ತೆರವುಗೊಳ್ಳುವ ಶಾಲೆ ವಿಲೀನಕ್ಕೆ ವಿರೋಧ
ರೈಲ್ವೇ ನಿಲ್ದಾಣಕ್ಕಾಗಿ ತೆರವುಗೊಳ್ಳಲಿದೆ ಶಾಲೆ
Team Udayavani, May 3, 2022, 4:03 PM IST
ಕುಷ್ಟಗಿ: ಪಟ್ಟಣದ ಹೊರವಲಯದ ಅಲೆಮಾರಿ ಬುಡಕಟ್ಟು ಜನಾಂಗದವರು ವಾಸವಾಗಿರುವ ಸಂತ ಶಿಶುನಾಳ ಶರೀಫ್ ನಗರದಲ್ಲಿ ತಳಕಲ್-ವಾಡಿ ರೈಲು ಮಾರ್ಗದ ರೈಲ್ವೇ ನಿಲ್ದಾಣ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೆರವುಗೊಳ್ಳುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯನ್ನು ಸಂತ ಶಿಶುನಾಳ ಶರೀಫ್ ನಗರಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲೇ ನಿರ್ಮಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-50 ಹಾಗೂ ಕಂದಕೂರು ರಸ್ತೆಯ ಮಧ್ಯೆ ಭಾಗದಲ್ಲಿ ನೈರುತ್ಯ ವಲಯದ ರೈಲ್ವೇ ನಿಲ್ದಾಣ ನಿರ್ಮಿಸುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಸಂತ ಶಿಶುನಾಳ ಶರೀಫ್ ನಗರದ 35 ಮನೆಗಳು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ತೆರವುಗೊಳಿಸಲಾಗುತ್ತಿದೆ.
ಈಗಾಗಲೇ 35 ಮನೆಗಳಿಗೆ ತಲಾ 3 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಶಾಲೆಗೂ 12 ಲಕ್ಷ ರೂ. ರೈಲ್ವೆ ಇಲಾಖೆ ನಿಗದಿಪಡಿಸಿದೆ. ಆದರೆ ಶಾಲೆ ನಿರ್ಮಾಣಕ್ಕೆ ಜಾಗೆಯ ತೊಂದರೆ ಇದೆ. ಸಂತ ಶಿಶುನಾಳ ಶರೀಫ್ ನಗರದ ಉತ್ತರ, ಪೂರ್ವ ಹಾಗೂ ದಕ್ಷಿಣ ದಿಕ್ಕಿನಲ್ಲಿ ರೈತರ ಜಮೀನು ಇದ್ದು, ಪಶ್ಚಿಮ ಭಾಗದಲ್ಲಿ ಸ.ನಂ. 59ರಲ್ಲಿ ರಾಜ್ಯಪಾಲರ ಹೆಸರಿನಲ್ಲಿ ನೋಂದಣಿಯಾಗಿರುವ ಕೆಐಡಿಬಿಯ 25 ಗುಂಟೆ ಜಾಗೆ ಇದೆ.
ಶಾಲೆ ನಿರ್ಮಿಸುವ ಸಂಬಂಧ ಕೆಐಡಿಬಿಯ ಸದ್ಯಕ್ಕೆ 11 ಗುಂಟೆಯಾದರೂ ಬಿಟ್ಟು ಕೊಟ್ಟರೆ ಶಾಲೆ ನಿರ್ಮಿಸಲು ಅನಕೂಲವಾಗಲಿದೆ. ಇದೇ ಸ.ನಂ.ಗೆ ಹೊಂದಿಕೊಂಡಿರುವ ರೈತರ ಜಮೀನಿನಲ್ಲಿ ಶಾಲೆಗೆ ಅಗತ್ಯವಿರುವ ಜಾಗೆ ಖರೀದಿಸಬೇಕು. ಈ ಶಾಲೆಯನ್ನು ಕೃಷ್ಣಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಾರುತಿ ನಗರದ ಶಾಲೆಯಲ್ಲಿ ವಿಲೀನಗೊಳಿಸುವ ಪ್ರಯತ್ನ ಮಾಡಬಾರದು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.
