ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ
Team Udayavani, Jan 26, 2020, 4:37 PM IST
ತಾವರಗೇರಾ: ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ ಕನಸು ನನಸಾಗಬೇಕಾದರೆ ಗ್ರಾಮಗಳು ಅಭಿವೃದ್ಧಿಯಾಗಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಹೇಳಿದರು.
ಸಮೀಪದ ಲಿಂಗದಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯ ಅನುದಾನ ಹಾಗೂ ಗ್ರಾಪಂನ 14ನೇ ಹಣಕಾಸು ಅನುದಾನದಲ್ಲಿ ಅಂದಾಜು 11.20 ಲಕ್ಷ ರೂ.ಗಳಲ್ಲಿ ನಿರ್ಮಿಸಿದ ಗ್ರಾಪಂ ನೂತನ ಕಟ್ಟಡದ ಉದ್ಘಾಟನೆ ಮತ್ತು ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು. ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಆದ್ದರಿಂದ 2015ರಲ್ಲಿ ರಾಜ್ಯದಲ್ಲಿ 500ಕ್ಕೂ ಹೆಚ್ಚು ನೂತನ ಗ್ರಾಮ ಪಂಚಾಯಿತಿಗಳು ಮಂಜೂರಾದವು. ಅವುಗಳಲ್ಲಿ ಕುಷ್ಟಗಿ ತಾಲೂಕಿಗೆ 9 ನೂತನ ಗ್ರಾಪಂಗಳಲ್ಲಿ ಲಿಂಗದಹಳ್ಳಿ ಗ್ರಾಪಂ ಸಹ ಒಂದಾಗಿದೆ. 5 ವರ್ಷದಿಂದ ಉತ್ತಮ ಸೇವೆ ಮಾಡುತ್ತಾ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.
ವಿವಿಧ ಸೌಲಭ್ಯಗಳನ್ನು ಗ್ರಾಪಂನವರು ಒದಗಿಸಿಕೊಡಬೇಕು. ಪಹಣಿ ಪತ್ರಿಕೆಗಳನ್ನು ಗ್ರಾಪಂನ ಕಚೇರಿಯಲ್ಲಿ ನೀಡುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.
ಪ್ರತಿಯೊಬ್ಬರು ಮನೆಯನ್ನು ನಿರ್ಮಿಸಿಕೊಳ್ಳುವಾಗ ಶೌಚಾಲಯ ಕಡ್ಡಾಯವಾಗಿ ಇರಬೇಕು. ತಾಲೂಕಿನ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ತಾಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರಿಗಾಗಿ ಸರ್ಕಾರ ಹಣವನ್ನು ಮೀಸಲಿಟ್ಟಿದೆ. ನೀರಿನ ಸಮಸ್ಯೆ ಆಗದಂತೆ ಗ್ರಾಪಂನವರು ನೋಡಿಕೊಳ್ಳಬೇಕು ಎಂದು ಹೇಳಿದರು.
ಪಿಡಿಒ ಮಲ್ಲಿಕಾರ್ಜುನ ಮಳ್ಳಿಮಠ ಪ್ರಾಸ್ತಾವಿಕಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಯಮನಮ್ಮಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಹನುಮಗೌಡ ಪೊಲೀಸ್‌ಪಾಟೀಲ್, ತಾಪಂ ಸದಸ್ಯೆ ಹನುಮವ್ವ ಹುನಗುಂದ, ಗ್ರಾಪಂಉಪಾಧ್ಯಕ್ಷೆ ಮಲ್ಲಮ್ಮ ಕಲ್ಲಭಾವಿ, ಗ್ರಾಪಂ ಸದಸ್ಯ ಲಿಂಗರಾಜ ಕಲ್ಲಬಾವಿ, ಶರಣಪ್ಪ ಹೊನಗಡ್ಡಿ, ದುರಗಪ್ಪ ಕಡಗದ, ದುರಗಮ್ಮ ಸಂಕನಾಳ, ಪಾಲಾಕ್ಷಮ್ಮ, ನಾಗರಾಜ, ಚೌಡಪ್ಪ ಹುನಗುಂದ, ಸಣ್ಣೆಪ್ಪತಳವಾರ, ದುರಗಮ್ಮ ಬಂಗ್ಲೆàರ್, ಯಮನೂರಪ್ಪ ಗೌಡ್ರು, ಶ್ಯಾಮಣ್ಣ ಲಿಂಗದಹಳ್ಳಿ, ಗುರಪ್ಪ ನಾಯಕ, ಹನಮಂತರಾಯ, ವಕೀಲ ಮರಿಯಪ್ಪ ಸೇರಿದಂತೆ ಇನ್ನಿತರರಿದ್ದರು. ಸಹಿಪ್ರಾ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ನಿಂಗರಾಜ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.