ಯಾವ ಪಕ್ಷದ ಬೆಂಬಲಿಗರು ಹೆಚ್ಚು?

ಗೆದ್ದವರೆಲ್ಲ ನಮ್ಮವರೆನ್ನುವ ಮುಖಂಡರು,¬78 ಸ್ತ್ರೀಯರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ

Team Udayavani, Jan 4, 2021, 3:49 PM IST

MANDYA-TDY-1

ಕೊಪ್ಪಳ: ಗ್ರಾಪಂ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕೈ-ಕಮಲ ನಾಯಕರುನಮ್ಮ ಬೆಂಬಲಿತರೇ ಹೆಚ್ಚು ಸ್ಥಾನ ಗೆದ್ದಿದ್ದಾರೆ.149 ಗ್ರಾಪಂ ಪೈಕಿ 100ಕ್ಕೂ ಹೆಚ್ಚು ಗ್ರಾಪಂಗಳಲ್ಲಿನಮ್ಮ ಬೆಂಬಲಿತರೇ ಅಧಿಕಾರದ ಗದ್ದುಗೆಹಿಡಿಯಲಿದ್ದಾರೆಂದು ಬೀಗುತ್ತಿದ್ದಾರೆ. ಸರ್ಕಾರವೂ ಈಗಾಗಲೇ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಪುರುಷಹಾಗೂ ಮಹಿಳಾಮೀಸಲು ಅಂಕಿಅಂಶದ ಮಾರ್ಗಸೂಚಿ ಪ್ರಕಟಿಸಿದೆ.

ರಾಜ್ಯ ಸರ್ಕಾರಗ್ರಾಪಂಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದಕುರಿತಂತೆ ಮಾರ್ಗಸೂಚಿಯ ಮೀಸಲುಪ್ರಕಟಿಸಿದೆ. ಜಿಲ್ಲೆಯಲ್ಲಿ ಒಟ್ಟು 153 ಗ್ರಾಪಂಗಳಿವೆ.ಆದರೆ ನಾಲ್ಕು ಗ್ರಾಪಂಗೆ ಚುನಾವಣೆ ನಡೆದಿಲ್ಲ.ಪ್ರಸ್ತುತ 149 ಗ್ರಾಮ ಪಂಚಾಯಿತಿಗಳ 2696ಸದಸ್ಯ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿವೆ.ಸದಸ್ಯರು ಗೆಲುವು ಸಾ ಧಿಸುತ್ತಿದ್ದಂತೆ ಕಾಂಗ್ರೆಸ್‌ಹಾಗೂ ಬಿಜೆಪಿ ಮುಖಂಡರು ಗೆದ್ದವರು ನಮ್ಮಬೆಂಬಲಿತರು ಎಂದು ಬೀಗುತ್ತಿದ್ದಾರೆ.ಇನ್ನೂ ಸರ್ಕಾರವು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದೆ.

ಕೊಪ್ಪಳ ತಾಲೂಕಿನಲ್ಲಿ ಒಟ್ಟು 38 ಗ್ರಾಪಂಗಳಿವೆ.ಇಲ್ಲಿ 19 ಗ್ರಾಪಂಗಳಲ್ಲಿ ಮಹಿಳೆಯರಿಗೆ ಅಧ್ಯಕ್ಷಅಥವಾ ಉಪಾಧ್ಯಕ್ಷ ಸ್ಥಾನ ಸಿಗಲಿದೆ. ಇವುಗಳಲ್ಲೇ05 ಗ್ರಾಪಂಗಳಲ್ಲಿ ಎಸ್‌ಸಿ ಮಹಿಳೆಯರಿಗೆ, 3ಗ್ರಾಪಂನಲ್ಲಿ ಎಸ್‌ಟಿ ಮಹಿಳೆ, 2 ಗ್ರಾಪಂನಲ್ಲಿಬಿಸಿಎಂ(ಎ) ಮಹಿಳೆ, 19 ಗ್ರಾಪಂನಲ್ಲಿ ಸಾಮಾನ್ಯಮಹಿಳೆ ಅಧಿಕಾರದ ಗದ್ದುಗೆ ಏರಲಿದ್ದಾರೆ. ಕುಷ್ಟಗಿ ತಾಲೂಕಿನ 36 ಗ್ರಾಪಂಗಳಲ್ಲಿ 18 ಮಹಿಳೆಯರಿಗೆ ಮೀಸಲಿದ್ದು, ಎಸ್‌ಸಿ-3, ಎಸ್‌ಟಿ-3, ಬಿಸಿಎಂ(ಎ) 02, ಬಿಸಿಎಂ(ಬ)01,ಸಾಮಾನ್ಯ 9 ಸ್ಥಾನ ಮೀಸಲಿರಿಸಿದೆ. ಇನ್ನೂಯಲಬುರ್ಗಾ ತಾಲೂಕಿನಲ್ಲಿ ಒಟ್ಟು 22 ಗ್ರಾಪಂಗಳಿದ್ದು ಇವುಗಳಲ್ಲಿ 11 ಗ್ರಾಪಂ ವಿವಿಧ ವರ್ಗದ ಮಹಿಳೆಯರಿಗೆ ಮೀಸಲು ನಿಗ ದಿ ಮಾಡಿದೆ.

