ದುರುಗಮ್ಮನಹಳ್ಳ ಸ್ವಚ್ಛತೆಗೆ ಬೇಕಿದೆ ಜನರ ಸಹಕಾರ
Team Udayavani, May 5, 2019, 3:42 PM IST
ಗಂಗಾವತಿ: ನಗರದ ಮಧ್ಯ ಭಾಗದಲ್ಲಿ ಹರಿಯುವ ದುರುಗಮ್ಮನಹಳ್ಳದಲ್ಲಿರುವ ತ್ಯಾಜ್ಯ ಸ್ವಚ್ಛತಾ ಕಾರ್ಯ ಮತ್ತು ಜನಜಾಗೃತಿ ಮೂಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಮೂರು ದಿನಗಳಿಂದ ಸಮಾನ ಮನಸ್ಕರು ಸ್ವಯಂ ಪ್ರೇರಣೆಯಿಂದ ಹಳ್ಳದಲ್ಲಿರುವ ಪ್ಲಾಸ್ಟಿಕ್ ಹಾಗೂ ಪರಿಸರ ಹಾನಿಕಾರಕ ವಸ್ತುಗಳನ್ನು ಸಂಗ್ರಹಿಸಿ ನಗರಸಭೆಯ ಮೂಲಕ ವಿಲೇವಾರಿ ಮಾಡುತ್ತಿದ್ದಾರೆ.
ನಿತ್ಯ ಬೆಳಗ್ಗೆ ನೂರಾರು ಜನರು ಹಳ್ಳದ ಸ್ವಚ್ಛತಾ ಕಾರ್ಯ ಮಾಡಲು ಆಗಮಿಸುತ್ತಿರುವುದು ಸಂಘಟಕರಿಗೆ ಹರ್ಷ ತಂದಿದೆ. ಶ್ರಮಾನುಭವ ಮಾಡಲು ಬರುವವರಿಗೆ ಸಂಘಟಕರು ಕೈ ಗ್ಲೌಸ್ ಸೇರಿ ಅಗತ್ಯ ಮಾಹಿತಿ ನೀಡುತ್ತಿದ್ದಾರೆ. ನಾಡಿನ ಖ್ಯಾತ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ ಹಳ್ಳದಲ್ಲಿಳಿದು ಕಸ, ಪ್ಲಾಸ್ಟಿಕ್ ಸಂಗ್ರಹ ಮಾಡುವ ಮೂಲಕ ಪ್ರೇರಣೆಯಾಗಿದ್ದಾರೆ.
ಹಳ್ಳಕ್ಕೆ ಹೊಂದಿಕೊಂಡಿರುವ ಮಹೆಬೂಬನಗರ ಸಂತೆ ಬಯಲು ಪ್ರದೇಶ, ಮುಜಾವರ ಕ್ಯಾಂಪ್, ಇಸ್ಲಾಂಪುರ, ಇಂದ್ರಾನಗರ, ಗುಂಡಮ್ಮ ಕ್ಯಾಂಪ್ ಜನವಸತಿ ಪ್ರದೇಶದಿಂದ ಚರಂಡಿಯ ನೀರು ನೇರವಾಗಿ ಹಳ್ಳ ಸೇರುತ್ತಿದ್ದು, ಇದರಿಂದ ಇಡೀ ಹಳ್ಳ ಗಬ್ಬೆದ್ದು ನಾರುತ್ತಿದೆ. ಸಂತೆ ಬಯಲು ಪ್ರದೇಶದಲ್ಲಿ ಉಳಿಯುವ ತರಕಾರಿ ಹಾಗೂ ಕೆಲ ಹೊಟೇಲ್ ಮಾಲೀಕರು ಉಳಿದ ಆಹಾರ ಪದಾರ್ಥ, ಮಾಂಸದ ತ್ಯಾಜ್ಯವನ್ನು ನೇರವಾಗಿ ಹಳ್ಳಕ್ಕೆ ಹಾಕುತ್ತಿದ್ದಾರೆ. ತ್ಯಾಜ್ಯ ಮತ್ತು ಚರಂಡಿ ನೀರು ಬರದಂತೆ ತಡೆಯುವಲ್ಲಿ ನಗರಸಭೆ ನೈರ್ಮಲ್ಯ ವಿಭಾಗ ಸಂಪೂರ್ಣ ವಿಫಲವಾಗಿದೆ.
ನಗರಸಭೆ ವೈಜ್ಞಾನಿಕವಾಗಿ ಹಳ್ಳವನ್ನು ಸರ್ವೇ ಮಾಡಿ ಗಡಿ ಗುರುತಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರಕಾರದ ಅಮೃತ ಸಿಟಿ ಯೋಜನೆಯಲ್ಲಿ ಹಳ್ಳದ ಸ್ವಚ್ಛತೆ ಮತ್ತು ಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು, ಇದು ಅವೈಜ್ಞಾನಿಕವಾಗಿದೆ. ಇಡೀ ಯೋಜನೆ ನಕ್ಷೆ ಬದಲಿಸುವಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಸೂಚನೆ ನೀಡಿದ್ದಾರೆ.
