ಮಾಸಾಶನ: ಆಧಾರ್‌ ಲಿಂಕ್‌ 17 ಸಾವಿರ ಬಾಕಿ

| ಲಿಂಕ್‌ ಮಾಡದಿದ್ರೆ ಮಾಸಾಶನ ಕಟ್‌ | ಬೋಗಸ್‌ ತಪ್ಪಿಸಲು ಆಧಾರ್‌ ಸೀಡಿಂಗ್‌ ಕಾರ್ಯ | ಫಲಾನುಭವಿಗಳು ಏನು ಮಾಡಬೇಕು?

Team Udayavani, Oct 17, 2020, 1:51 PM IST

kopala-tdy-2

ಕೊಪ್ಪಳ: ಸಾಮಾಜಿಕ ಭದ್ರತೆಯಡಿ ವಿವಿಧ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಜನರು ಇನ್ಮುಂ ದೆಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಲಿಂಕ್‌ ಮಾಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇಲ್ಲದಿದ್ದರೆ ಅವರ ಮಾಸಾಶನ ಸ್ಥಗಿತಗೊಳ್ಳಲಿದೆ. ಜಿಲ್ಲೆಯಲ್ಲಿ 17 ಸಾವಿರ ಮಾಸಾಶನ ಪಡೆಯುವ ಜನರ ಆಧಾರ್‌ ಸೀಡಿಂಗ್‌ ಮಾಡುವುದು ಬಾಕಿಯಿದೆ.

ಜಿಲ್ಲೆಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನ ಹಾಗೂ ಹಿರಿಯ ನಾಗರಿಕರು ಸೇರಿ ವಿವಿಧ ಯೋಜನೆಗಳಿಗೆ ಸರ್ಕಾರದಿಂದ ನೀಡುವ ಪ್ರತಿ ತಿಂಗಳುಮಾಸಾಶನ ಪಡೆಯುತ್ತಿದ್ದಾರೆ. ಇಲ್ಲಿ ಹಲವುಅಕ್ರಮಗಳು ಹಾಗೂ ಬೋಗಸ್‌ ಸರ್ಕಾರದಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿಅಲ್ಲದೇ ಡಬಲ್‌ ಡಬಲ್‌ ಮಾಸಾಶನ ಪಡೆಯುತ್ತಿರುವುದು ಬೆಳಕಿಗೆ ಬಂದಿದ್ದರಿಂದ ಪ್ರತಿಯೊಬ್ಬ ಫಲಾನುಭವಿಯಿಂದಆಧಾರ್‌ ಸೀಡಿಂಗ್‌ ಮಾಡುವ ಪ್ರಕ್ರಿಯೆ ಆರಂಭಿಸಿದೆ.

1.7 ಲಕ್ಷ ಜನರ ಮಾಸಾಶನ: ಜಿಲ್ಲೆಯಲ್ಲಿ ಗಂಗಾವತಿ-48061 ಜನರು ಮಾಸಾಶನ ಪಡೆಯುತ್ತಿದ್ದರೆ, ಕನಕಗಿರಿ-750, ಕಾರಟಗಿ-8313, ಕೊಪ್ಪಳ-40,606, ಕುಕನೂರು-1,480, ಕುಷ್ಟಗಿ-44,413, ಯಲಬುರ್ಗಾ-32,949 ಸೇರಿದಂತೆ ಒಟ್ಟಾರೆ ಈ ವರೆಗೂ 1,76,572 ಜನರು ಮಾಸಾಶನ ಪಡೆಯುತ್ತಿದ್ದಾರೆ. ಇವರಪೈಕಿ 1,58,658 ಜನರಿಗೆ ಸರ್ಕಾರ ನೇರವಾಗಿಯೇ ಅವರ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು ಮಾಸಾಶನ ಜಮೆ ಮಾಡುತ್ತಿದೆ.

ಇನ್ನೂ ಜಿಲ್ಲೆಯಲ್ಲಿ 17 ಸಾವಿರ ಜನರ ಮಾಸಾಶನದ ಆಧಾರ್‌ ಸೀಡಿಂಗ್‌ ಪ್ರಕ್ರಿಯೆ ಬಾಕಿಯಿದೆ. ಕೆಲವರು ಇನ್ನುಬ್ಯಾಂಕ್‌ ಖಾತೆ ಹೊಂದಿಲ್ಲ. ಇದರಿಂದ ಫೋಸ್ಟ್‌ ಆಫೀಸಿನ ಮೂಲಕ ಅವರಿಗೆ ಮಾಸಾಶನ ಈಗಲೂ ಕೊಡಲಾಗುತ್ತಿದೆ. ಇದನ್ನು ತಪ್ಪಿಸಿ, ಬ್ಯಾಂಕ್‌ಖಾತೆಗೆ ಜಮೆ ಮಾಡಲು ಸರ್ಕಾರವು ಆಧಾರ್‌ ಸೀಡಿಂಗ್‌ ಪ್ರಕ್ರಿಯೆ ಆರಂಭಿಸಿದೆ.