ಈ ಪೈಕಿ ಎಸ್‌ಸಿ-2, ಎಸ್‌ಟಿ-2, ಬಿಸಿಎಂಅ-2,ಬಿಸಿಎಂ ವರ್ಗಕ್ಕೆ ಮೀಸಲಿವೆ. ಸಾಮಾನ್ಯ-5 ಸ್ಥಾನಮೀಸಲಿವೆ. ಇನ್ನೂ ಗಂಗಾವತಿ ತಾಲೂಕಿನ 18ಗ್ರಾಪಂಗಳಲ್ಲಿ 9 ವಿವಿಧ ವರ್ಗದ ಮಹಿಳೆಯರಿಗೆ ಮೀಸಲಾಗಿದ್ದು, ಈ ಪೈಕಿ ಎಸ್‌ಸಿ-3, ಎಸ್‌ಟಿ-2,ಬಿಸಿಎಂಎ-1, ಸಾಮಾನ್ಯ 3 ಸ್ಥಾನ ಮೀಸಲಿವೆ.ಕುಕನೂರು ತಾಲೂಕಿನ 15 ಗ್ರಾಪಂನಲ್ಲಿ 8 ಮಹಿಳಾಮೀಸಲಿದ್ದು, ಈ ಪೈಕಿ ಎಸ್‌ಸಿ-2, ಎಸ್‌ಟಿ-1,ಬಿಸಿಎಂಎ-2, ಸಾಮಾನ್ಯ-3 ಸ್ಥಾನ ಮೀಸಲಿವೆ.ಇನ್ನೂ ಕಾರಟಗಿ ತಾಲೂಕಿನ 13 ಗ್ರಾಪಂಗಳಲ್ಲಿ ಒಟ್ಟು 7 ವಿವಿಧ ವರ್ಗಗಳಿಗೆ ಮಹಿಳಾ ಮೀಸಲಿವೆ.

ಎಸ್‌ಸಿ-2, ಎಸ್ಟಿ-1, ಬಿಸಿಎಂಎ-1, ಸಾಮಾನ್ಯ-3 ಸ್ಥಾನ ಮೀಸಲಿವೆ. ಇನ್ನೂ ಕನಕಗಿರಿ ತಾಲೂಕಿನ 11 ಗ್ರಾಪಂನಲ್ಲಿ 6 ಮಹಿಳಾ ಮೀಸಲಿದ್ದು, ಈ ಪೈಕಿ ಎಸ್‌ಸಿ-1, ಎಸ್‌ಟಿ-2, ಸಾಮಾನ್ಯ-03 ಸ್ಥಾನ ಮಹಿಳೆಯರಿಗೆ ಮೀಸಲಾಗಿವೆ. ಜಿಲ್ಲಾದ್ಯಂತ153 ಗ್ರಾಪಂಗಳಿವೆ. ಪ್ರಸ್ತುತ 149 ಗ್ರಾಪಂಗಳ2696 ಸದಸ್ಯ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದೆ. 153 ಗ್ರಾಪಂಗಳ ಪೈಕಿ 78 ವಿವಿಧ ವರ್ಗದ ನಾರಿಯರಿಗೆ ಅಧ್ಯಕ್ಷ-ಉಪಾಧ್ಯಕ್ಷರಾಗಲುಅವಕಾಶ ಸಿಕ್ಕಿದೆ. ಒಟ್ಟಾರೆ ಎಸ್‌ಸಿ ಮಹಿಳೆಯರಿಗೆ 18 ಸ್ಥಾನ ಮೀಸಲು, ಎಸ್‌ಟಿ ಮಹಿಳೆಯರಿಗೆ 14 ಸ್ಥಾನ, ಬಿಸಿಎಂ ಅ ವರ್ಗದ ಮಹಿಳೆಯರಿಗೆ10 ಸ್ಥಾನ, ಬಿಸಿಎಂ ಬ ವರ್ಗಕ್ಕೆ 1 ಸ್ಥಾನ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ 35 ಸ್ಥಾನಗಳು ಮೀಸಲಾಗಿವೆ.

