-19 ಯೋಧರಿಗೆ ಉಚಿತ ಚಹಾ ನೀರು ವಿತರಿಸುತ್ತಿರುವ ಅಜ್ಜ
Team Udayavani, Apr 16, 2020, 6:23 PM IST
ಗಂಗಾವತಿ: ಕೋವಿಡ್-19 ಸೋಂಕು ಹರಡದಂತೆ ಕೋವಿಡ್ ಯೋಧರು ದಿನನಿತ್ಯ ಹೋರಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಹೋಂಗಾರ್ಡ್ಸ ಮುಂತಾದವರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.
ಈ ಕೋವಿಡ್ ಯೋಧರಿಗೆ ಹಲವೆಡೆ ಸ್ವಯಂಸೇವಾ ಸಂಸ್ಥೆ ಕಾರ್ಯಕರ್ತರು, ದಾನಿಗಳು, ಜನಪ್ರತಿನಿಧಿಗಳು ಮುಂತಾದವರು ಊಟ ಉಪಹಾರ, ಚಹಾ ಕಾಫಿ ನೀರು ಮತ್ತು ಮಜ್ಜಿಗೆ ನೀಡುತ್ತಿದ್ದಾರೆ. ಅದರಂತೆ ಚಹಾ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೋರ್ವರು ಪ್ರತಿನಿತ್ಯ ಕೋವಿಡ್ ಯೋಧರಿಗೆ ಚಹಾ ಮತ್ತು ಶುದ್ಧ ನೀರನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.
ಪ್ರತಿನಿತ್ಯ ಚಹಾ ಮಾರಾಟ ಮಾಡಿ ಬದುಕು ನಡೆಸುವ ವಿದ್ಯಾನಗರದ ವಿ. ಸತ್ಯನಾರಾಯಣ ಕರ್ತವ್ಯ ನಿರತ ಸಿಬ್ಬಂದಿಯವರಿಗೆ ಕಳೆದ 15ದಿನಗಳಿಂದ ಬೆಳ್ಳಿಗ್ಗೆ ಮಧ್ಯಾಹ್ನ ಸಂಜೆ ಹೀಗೆ ಮೂರು ಹೊತ್ತು ಉಚಿತವಾಗಿ ಚಹಾ ಮತ್ತು ಶುದ್ದ ನೀರು ಅವರಿದ್ದಲ್ಲಿಗೆ ವಿತರಿಸುತ್ತಿದ್ದಾರೆ.
ತನಗೆ ಬಡತನವಿದ್ದರೂ ಕೋವಿಡ್-19 ಸೋಂಕು ತಡೆ ಹೋರಾಟದಲ್ಲಿ ತಾನು ಪಾಲ್ಗೊಂಡಿರುವುದು ಅಳಿಲು ಸೇವೆಯಂತಾಗಿದೆ ಎಂದು ಚಹಾ ವಿತರಕ ವಿ.ಸತ್ಯನಾರಾಯಣ ಉದಯವಾಣಿ ಜತೆ ಮಾತನಾಡುತ್ತ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.