ಅಂಚೆ ಕಚೇರಿಗೆ ಅಲೆದಾಟಕ್ಕೆ ಬ್ರೇಕ್‌: ಮಾಸಾಶನದಲ್ಲಿ ಕೆಲವು ಬೋಗಸ್‌ ನಡೆಯುತ್ತಿದ್ದರೆ, ಇನ್ನು ಕೆಲವೆಡೆ ಅಂಚೆಯಲ್ಲಿ ಪೋಸ್ಟ್‌ ಮಾಸ್ಟರ್‌ ಮಾಸಾಶನ ಕೊಡುತ್ತಿಲ್ಲ ಎನ್ನುವ ಆಪಾದನೆಯೂ ಜೋರಾಗಿವೆ. ಇದು ಸರ್ಕಾರದ ಮಟ್ಟದಲ್ಲೂ ಚರ್ಚೆಗೆ ಬಂದಿವೆ. ಫಲಾನುಭವಿಗಳು ಅಂಚೆ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು, ಡಿಜಿಟಲ್‌ ವ್ಯವಸ್ಥೆಯಡಿ ಬ್ಯಾಂಕ್‌ ಖಾತೆಗೆ ಮಾಸಾಶನ ಜಮೆ ಮಾಡುವ ಉದ್ದೇಶದಿಂದ ಆಧಾರ್‌ ಸೀಡಿಂಗ್‌ಪ್ರಕ್ರಿಯೆ ನಡೆಸಿದೆ. ಇದರಿಂದ ಡಬಲ್‌ಮಾಸಾಶನ ಪಡೆಯುವುದನ್ನು ತಪ್ಪಿಸುವಜೊತೆಗೆ ಅಂಚೆಯಣ್ಣನ ಆಟಕ್ಕೂ ಬ್ರೇಕ್‌ ಹಾಕಿದಂತಾಗಲಿದೆ.

ಫಲಾನುಭವಿಗಳು ಏನು ಮಾಡಬೇಕು?: ಜಿಲ್ಲಾದ್ಯಂತ ಸಾಮಾಜಿಕ ಭದ್ರತಾ ಯೋಜನೆಯಡಿ 1,76,572 ಜನರುಸರ್ಕಾರದಿಂದ ವಿವಿಧ ಯೋಜನೆಯಡಿಮಾಸಿಕ ಮಾಸಾಶನ ಪಡೆಯುತ್ತಿದ್ದಾರೆ. ಇವರಲ್ಲಿ 17 ಸಾವಿರ ಜನರು ಪೋಸ್ಟ್‌ ಮೂಲಕವೇ ಈಗಲೂಮಾಸಾಶನ ಪಡೆಯುತ್ತಿದ್ದಾರೆ. ಅಂತವರು ಬ್ಯಾಂಕ್‌ ಖಾತೆ ತೆರೆದು ಅದಕ್ಕೆ ಆಧಾರ್‌ ಲಿಂಕ್‌ ಮಾಡಿಸಿ, ಬ್ಯಾಂಕ್‌ ಖಾತೆ ಪ್ರತಿ ಸೇರಿದಂತೆವಿವಿಧ ದಾಖಲೆಗಳನ್ನು ತಮ್ಮ ವ್ಯಾಪ್ತಿಯತಹಶೀಲ್ದಾರ್‌, ಕಂದಾಯ ನಿರೀಕ್ಷಕ, ಗ್ರಾಮಲೆಕ್ಕಾಧಿ ಕಾರಿಗಳಿಗೆ ಸಲ್ಲಿಸಬೇಕು. ಆ ಬಳಿಕ ಜಿಲ್ಲಾಡಳಿತ ಅವುಗಳನ್ನು ದೃಢೀಕರಿಸಿ ಫಲಾನುಭವಿ ಬ್ಯಾಂಕ್‌ ಖಾತೆಗೆ ಮಾಸಾಶನ ಜಮೆ ಮಾಡಲಿದೆ.

ಒಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಇನ್ಮುಂದೆ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನಡೆಯುವ ಬೋಗಸ್‌ ತಡೆಯಲು ಆಧಾರ್‌ ಸೀಡಿಂಗ್‌ ಕ್ರಮಕ್ಕೆ ಮುಂದಾಗಿದೆ. ಅರ್ಹ ವ್ಯಕ್ತಿಗಳು ಈಗಲೇ ತಮ್ಮ ವಿವಿಧ ದಾಖಲೆಗಳನ್ನು ತಹಶೀಲ್ದಾರ್‌ಕಚೇರಿಗೆ ಸಲ್ಲಿಸಿ ಬ್ಯಾಂಕ್‌ನಿಂದ ನೇರವಾಗಿ ಮಾಸಾಶನ ಪಡೆಯಬಹುದು.

 

­-ದತ್ತು ಕಮ್ಮಾರ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Deepavali Festival: ರೈತರ ಪಾಲಿಗೆ ಹೂವಾಯ್ತು ದೀಪಾವಳಿ ಹಬ್ಬದ ಬೋನಸ್‌!

Deepavali Festival: ರೈತರ ಪಾಲಿಗೆ ಹೂವಾಯ್ತು ದೀಪಾವಳಿ ಹಬ್ಬದ ಬೋನಸ್‌!

5-koppala

Koppala: ಶಾರ್ಟ್ ಸರ್ಕ್ಯೂಟ್ ನಿಂದ ಓರ್ವ ಸಾವು

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

ಯಶಸ್ವಿ ವ್ಯವಸಾಯ- ವಲಸಿಗನ ಬದುಕು ಸಿಹಿಯಾಗಿಸಿದ ಕಬ್ಬು

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು

KEA: ಪರೀಕ್ಷೆ ವೇಳೆ ತುಂಬು ತೋಳಿನ ಶರ್ಟ್‌ಗೆ ಕತ್ತರಿ!

KEA: ಪರೀಕ್ಷೆ ವೇಳೆ ತುಂಬು ತೋಳಿನ ಶರ್ಟ್‌ಗೆ ಕತ್ತರಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.