ಪಂಪಾಸರೋವರ ಜೀರ್ಣೋದ್ಧಾರ
ವಿಜಯನಗರ ಅರಸರು ನಿರ್ಮಿಸಿದ್ದ ವಾಲೀಕಿಲ್ಲಾ ಆದಿಶಕ್ತಿ ದೇಗುಲ ಪುನರ್ ನಿರ್ಮಾಣಕ್ಕೆ ಒತ್ತು
Team Udayavani, Mar 23, 2022, 5:18 PM IST
ಗಂಗಾವತಿ: ದೇಶದ ನಾಲ್ಕು ಪವಿತ್ರ ಸರೋವರಗಳಲ್ಲಿ ಒಂದಾದ ಪಂಪಾ ಸರೋವರಕ್ಕೆ ತನ್ನದೇ ಆದ ಇತಿಹಾಸ, ಮಹತ್ವವಿದೆ. ಈಗಾಗಲೇ ಹಂಪಿಯಲ್ಲಿ ನಾಲ್ಕೈದು ದೇಗುಲಗಳನ್ನು ಜೀರ್ಣೋದ್ಧಾರ ಮಾಡಿರುವ ರಾಜ್ಯ ಸಾರಿಗೆ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಹಾಗೂ ಇತರೆ ದಾನಿಗಳ ಆರ್ಥಿಕ ನೆರವಿನಿಂದ ಮೂಲವಿನ್ಯಾಸಕ್ಕೆ ಧಕ್ಕೆಯಾಗದಂತೆ ರಾಜ್ಯ ಪ್ರಾಚ್ಯವಸ್ತು-ಪುರಾತತ್ವ ಇಲಾಖೆ ಯೋಜನೆಯಂತೆ ಪಂಪಾಸರೋವರ ಜೀರ್ಣೋದ್ಧಾರ ಮಾಡಲಾಗುತ್ತಿದೆ. ವಿಜಯನಗರದ ಅರಸರು ನಿರ್ಮಿಸಿದ್ದ ವಾಲೀಕಿಲ್ಲಾ ಆದಿಶಕ್ತಿ ದೇಗುಲವನ್ನು ಪುನರ್ ನಿರ್ಮಿಸುವ ಕಾರ್ಯವೂ ನಡೆದಿದೆ.
ಉತ್ತರ ಭಾರತೀಯರು ಚಾರ್‌ಧಾಮ ಯಾತ್ರೆ ಸಂದರ್ಭದಲ್ಲಿ ಪಂಪಾಸರೋವರಕ್ಕೆ ಬಂದು ಜಲ ಸ್ಪರ್ಶ ಮಾಡಿದಾಗ ಮಾತ್ರ ಯಾತ್ರೆ ಪೂರ್ಣವಾಗುತ್ತದೆ ಎಂಬ ನಂಬಿಕೆ ಇದೆ. ಪಂಪಾಸರೋವರದಲ್ಲಿ ಉತ್ತರ ಭಾರತದ ಸಾಧು-ಸಂತರು ರಮಾನಂದ ತೀರ್ಥ ಪರಂಪರೆಯಂತೆ ಪೂಜಾ ವಿಧಿ ವಿಧಾನಗಳನ್ನು ನೂರಾರು ವರ್ಷಗಳಿಂದ ಮಾಡುತ್ತಿದ್ದಾರೆ. ಪಂಪಾಸರೋವರ ಮತ್ತು ಶ್ರೀ ವಿಜಯಲಕ್ಷೀ¾ ದೇಗುಲ ಮಳೆಗಾಳಿಯಿಂದ ಅಲ್ಲಲ್ಲಿ ಶಿಥಿಲಗೊಂಡಿತ್ತು. ಇದೀಗ ಐದು ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿರುವ ಪಂಪಾ ಸರೋವರ ಸ್ವತ್ಛಗೊಳಿಸಿ ಸುತ್ತಲೂ ಅತ್ಯುತ್ತಮ ಕಲ್ಲುಗಳಿಂದ ಮೆಟ್ಟಿಲುಗಳನ್ನು ಹಾಕಿ ಸರೋವರದಲ್ಲಿ ವರ್ಷದ 365 ದಿನ ನೀರು ನಿಲ್ಲುವಂತೆ ಮಾಡಲಾಗುತ್ತಿದೆ. ಪಕ್ಕದಲ್ಲಿರುವ ತುಂಗಭದ್ರಾ(ಪಂಪಾ)ನದಿ ನೀರು ನೈಸರ್ಗಿಕವಾಗಿ ಸರೋವರಕ್ಕೆ ಬರುವ, ಸರೋವರ ತುಂಬಿದ ನಂತರ ಹೊರಗೆ ಹೋಗುವ ಮಾರ್ಗ ನಿರ್ಮಿಸಲಾಗುತ್ತಿದೆ. ಸರೋವರ ಸುತ್ತ ಗಿಡಮರ ಬೆಳೆಸಿ ಪ್ರವಾಸಿಗರು ವೀಕ್ಷಿಸಲು ಬೆಂಚ್‌ಗಳನ್ನು ಹಾಕಲಾಗುತ್ತಿದೆ. ಸರೋವರದ ಸುತ್ತ ತಂತಿ ಜಾಲರಿ ಅಳವಡಿಸಲಾಗುತ್ತಿದೆ.