ಹಳ್ಳದ ನೀರು ಒಂದೇ ಕಡೆ ಹರಿದು ಹೋಗಲು ಸದ್ಯ ಹಳ್ಳದ ಮಧ್ಯೆ ಸಣ್ಣ ಪ್ರಮಾಣದ ಕಾಲುವೆ ನಿರ್ಮಿಸಲಾಗಿದ್ದು, ಮಳೆಗಾಲ ಆರಂಭಕ್ಕೂ ಮೊದಲು ಇಡೀ ಹಳ್ಳದಲ್ಲಿ ಪ್ಲಾಸ್ಟಿಕ್ ಸಮೇತ ಹೂಳನ್ನು ತೆಗೆಯುವ ಮೂಲಕ ಹಳ್ಳದಲ್ಲಿ ಸಾರ್ವಜನಿಕರು ನಡೆಸುತ್ತಿರುವ ಸ್ವಚ್ಛತಾ ಕಾರ್ಯಕ್ಕೆ ನೆರವಾಗಬೇಕು. ಮಳೆಗಾಲ ಆರಂಭಕ್ಕೂ ಮೊದಲು ಹಳ್ಳದ ಎರಡು ಭಾಗದಲ್ಲಿ ವಿವಿಧ ಬಗೆಯ ಗಿಡದ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಹಳ್ಳದ ಮೊದಲ ಸೌಂದರ್ಯಕ್ಕೆ ನಗರಸಭೆ ಕಾರಣವಾಗಬೇಕಿದೆ. ಹಳ್ಳದ ಸ್ವಚ್ಛತಾ ಕಾರ್ಯಕ್ಕೆ ನಗರದ ವ್ಯಾಪಾರಸ್ಥರು, ವೈದ್ಯರು, ರಾಜಕಾರಣಿಗಳು ಕನ್ನಡಪರ ಸಂಘಟನೆಗಳು ಮಠಾಧಿಧೀಶರು ವಿವಿಧ ಎನ್‌ಜಿಒ ಸಂಸ್ಥೆಗಳು ದಲಿತಪರ ಸಂಘಟನೆಗಳು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಸಹಕಾರ ನೀಡಬೇಕಾಗಿದೆ.
ಪ್ರತಿದಿನ ಹಳ್ಳದ ಸ್ವಚ್ಛತಾ ಶ್ರಮಾನುಭವ ಕಾರ್ಯ ಭರದಿಂದ ನಡೆಯುತ್ತಿದೆ. ಮಳೆ ಆರಂಭಕ್ಕೂ ಮುಂಚೆ ಇಡೀ ಹಳ್ಳದಲ್ಲಿ ಪ್ಲಾಸ್ಟಿಕ್ ಘನತ್ಯಾಜ್ಯ ಸ್ವಚ್ಛ ಮಾಡಲು ತೀರ್ಮಾನಿಸಲಾಗಿದೆ. ಹಳ್ಳಕ್ಕೆ ಹರಿದು ಬರುವ ಚರಂಡಿ ನೀರನ್ನು ತಡೆಯಲು ನಗರಸಭೆ ಕ್ರಮ ಕೈಗೊಳ್ಳಬೇಕಿದೆ. ಉಳಿದ ತರಕಾರಿ ಹಾಗೂ ಮಾಂಸ ಇತರೆ ತ್ಯಾಜ್ಯ ವಸ್ತುಗಳನ್ನು ಹಳ್ಳಕ್ಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ನಗರಸಭೆ ಸೂಕ್ತ ನಿಯಮ ಮಾಡಬೇಕಿದೆ. ಅಮೃತಸಿಟಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಅವವೈಜ್ಞಾನಿಕ ಅದನ್ನು ಸರಿಪಡಿಸುವಂತೆ ಖುದ್ದು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂಘ ಸಂಸ್ಥೆಗಳು ಜನಪ್ರತಿನಿಧಿಗಳು ಮತ್ತು ಧಾರ್ಮಿಕ ಮುಖಂಡರು ಸ್ವಚ್ಛತಾ ಕಾರ್ಯಕ್ಕೆ ಸಹಕಾರ ಮಾರ್ಗದರ್ಶನ ನೀಡಬೇಕು. ಈ ಕಾರ್ಯ ಪಕ್ಷಾತೀತವಾಗಿ ನಡೆಯುತ್ತಿದೆ.
•ಡಾ| ಶಿವಕುಮಾರ ಮಾಲೀಪಾಟೀಲ್, ಸ್ವಚ್ಛತಾ ಕಾರ್ಯದ ಸಂಚಾಲಕರು
ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.