Kushtagi: ಸಾಕುದಾರರಿಗೆ ಬೆದರಿಸಿ, ಖಾರದ ಪುಡಿ ಎರಚಿ, ಕೈ-ಕಾಲು ಕಟ್ಟಿ 30 ಹಂದಿಗಳ ಕಳವು
Team Udayavani, Jan 9, 2024, 11:44 AM IST
ಕುಷ್ಟಗಿ: ತಾಲೂಕಿನ ವಣಗೇರಾ ಗ್ರಾಮದ ಹಂದಿ ಸಾಕಾಣಿಕ ಘಟಕದಲ್ಲಿ ದುಷ್ಕರ್ಮಿಗಳು ಸಾಕಾಣಿಕದಾರನಿಗೆ ಚಾಕು ತೋರಿಸಿ, ಖಾರದ ಪುಡಿ ಎರಚಿ, ಕೈ ಕಾಲು ಕಟ್ಟಿ ಹಾಕಿ 30 ಹಂದಿಗಳನ್ನು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ವಣಗೇರಾ ಗ್ರಾಮದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ ರವಿಕುಮಾರ ಭಜಂತ್ರಿ ಅವರಿಗೆ ಸೇರಿದ ಹಂದಿ ಸಾಕಾಣಿಕ ಘಟಕದಲ್ಲಿ 31 ಮಾಂಸದ ಹಂದಿ ಸಾಕಿ ಸ್ವ ಉದ್ಯೋಗ ಆರಂಭಿಸಿದ್ದರು.
ಕಳೆದ ರವಿವಾರ ರಾತ್ರಿ ನಾಲ್ಕೈದು ಜನ ದುಷ್ಕರ್ಮಿಗಳು, ಸಾಕಾಣಿಕ ಘಟಕದಲ್ಲಿ ಮಲಗಿದ್ದ ರವಿಕುಮಾರ ಭಜಂತ್ರಿ ಹಾಗೂ ಅವರ ಸಂಬಂದಿಕರಿಗೆ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.
ಇಬ್ಬರ ಕಣ್ಣಿಗೂ ಖಾರಪುಡಿ ಎರಚಿ ಹಗ್ಗದಿಂದ ಕಟ್ಟಿಹಾಕಿ ಕೂಡಿ ಹಾಕಿದ್ದಾರೆ. ನಂತರ ಗಾಯಾವಾಗಿದ್ದ ಒಂದು ಹಂದಿಯನ್ನು ಮಾತ್ರ ಬಿಟ್ಟು ಉಳಿದ 30 ಹಂದಿಗಳನ್ನು ಒಂದೊಂದೆ ವಾಹನದಲ್ಲಿ ತರಾತುರಿಯಲ್ಲಿ ಹೇರಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಾಕು ಹಂದಿಗಳ ಮೌಲ್ಯ 6 ರಿಂದ 7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ದುಷ್ಕರ್ಮಿಗಳು ಹಂದಿಗಳನ್ನು ಕಳವು ಮಾಡುವ ಮುನ್ನ ಅಲ್ಲಿದ್ದ ನಾಯಿಗಳು ಬೊಗಳದಂತೆ ಮಾಂಸದ ಆಸೆ ತೋರಿಸಿ ಕಳ್ಳತನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಹೆಚ್ಚುವರಿ ಎಸ್ಪಿ ಹೇಮಂತ್, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಮುದ್ದುರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇವರು ವೃತ್ತಿ ನಿರತ ಹಂದಿ ಕಳ್ಳರಾಗಿರುವುದಾಗಿ ಶಂಕಿಸಲಾಗಿದೆ. ಇಂತಹುದೇ ಪ್ರಕರಣ ಕೊಪ್ಪಳ ಜಿಲ್ಲೆಯ ಹುಣಸಿಹಾಳದಲ್ಲಿ ನಡೆದಿತ್ತು.
ವಣಗೇರಾ ಹಂದಿ ಕಳವು ಪ್ರಕರಣದ ಬೆನ್ನಲ್ಲೇ ಹೆದ್ದಾರಿ ಟೋಲ್ ಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದೆ. ಚಾಲಾಕಿ ಕಳ್ಳರು ಟೋಲ್ ಮೂಲಕ ಸಾಗದೇ ಟೋಲ್ ತಪ್ಪಿಸಿ ಹೋಗಿರಬಹುದು ಎನ್ನಲಾಗುತ್ತಿದೆ. ಕುಷ್ಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂದಿ ಕಳ್ಳರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.