ಪಂಪಾ ಸರೋವರದಿಂದ ಸುಮಾರು 500 ಮೀಟರ್ ದೂರದಲ್ಲಿ ಶ್ರೀವಿಜಯಲಕ್ಷೀ ಮತ್ತು ಈಶ್ವರ ದೇಗುಲಗಳಿದ್ದು ಜತೆಗೆ ಶಬರಿ ಗುಹೆಗೆ ಹೋಗಲು ಮೆಟ್ಟಿಲು ಮಾಡಲಾಗಿತ್ತು. ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಮೊದಲಿಗಿದ್ದ ಕಟ್ಟಡದ ಕಲ್ಲುಗಳನ್ನು ಮಾತ್ರ ಬಳಸಿಕೊಂಡು ಗರ್ಭಗುಡಿ-ಸುತ್ತಲೂ ಕಲ್ಲಿನ ಮಂಟಪ ಪುನರ್ ನಿರ್ಮಿಸಲಾಗುತ್ತಿದೆ. ನುರಿತ ವಾಸ್ತುಶಿಲ್ಪ ಕಾಮಗಾರಿ ಮಾಡುವ ಗುತ್ತಿಗೆದಾರನಿಗೆ ಜೀರ್ಣೋದ್ಧಾರ ಕಾಮಗಾರಿ ಜವಾಬ್ದಾರಿ ವಹಿಸಲಾಗಿದೆ. ಪುರಾತತ್ವ ಪ್ರಾಚ್ಯವಸ್ತು ಇಲಾಖೆ ಅಧಿ ಕಾರಿಗಳು ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಒಂದು ವರ್ಷದಲ್ಲಿ ಜೀರ್ಣೋದ್ಧಾರ ಕಾರ್ಯ ಮುಕ್ತಾಯವಾಗಲಿದೆ.
ಪಂಪಾಸರೋವರವನ್ನು ನನ್ನ ಕೆಲ ಗೆಳೆಯರ ಆರ್ಥಿಕ ನೆರವಿನಲ್ಲಿ ಜೀರ್ಣೋದ್ಧಾರ ಮಾಡುತ್ತಿದ್ದು, ಮೂಲ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಮೊದಲಿದ್ದ ಕಲ್ಲುಗಳನ್ನೇ ಬಳಸಿಕೊಂಡು ಪ್ರಾಚ್ಯವಸ್ತು, ಪುರಾತತ್ವ ಇಲಾಖೆ ಸಲಹೆ-ಸೂಚನೆ ಪಾಲಿಸಿ ಕಾಮಗಾರಿ ನಡೆಯುತ್ತಿದೆ. ಮುಂದಿನ ಪೀಳಿಗೆಗೆ ಇತಿಹಾಸ ಸ್ಮಾರಕಗಳು ಉಳಿಯುವಂತಾಗಲು ದಾನಿಗಳು ಸರಕಾರದ ಪರವಾನಗಿ ಪಡೆದು ಇಂತಹ ಜೀರ್ಣೋದ್ಧಾರ ಕಾರ್ಯ ಮಾಡಬೇಕಿದೆ.
-ಬಿ. ಶ್ರೀರಾಮುಲು, ಸಾರಿಗೆ ಸಚಿವ.
ಆನೆಗೊಂದಿ ಭಾಗವನ್ನು ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯ ಮಾಡಿದೆ. ಇಲ್ಲಿಯ ಪುರಾತನ ದೇಗುಲ, ಸ್ಮಾರಕಗಳ ಎದುರು ಸಂರಕ್ಷಿತ ಸ್ಮಾರಕ ಎಂದು ನಾಮಫಲಕ ಹಾಕಿದ್ದು ಬಿಟ್ಟರೆ ಯಾವುದೇ ಜೀರ್ಣೋದ್ಧಾರ ಕಾರ್ಯ ಮಾಡಿಲ್ಲ. ಇದೀಗ ಸಚಿವ ಬಿ. ಶ್ರೀರಾಮುಲು ಪಂಪಾಸರೋವರ ಮತ್ತು ಆದಿಶಕ್ತಿ ದೇಗುಲ ಜೀರ್ಣೋದ್ಧಾರ ಮಾಡುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ.
-ಎನ್. ನರಸಿಂಹಲು, ಸ್ಥಳೀಯರು
-ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.