ರೈಲ್ವೇ ನಿಲ್ದಾಣ ನಿರ್ಮಿಸುವ ಹಿನ್ನೆಲೆಯಲ್ಲಿ ಶಾಲೆ, ಅಂಗನವಾಡಿ ತೆರವುಗೊಳಿಸುವುದಾದರೆ, ರೈಲ್ವೇ ಇಲಾಖೆಯವರೇ ಕೆಐಡಿಬಿಯಿಂದ ಶಾಲೆಗಾಗಿ 25 ಗುಂಟೆಯಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ. ರೈಲ್ವೇ ಇಲಾಖೆ ಶಾಲೆಗೆ ಬರೀ 12 ಲಕ್ಷ ರೂ. ಪರಿಹಾರ ನೀಡಿದ್ದು, ಇದು ಕನಿಷ್ಟ ಪರಿಹಾರ. ಯಾಕೆಂದರೆ ಎನ್.ಎ. (ಭೂ ಪರಿವರ್ತನೆ) ನಿವೇಶನ ಆಗಿದ್ದು, ಹೆಚ್ಚಿನ ಪರಿಹಾರ ಸಿಗಬೇಕಿದೆ. ಈ ಕುರಿತು ಸಂಬಂಧಿಸಿದ ಕೆಐಡಿಬಿ ಅಧಿಕಾರಿ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವೆ. -ಗಂಗಾಧರಸ್ವಾಮಿ ಹಿರೇಮಠ, ಪುರಸಭೆ ಅಧ್ಯಕ್ಷ
ಭಿಕ್ಷೆ ಬೇಡಿ, ಹಾವು ಆಡಿಸಿ, ಪ್ಲಾಸ್ಟಿಕ್ ಕೊಡ ಮಾರಿ ಜೀವನ ನಡೆಸುತ್ತಿದ್ದವರಿಗೆ ಸರ್ಕಾರ ಜಾಗೆ ಖರೀದಿಸಿ 100 ಮನೆಗಳನ್ನು ನಿರ್ಮಿಸಿ, ಮಕ್ಕಳ ಶಿಕ್ಷಣಕ್ಕೆ ಶಾಲೆ, ಅಂಗನವಾಡಿ ನಿರ್ಮಿಸಲಾಗಿದೆ. ಈಗ ಅದನ್ನು ರೈಲ್ವೇ ನಿಲ್ದಾಣ ನಿರ್ಮಿಸುವ ಸಂಬಂಧ ಸರ್ಕಾರ ಕಸಿದುಕೊಂಡಿದೆ. ಈ ಶಾಲೆ ನಿರ್ಮಿಸಿದ್ದರಿಂದ ನಮ್ಮ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಕಲಿತು ಪಿಯುಸಿವರೆಗೆ ಓದುತ್ತಿದ್ದಾರೆ. 80ಕ್ಕೂ ಅಧಿಕ ಮಕ್ಕಳು ಬೇರೆಡೆ ಕಲಿಯುವುದು ಅಸಾಧ್ಯ. ಶಾಲೆ ತೆರವುಗೊಂಡರೆ ನಮ್ಮ ಬಡಾವಣೆಯ ಪಕ್ಕದಲ್ಲಿ ಶಾಲೆ, ಅಂಗನವಾಡಿ ನಿರ್ಮಿಸಬೇಕು. ಹಲವು ಹೋರಾಟದಿಂದ ಮನೆ ನಿರ್ಮಿಸಿಕೊಂಡಿದ್ದು, ಶಾಲೆಯನ್ನು ಇಲ್ಲಿಯೇ ಉಳಿಸಿಕೊಳ್ಳುವ ಹೋರಾಟ ಅನಿವಾರ್ಯ ಆಗಲಿದೆ. –ಮಹಿಬೂಬಸಾಬ್ ಮದಾರಿ, ಅಲೆಮಾರು ಬುಡಕಟ್ಟು ಸಮಾಜದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.