ಕಳಪೆ ಮೇವು ಪೂರೈಕೆಗೆ ಆಕ್ರೋಶ


Team Udayavani, Mar 19, 2019, 10:01 AM IST

koppa.jpg

ಕುಷ್ಟಗಿ: ತಾಲೂಕಿನ ಕಲಕೇರಿಯಲ್ಲಿರುವ ಏಕೈಕ ಗೋಶಾಲೆಗೆ ಕಳಪೆ ಗುಣಮಟ್ಟದ ಮೇವು ಪೂರೈಸುತ್ತಿರುವುದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಜ.4ರಂದು ಕಲಕೇರಿಯ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಗೋಶಾಲೆ ಆರಂಭಿಸಲಾಗಿದ್ದು, ಆರಂಭದಲ್ಲಿ ಪೂರೈಸಿದ ಭತ್ತದ ಹುಲ್ಲು, ಜೋಳದ ದಂಟು ಮೇವು ಬೆಳ್ಳಗೆ ಇತ್ತು.ಹೀಗಾಗಿ ಜಾನುವಾರುಗಳು ಈ ಮೇವನ್ನು ತಿನ್ನುತ್ತಿದ್ದವು. ಆದರೆ ಮೇವು ಪೂರೈಕೆ ಏಜೆನ್ಸಿಯವರು ಕಳುಹಿಸಿದ ಭತ್ತದ ಹುಲ್ಲಿನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಜಾನುವಾರುಗಳು ಮೂಸಿ ಸಹ ನೋಡುತ್ತಿಲ್ಲ. ಸೋಮವಾರ ಸದರಿ ಗೋಶಾಲೆಯಲ್ಲಿ ಮೇವು ಮುಗಿದಿದ್ದು, ಕೂಡಲೇ ಮೇವು ತರಿಸುವ ವ್ಯವಸ್ಥೆ ಮಾಡದ ಬಗ್ಗೆ ಜಾನುವಾರು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

ಕಪ್ಪು ಬಣ್ಣಕ್ಕೆ ತಿರುಗಿದ್ದ ಭತ್ತದ ಹುಲ್ಲು ತಿಂದ ನಮ್ಮ ಎತ್ತಿಗೆ ರಕ್ತ ಕೀವಾಗಿದೆ. ಹೀಗಾಗಿ ಕೂಡಲೇ ಅಗತ್ಯ ಚಿಕಿತ್ಸೆ ಕೊಡಿಸಲಾಯಿತು. ಮೇವು ಪೂರೈಕೆದಾರರು, ಮೇವಿನ ತೂಕ ಹೆಚ್ಚಳ ಮಾಡಲು ನೀರು ಚಿಮುಕಿಸುತ್ತಿದ್ದು, ಸದ್ಯ ಕಟಾವಾದ ಮೇವಿನೊಂದಿಗೆ ಹಳೆಯ ಮೇವನ್ನು ಸೇರಿಸಲಾಗುತ್ತಿದ್ದು, ಜಾನುವಾರುಗಳು ಮೇವನ್ನು ತಿನ್ನದೇ ನಿಂತಿವೆ. ಮೇವು ಪೂರೈಕೆದಾರರು ಸದ್ಯ ಕಟಾವು ಮಾಡಿದ ತಾಜಾ ಮೇವನ್ನೇ ಪೂರೈಸುವ ವ್ಯವಸ್ಥೆ ಮಾಡಬೇಕೆಂದು ನಡುವಲಕೊಪ್ಪ ಗ್ರಾಮದ ತುಳಜಾ ನಾಯಕ, ಕಾಳಮ್ಮ, ದುರಗಪ್ಪ ಚೌವ್ಹಾಣ ಒತ್ತಾಯಿಸಿದ್ದಾರೆ. 

 ಜಾನುವಾರುಗಳು ಬಿಸಿಲಿಗೆ ನಿಲ್ಲುವುದರಿಂದ ಕಾಯಿಲೆ ಬರುವ ಅಪಾಯವಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ. ಇಲ್ಲಿನ ಜಾನುವಾರುಗಳಿಗೆ ಇನ್ನೊಂದು ಶೆಡ್‌ ಬೇಕೆಂದು ಪ್ರಸ್ತಾಪಿಸಿದ್ದರೂ ಅಗತ್ಯ ಕ್ರಮ ಕೈಗೊಂಡಿಲ್ಲ. ಇನ್ನೊಂದು ಶೆಡ್‌ ನಿರ್ಮಿಸಲು ನಿರ್ಮಿತಿ ಕೇಂದ್ರದವರಿಗೆ ಸೂಚಿಸಲಾಗಿದ್ದು, ಆದರೆ ನಿರ್ಮಿತಿಯವರು ಗೋಶಾಲೆಯತ್ತ ಮುಖ ಮಾಡಿಲ್ಲ. ಈ ಗೋಶಾಲೆಯಲ್ಲಿ ಕಾರ್ಯ ನಿರ್ವಹಿಸುವ ನಾಲ್ಕು ಜನರಿಗೆ ಎರಡು ತಿಂಗಳಾಗುತ್ತ ಬಂದರೂ ವೇತನ ಇಲ್ಲ. ಹೀಗಾದರೆ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ ಎನ್ನುವುದು ಕೆಲಸಗಾರರ ಅಳಲು.

ಕಳೆದ ವಾರ ಗೋಶಾಲೆಗೆ ಪೂರೈಸಿದ ಭತ್ತದ ಹುಲ್ಲು ಕಳಪೆಯಾಗಿದ್ದು ಹಳಸಿದ ಅನ್ನದಂತಾಗಿತ್ತು. ಜಾನುವಾರುಗಳು ಬೇಕು ಬೇಡ ಎನ್ನುವಂತೆ ತಿನ್ನುತ್ತಿದ್ದು, ಗೋಶಾಲೆಗೆ ಸೇರಿಸಿದಾಗಿನಿಂದ ಜಾನುವಾರುಗಳು ಸೊರಗುತ್ತಿವೆ.  ಕಾಳವ್ವ ಚವ್ಹಾಣ ರೈತ ಮಹಿಳೆ ಗೋಶಾಲೆಯಲ್ಲಿ ಪ್ರತಿ ದನಕ್ಕೆ 8 ಕೆ.ಕಿ. ಕರುವಿಗೆ 4 ಕೆ.ಜಿಯಂತೆ ಪೂರೈಸಲಾಗುತ್ತಿದೆ. ತಾಲೂಕಿನಲ್ಲಿ ಹೋಬಳಿಗೊಂದು ಗೋಶಾಲೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಗೋಶಾಲೆಗಳಿಗೆ ಕಾಕಂಬಿಯ ಬಿಲ್ಲೆ ಪೂರೈಸುವ ವ್ಯವಸ್ಥೆ ಇದ್ದು, ಜಾನುವಾರು ಕಾಕಂಬಿ ಬಿಲ್ಲೆ ನೆಕ್ಕುತ್ತಾ ಮೇವು ತಿನ್ನುತ್ತವೆ.
 ಚನ್ನಬಸಪ್ಪ ಹಳ್ಳದ್‌, ಸಹಾಯಕ ನಿರ್ದೇಶಕ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕುಷ್ಟಗಿ.

ಟಾಪ್ ನ್ಯೂಸ್

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.