ಜಿಲ್ಲೆಯಲ್ಲಿ ಈಚೆಗೆ ನಡೆದ ಗ್ರಾಪಂಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 1779 ಸದಸ್ಯರು ಗೆಲುವು ಸಾಧಿಸಿದ್ದಾರೆ. ನಾವು ಎಲ್ಲ ನಿಖರ ಅಂಕಿ-ಅಂಶವನ್ನು ಪಡೆದಿದ್ದೇವೆ. ಕಳೆದಬಾರಿಗಿಂತ ಈ ಬಾರಿ ಹೆಚ್ಚು ನಮ್ಮ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಮೋದಿ ಹಾಗೂ ಬಿಎಸ್‌ವೈ ಅವರ ಆಡಳಿತದಿಂದಲೇ ಇಷ್ಟು ಸ್ಥಾನಗೆಲ್ಲಲು ಸಾಧ್ಯವಾಗಲಿದೆ. ನಾವು 100ಕ್ಕೂ ಹೆಚ್ಚು ಗ್ರಾಪಂನಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿದ್ದೇವೆ. ದೊಡ್ಡನಗೌಡ ಪಾಟೀಲ್‌, ಬಿಜೆಪಿ ಜಿಲ್ಲಾಧ್ಯಕ್ಷ

ಬಿಜೆಪಿ ನಾಯಕರು ಸುಳ್ಳುಹೇಳುತ್ತಿದ್ದಾರೆ. ನಾವೇ ಹೆಚ್ಚುಸ್ಥಾನಗಳನ್ನು ಗೆದ್ದಿದ್ದೇವೆ. ನಾವು 100ಕ್ಕೂಹೆಚ್ಚು ಗ್ರಾಪಂನಲ್ಲಿ ಅಧಿಕಾರದ ಗದ್ದುಗೆಹಿಡಿಯಲಿದ್ದೇವೆ. ಬಿಜೆಪಿಯವರು ಸುಳ್ಳುಹೇಳುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್‌ದೇಶಕ್ಕಾಗಿ ಮಾಡಿದ ಆಸ್ತಿಗಳನ್ನೆಲ್ಲಾ ಬಿಜೆಪಿ ಮಾರುತ್ತಿದೆ. ಅಭಿವೃದ್ಧಿಯಲ್ಲೂಅವರು ಸುಳ್ಳು ಹೇಳುತ್ತಿದ್ದಾರೆ. ಶಿವರಾಜ ತಂಗಡಗಿ,ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಇಬ್ಬರದ್ದೂ 100ಕ್ಕೂ ಹೆಚ್ಚು ಗ್ರಾಪಂ :

ಗ್ರಾಪಂ ಚುನಾವಣೆ ಫಲಿತಾಂಶವು ಪ್ರಕಟವಾದ ಬೆನ್ನಲ್ಲೇ ಜಿಲ್ಲೆಯ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ನಮ್ಮ ಬೆಂಬಲಿತರು ಹೆಚ್ಚು ಗೆಲುವು ಕಂಡಿದ್ದಾರೆ. ಬರೊಬ್ಬರಿ 100ಕ್ಕೂ ಹೆಚ್ಚು ಗ್ರಾಪಂನಲ್ಲಿ ನಮ್ಮ ಪಕ್ಷದ ಬೆಂಬಲಿತರು ಅಧಿಕಾರದ ಗದ್ದುಗೆ ಹಿಡಿಯುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳುತ್ತಿದ್ದಾರೆ. ಇಬ್ಬರೂ ನಾಯಕರೂ ಹೆಚ್ಚೆಚ್ಚು ಅಂಕಿ-ಅಂಶಗಳನ್ನ ಪ್ರಸ್ತಾಪಿಸುತ್ತಿರುವುದು ಇದರಲ್ಲಿ ಯಾರ ಅಂಕಿ-ಅಂಶ ನಿಖರ ಎನ್ನುವುದೇ ಎಲ್ಲರಿಗೂ ಗೊಂದಲವಾಗಿದೆ.

 

ದತ್ತು ಕಮ್ಮಾರ

ಟಾಪ್ ನ್ಯೂಸ್

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.