ಪೊಲೀಸ್ ದಾಳಿ: 240 ಕ್ವಿಂಟಲ್ ಅಕ್ಕಿ ವಶಕ್ಕೆ
Team Udayavani, Jul 7, 2019, 4:21 PM IST
ಕುಷ್ಟಗಿ: ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 240 ಕ್ವಿಂಟಲ್ ಅಕ್ಕಿಯನ್ನು ಲಾರಿ ಸಮೇತವಾಗಿ ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕರಿಬ್ಬರು ಹಾಗೂ ಮಹಿಳೆ ಸೇರಿದಂತೆ 8 ಜನರ ವಿರುದ್ಧ ದೂರು ದಾಖಲಾಗಿದೆ.
ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುವ ಖಚಿತ ಮಾಹಿತಿ ಮೇರೆಗೆ ಕುಷ್ಟಗಿ ಪೊಲೀಸರು, ರಾಷ್ಟ್ರೀಯ ಹೆದ್ದಾರಿ-50 ಕುರಬನಾಳ ಕ್ರಾಸ್ ನಲ್ಲಿ ಲಾರಿ ವಶಕ್ಕೆ ತೆಗೆದುಕೊಂಡರು. ಲಾರಿ ಚಾಲಕರಾದ ತಮಿಳುನಾಡು ಸೇಲಂ ಜಿಲ್ಲೆಯ ಶೇಖರ್ ಆನಂದನ್, ಶಿವಕುಮಾರ ಮಾದಯ್ಯನ್ ವಶಕ್ಕೆ ತೆಗೆದುಕೊಂಡರು.
ಇಲ್ಲಿನ ಆಹಾರ ಇಲಾಖೆ ಶಿರಸ್ತೇದಾರ ರಾಜು ಫಿರಂಗಿ ಹಾಗೂ ಕೆಎಫ್‌ಎಸ್‌ಸಿ ಉಗ್ರಾಣ ವ್ಯವಸ್ಥಾಪಕ ಕಾಂತೇಶ ಅಳಲಗೇರಿ ಅವರು, ಪಡಿತರ ಕಾರ್ಡ್‌ಗೆ ವಿತರಿಸುವ ಅಕ್ಕಿ ಎಂದು ಖಾತ್ರಿ ಪಡಿಸಿದರು. ಲಾರಿಯಲ್ಲಿ 40ರಿಂದ 50 ಕೆಜಿಯ 500 ಅಕ್ಕಿಚೀಲಗಳಿದ್ದವು. ಅಂದಾಜು ಮೌಲ್ಯ 5.76 ಲಕ್ಷ ರೂ. ಅಂದಾಜಿಸಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆ 1955 ಕಲಂ 3 ಮತ್ತು 7ರನ್ವಯ ಪ್ರಕರಣ ದಾಖಲಾಗಿದೆ. ಲಾರಿ ಚಾಲಕರಾದ ಶಿವಕುಮಾರ, ಶೇಖರ್ ಆನಂದನ್, ಮಹಾರಾಷ್ಟ್ರದ ಸೊಲ್ಲಾಪೂರ ಜಿಲ್ಲೆಯ ಬ್ರೋಕರ್ ರಾಮು ಕತ್ತಿ, ಬಳ್ಳಾರಿ ಕುಂಟ ಮಂಜು ಹಾಗೂ ಸುರೇಶಗೌಡ, ತಮಿಳುನಾಡು ಮೂಲದ ವೆನ್ನಿಲ್ಲಾ ಸೆಲ್ವರಾಜ್ ಹಾಗೂ ಸೊಲ್ಲಾಪೂರ ಮೂಲದ ಇನ್ನಿಬ್ಬರು ಸೇರಿದಂತೆ 8 ಜನರ ವಿರುದ್ಧ ಕುಷ್ಟಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.