ಚರಂಡಿ ತ್ಯಾಜ್ಯದಿಂದ ಬೇಸತ್ತ ಜನ
Team Udayavani, Dec 1, 2019, 4:33 PM IST
ಕೊಪ್ಪಳ: ನಗರದ ಹೃದಯ ಭಾಗದಲ್ಲಿನ ಕೇಂದ್ರಿಯ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆದಿದೆ. ಆದರೆ ಚರಂಡಿಯಲ್ಲಿದ್ದ ಟನ್ ಗಟ್ಟಲೆ ತ್ಯಾಜ್ಯವನ್ನು ತೆಗೆದು 4 ದಿನಗಳಿಂದ ಸ್ಥಳದಲ್ಲೇ ಬಿಡಲಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸೇರಿದಂತೆನಗರಸಭೆ ಅಧಿಕಾರಿಗಳೂ ಇತ್ತ ಗಮನ ಹರಿಸಿಲ್ಲ. ಈ ತ್ಯಾಜ್ಯ ಯಾರಿಗೂ ಬೇಡವಾಗಿದೆಯೇನೋ ಎನ್ನುವ ಭಾವನೆ ಎಲ್ಲರಲ್ಲೂ ಮೂಡಲಾರಂಭಿಸಿದೆ.
ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿನಗರಸಭೆ ಅಧಿಕಾರಿಗಳ ಮೇಲಿದೆ. ಆದರೆ ಚರಂಡಿಯಲ್ಲಿನ ತ್ಯಾಜ್ಯವನ್ನ ತೆಗೆದು ರಸ್ತೆಯ ಮೇಲೆ ಹಾಕಿದ್ದನ್ನು ಯಾರೂನೋಡುತ್ತಿಲ್ಲ. ನಿತ್ಯ ನಗರಕ್ಕೆ ಆಗಮಿಸುವ ಲಕ್ಷಾಂತರ ಜನರು ಇಲ್ಲಿನ ಕೊಳಕು ತ್ಯಾಜ್ಯನೋಡಿ ಮೂಗು ಮುಚ್ಚಿಕೊಂಡು ಮುಂದೆ ಸಾಗುವಂತ ಅನಿವಾರ್ಯತೆ ಇದೆ. ಈತ್ಯಾಜ್ಯವು ಕೇಂದ್ರಿಯ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವುದರಿಂದ ಅನ್ಯ ಊರುಗಳಿಂದ ಆಗಮಿಸುವವರು ಇದನ್ನು ನೋಡಿ ಏನಪ್ಪಾ ಇದು ಅವಸ್ಥೆ ಎಂದು ಗೊಣಗುತ್ತಲೇ ಮುಂದೆ ಹೋಗುತ್ತಿದ್ದಾರೆ. ಚರಂಡಿಯಲ್ಲಿನ ತ್ಯಾಜ್ಯವನ್ನು ತೆಗೆದು ಬೇರೆಡೆ ಸಾಗಾಟ ಮಾಡಲು ಅಬ್ಬಬ್ಟಾಎಂದರೆ ಒಂದು ದಿನ ಸಾಕು. ಆದರೆ ಕಳೆದ ಐದು ದಿನಗಳಿಂದಲೂ ಇದನ್ನು ಬೇರೆಡೆ ಸಾಗಾಟ ಮಾಡಿಲ್ಲ.
ತ್ಯಾಜ್ಯದಲ್ಲೇ ಹಣ್ಣಿನ ಅಂಗಡಿ: ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪಕ್ಕದಲ್ಲೇ ತ್ಯಾಜ್ಯವನ್ನು ಹಾಕಲಾಗಿದೆ. ಬಸ್ ನಿಲ್ದಾಣದುದ್ದಕ್ಕೂಹೂವಿನ ಅಂಗಡಿ, ಹಣ್ಣಿನ ಅಂಗಡಿ, ಚಹಾ ಅಂಗಡಿಗಳಿವೆ. ಚರಂಡಿಯನ್ನು ಕಿತ್ತು ಕೆಲಸ ಆರಂಭಿಸಿದ್ದರಿಂದ ರಸ್ತೆ ಪಕ್ಕದಲ್ಲಿದ್ದ ಎಲ್ಲಅಂಗಡಿಗಳನ್ನು ತ್ಯಾಜ್ಯ ಹಾಕಿದ ಸ್ಥಳದಲ್ಲೇ ಆರಂಭಿಸಲಾಗಿದೆ. ಹಣ್ಣಿನ ಅಂಗಡಿಗಳಂತೂಇದೇ ತ್ಯಾಜ್ಯದಲ್ಲೇ ವಹಿವಾಟು ನಡೆಸಿವೆ. ಇದೆಲ್ಲವೂ ಕಾಮಗಾರಿ ನಿರ್ವಹಿಸುವಗುತ್ತಿಗೆದಾರ, ಅಧಿ ಕಾರಿಗಳಿಗೆ ಗೊತ್ತಿದ್ದರೂಸುಮ್ಮನೆ ಇರುವುದು ಅಚ್ಚರಿ ಮೂಡಿಸಿದೆ.
ಹೆದ್ದಾರಿ ಅಧಿಕಾರಿಗಳು ತೆಗಿಬೇಕಂತೆ:ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೆದ್ದಾರಿ ಇಕ್ಕೆಲಗಳಲ್ಲಿಚರಂಡಿ ಕಾಮಗಾರಿ ನಡೆದಿದೆ. ಅವರೇ ಈ ಚರಂಡಿಯಿಂದ ತ್ಯಾಜ್ಯವನ್ನು ತೆರವು ಮಾಡಿಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಅವರೇ ಇದನ್ನು ತೆರವು ಮಾಡಿಲ್ಲ.ತ್ಯಾಜ್ಯ ಒಣಗಲು ಬಿಟ್ಟಿದ್ದಾರೆ ಎನ್ನುವಮಾತುಗಳು ಕೇಳಿ ಬರುತ್ತಿವೆ.
ನಗರಸಭೆಯ ಜವಾಬ್ದಾರಿ ಇಲ್ಲವೇ?: ಮಾತೆತ್ತಿದರೆ ನಗರವನ್ನು ಸ್ವಚ್ಛವಾಗಿಡಲಾಗುವುದು. ಯಾವುದೇ ರೋಗ, ರುಜಿನಗಳು ಬಾರದಂತೆ ಜನರುಜಾಗೃತಿ ವಹಿಸಬೇಕುಎಂದು ಮಿನಿ ಟಿಪ್ಪರ್ ಗಳಲ್ಲಿ ಮೈಕ್ ಮೂಲಕ ಜಾಗೃತಿಮೂಡಿಸುವನಗರಸಭೆಯು ಈ ವಿಷಯದಲ್ಲಿಸುಮ್ಮನಾಗಿದೆ. ಇನ್ನಾದರೂ ಕೂಡಲೇ ತ್ಯಾಜ್ಯವನ್ನು ಬೇರೆಡೆ ಸಾಗಾಟ ಮಾಡಿ ನಗರದ ಸೌಂದರ್ಯ ಕಾಪಾಡಬೇಕಿದೆ. ಇದರಿಂದ ರೋಗಗಳು ಹೆಚ್ಚುತ್ತವೆಯೇವಿನಃ ನಿಯಂತ್ರಣಕ್ಕೆ ಬರಲ್ಲ. ನಗರಸಭೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸ್ವಚ್ಛತೆ ಕಾಪಾಡಬೇಕಿದೆ.
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.