![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 2, 2022, 12:50 PM IST
ಕುಷ್ಟಗಿ: ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಮುಳ್ಳು ಕಂಟಿ ಕಾರಣದಿಂದ ತೋಪಲಕಟ್ಟಿ ಗ್ರಾಮಕ್ಕೆ ಬಸ್ ಬಾರದೇ ಇರುವ ಕಾರಣ ವಿದ್ಯಾರ್ಥಿಗಳು ತರಗತಿ ತಪ್ಪಿಸಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ತೋಪಲಕಟ್ಟಿ ಗ್ರಾಮದಿಂದ ತಳವಗೇರಾ ಗ್ರಾಮಕ್ಕೆ 64 ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬರುತ್ತಿದ್ದು, ಸದರಿ ಒಳ ಮಾರ್ಗದ ರಸ್ತೆ ಬದಿಯ ಮುಳ್ಳು ಕಂಟಿ ಬೆಳೆದಿದ್ದರಿಂದ ಬಸ್ ಬರುವುದು ನಿಲ್ಲಿಸಿದೆ. ಸಂಬಂಧಿಸಿ ಗ್ರಾ.ಪಂ. ಹಾಗೂ ಪಿಡಬ್ಲ್ಯೂಡಿ ಇಲಾಖೆ ರಸ್ತೆಬದಿಯ ಮುಳ್ಳುಕಂಟಿ ತೆರವುಗೊಳಿಸಿಲ್ಲ.
ಇದೇ ಕಾರಣದಿಂದ ಕುಷ್ಟಗಿ, ಬಿಜಕಲ್, ಬೋದೂರು, ತಾಂಡ, ತೋಪಲಕಟ್ಟಿ, ತಳವಗೇರಾ, ಕುಷ್ಟಗಿ ಗೆ ಬರುವ ಬಸ್ಸು ಕೆಲ ದಿನಗಳಿಂದ ಬಿಜಕಲ್ ಗೆ ಬಂದು ವಾಪಸ್ಸು ಕುಷ್ಟಗಿಗೆ ಹೋಗುತ್ತಿದೆ. ಈ ಕಾರಣದಿಂದ ಬಸ್ ಬಾರದೇ ಇರುವುದು ಇತ್ತ ಮುಳ್ಳು ಕಂಟಿ ತೆರವುಗೊಳಿಸದೇ ಇರುವುದು ಸಮಸ್ಯೆಯಾಗಿದೆ. ರಸ್ತೆಯ ಬದಿಯ ಮುಳ್ಳು ಕಂಟಿ ತೆರವುಗೊಳಿಸುವರೆಗೂ ಬಸ್ ಬರಲ್ಲ ಎನ್ನುವುದು ಗೊತ್ತಾಗಿದೆ.
ಈ ಬೆಳವಣಿಗೆಯ ಹಿನ್ನೆಲೆ ವಿದ್ಯಾರ್ಥಿಗಳು ಖಾಸಗಿ ವಾಹನ ನೆಚ್ಚಿಕೊಳ್ಳುವಂತಾಗಿದ್ದು, ಕಾಲ್ನಡಿಗೆ ಮೂಲಕ ಶಾಲೆಗೆ ಬಂದು ಹೋಗುವುದು ಅನಿವಾರ್ಯವಾಗಿದೆ. ಮಳೆಗಾಲದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಮುಳ್ಳಿನ ಕಂಟಿ ತೆರವುಗೊಳಿಸಿ ಸುಗಮ ಸಂಚಾರದ ಬಸ್ ಸೇವೆಯ ಕ್ರಮಕ್ಕೆ ಗ್ರಾಮ ಪಂಚಾಯತಿ ಸದಸ್ಯರಾದ ಕನಕನಗೌಡ ಪೋಲಿಸ್ ಪಾಟೀಲ, ಮಹಾಂತಗೌಡ ಪೊಲೀಸ್ ಪಾಟೀಲ, ಚಂದಪ್ಪ ಜಂಗಣ್ಣಿ, ಶೇಖಪ್ಪ ಗುಗ್ಗರಿ ಬಸವಂತಪ್ಪ ಉಪ್ನಾಳ, ಸಂಕಣ್ಣ ಹುಲಿಕೇರಿ ಆಗ್ರಹಿಸಿದ್ದಾರೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.