ಕಾಂಗ್ರೆಸ್ ಸುಸ್ಥಿರ ಆಡಳಿತದಿಂದ ದೇಶ ಪ್ರಗತಿ
ಸ್ವಾತಂತ್ರ್ಯಕ್ಕೆ ಬಿಜೆಪಿಯ ಕೊಡುಗೆ ಏನೂ ಇಲ್ಲ; ಕಾಂಗ್ರೆಸ್ ಮತ ಗಳಿಕೆ ಕಡಿಮೆಯಾಗಿಲ್ಲ: ರಾಯರಡ್ಡಿ ; ಕಿವಿ ಕಚ್ಚುವವರಿದ್ದಾರೆ ಜಾಗೃತಿ ವಹಿಸಿ
Team Udayavani, Sep 6, 2022, 4:41 PM IST
ಕೊಪ್ಪಳ: ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಸುಸ್ಥಿತರ ಆಡಳಿತ ನೀಡಿದ್ದರಿಂದಲೇ ದೇಶ ಪ್ರಗತಿ ಕಾಣಲು ಸಾಧ್ಯವಾಯಿತು. ಡ್ಯಾಮ್‌ಗಳನ್ನು ಕಟ್ಟಿದ್ದೇವೆ. ಆಸ್ಪತ್ರೆ ನಿರ್ಮಿಸಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದವರು ತ್ಯಾಗ, ಬಲಿದಾನ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದರು.
ನಗರದದ ಶಿವಶಾಂತ ಮಂಗಲ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ 56 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಉಳಿದ ಅವಧಿ ಬೇರೆಯವರು ಆಳ್ವಿಕೆ ನಡೆಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಶಾಲೆಗಳನ್ನು ಕಟ್ಟಿದ್ದು ಯಾರು? ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಟ್ಟಿದ್ದು ಯಾರು? 2 ಸಾವಿರ ಜಲಾಶಯಗಳನ್ನು ನಿರ್ಮಿಸಿದ್ದು ಯಾರು ಎನ್ನುವುದನ್ನು ಹೇಳಲಿ. ಆಗ ಮೋದಿ ಅವರು ಬಂದು ಇವುಗಳೆಲ್ಲವನ್ನು ನಿರ್ಮಾಣ ಮಾಡಿದ್ದರಾ? 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ಕೇಳುತ್ತಿದೆ. 56 ವರ್ಷದ ಆಳ್ವಿಕೆಯಲ್ಲಿ ನಾವು ಮಾಡಿದ್ದು ಅವರಿಗೆ ಕಾಣುತ್ತಿಲ್ಲವೇ ಹಿಂದೆ ಮಾಡಿದ ಡ್ಯಾಂಗಳನ್ನು ಮೋದಿ ಅವರು ನಿರ್ಮಿಸಿದ್ದರೇ ಎಂದು ವಾಗ್ಧಾಳಿ ಮಾಡಿದರು.
ಸ್ವಾತಂತ್ರ್ಯಕ್ಕೆ ಬಿಜೆಪಿ ಕೊಡುಗೆ ಏನಿದೆ ಎನ್ನುವುದನ್ನು ಹೇಳಲಿ. ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಹೋರಾಡಿಲ್ಲ. ವಿವಾದಿತ ವೀರ್ ಸಾರ್ವಕರ್ ಮೆರೆಸಲು ಬಿಜೆಪಿ ಮುಂದಾಗುತ್ತಿದೆ. ಅವರ ರಥ ಯಾತ್ರೆ ಮಾಡುತ್ತಾರೆ. ಆದರೆ, ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರ ನಾಯಕರು ಇವರಿಗೆ ಏಕೆ ನೆನಪಾಗುತ್ತಿಲ್ಲ ಎಂದರು. ಬಿಜೆಪಿಯವರು ಅಧಿ ಕಾರಕ್ಕೆ ಬರುವ ಮುನ್ನ ಅಚ್ಚೇ ದಿನ್ ಎಂದಿದ್ದರು. ಅವರು ಅಧಿಕಾರಕ್ಕೆ ಬಂದ ಮೇಲೆ ಕೆಟ್ಟ ದಿನಗಳೇ ಬಂದಿವೆ. ಹಾಲು, ಮೋಸರು, ಮಜ್ಜಿಗೆ, ಮಂಡಕ್ಕಿ ಸೇರಿದಂತೆ ಎಲ್ಲದಕ್ಕೂ ತೆರಿಗೆ ಹಾಕಿ ಜನರನ್ನು ಶೋಷಿಸುತ್ತಿದ್ದಾರೆ. ಇದೆಲ್ಲವನ್ನು ನೋಡಿದರೇ ಆ ನಮ್ಮ ಅವಧಿಯ ಕೆಟ್ಟದಿನಗಳೇ ಮರಳಿ ಕೊಟ್ಟುಬಿಡಿ ಎನ್ನುವಂತಾಗಿದೆ ಎಂದು ವ್ಯಂಗ ವಾಡಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ 169 ಭರವಸೆಗಳ ಪೈಕಿ 158 ಭರವಸೆ ಈಡೇರಿಸಿದ್ದೇವೆ. ಬಿಜೆಪಿ ಏಷ್ಟು ಭರವಸೆ ಈಡೇರಿಸಿದೆ. ಅಂಬಾನಿ, ಅದಾನಿಯೇ ಇವರಿಗೆ ಎಲ್ಲಾ. ಜನ ಸಾಮಾನ್ಯರ ಸಮಸ್ಯೆ ಇವರಿಗೆ ಕಾಣುತ್ತಿಲ್ಲ. ನಮ್ಮ ಅವಧಿಯಲ್ಲಿ 15 ಲಕ್ಷ ಮನೆ ಕಟ್ಟಿದ್ದೇವೆ. ಆದರೆ ಇವರಿಂದ ಒಂದೇ ಒಂದು ಮನೆ ಕಟ್ಟಲು ಆಗಿಲ್ಲ ಎಂದರು.
ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ. 2ರಷ್ಟು ಮತಗಳು ಅಧಿಕ ಬಂದಿವೆ. ಕಾಂಗ್ರೆಸ್ ನೆಲೆ ಇಲ್ಲ ಎನ್ನುವವರು ಒಮ್ಮೆ ದಾಖಲೆಗಳನ್ನು ನೋಡಿ ಮಾತನಾಡಲಿ. ವಾಜಪೇಯಿ ಅವರು ಕಾಂಗ್ರೆಸ್ ಆಡಳಿತ ಅನುಸರಿಸಿದ್ದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾವನಾತ್ಮಕವಾಗಿಯೇ ಆಡಳಿತ ಮಾಡುತ್ತಿದ್ದಾರೆ. ಹಣ, ಜಾತಿಯ ಮೂಲಕ ಬಿಜೆಪಿ ರಾಜಕೀಯ ವ್ಯವಸ್ಥೆ ಹಾಳು ಮಾಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆಲ್ಲಲಿದ್ದೇವೆ ಎಂದರು.
ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಮಾಜಿ ಸಂಸದ ಶಿವರಾಮಗೌಡ, ಮಲ್ಲಿಕಾರ್ಜುನ ನಾಗಪ್ಪ, ಜಿಪಂ ಮಾಜಿ ಸದಸ್ಯ ಮುಕುಂದರಾವ್ ಭವಾನಿಮಠ, ಮಾಲತಿ ನಾಯಕ, ಎಸ್.ಬಿ. ನಾಗರಳ್ಳಿ, ಕೃಷ್ಣ ಇಟ್ಟಂಗಿ, ಕೃಷ್ಣಾರಡ್ಡಿ ಗಲಬಿ, ಎಚ್. ಎಲ್. ಹಿರೇಗೌಡ್ರ, ಗೂಳಪ್ಪ ಹಲಿಗೇರಿ, ಜುಲ್ಲು ಖಾದ್ರಿ, ರಾಜು ನಾಯಕ, ರಾಮಣ್ಣ ಸಾಲಭಾವಿ, ಶಿವಗಂಗಾ ಹಿರೇಗೌಡ್ರ, ಅಮ್ಜದ್ ಪಟೇಲ್ ಸೇರಿ ಇತರರಿದ್ದರು.
ಬಿಜೆಪಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ. ಆದರೆ ಯಾವುದೇ ಭರವಸೆ ಈಡೇರಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಜನಪರ ಯೋಜನೆಗಳನ್ನು ಕೊಟ್ಟಿದೆ. ಈ ಬಾರಿ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿರುವ ಶಾಸಕ ಬಸವರಾಜ ದಢೇಸುಗೂರು ಅವರನ್ನು ಬಂಧಿಸಿ, ತನಿಖೆಗೆ ಒಳಪಡಿಸಲಿ. –ಶಿವರಾಜ ತಂಗಡಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ
ನಾವು ಲಿಂಗಾಯತರನ್ನು ದೂರ ಇಟ್ಟಿಲ್ಲ. ನಾವು ಲಿಂಗಾಯತರನ್ನು ಈಗಲೂ ತಲೆಯ ಮೇಲೆ ಹೊತ್ತುಕೊಂಡಿದ್ದೇವೆ. ಆದರೆ, ಲಿಂಗಾಯತ ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆದಿದೆ. ಈ ಬಗ್ಗೆ ಜಾಗೃತರಾಗಬೇಕಿದೆ. ಕಾಂಗ್ರೆಸ್ ಪಕ್ಷ ಯಾವತ್ತು ಲಿಂಗಾಯತರನ್ನು ಬಿಟ್ಟಿಲ್ಲ. ಆದರೆ ತಪ್ಪಾಗಿ ಅರ್ಥೈಸಿ, ದಾರಿ ತಪ್ಪಿಸುತ್ತಿದ್ದಾರೆ. ಈಗ ಎಂ.ಬಿ. ಪಾಟೀಲ್ ಅವರು ಇದೆಲ್ಲವನ್ನು ಅರ್ಥ ಮಾಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಕಿವಿ ಕಚ್ಚುವವರು ಇದ್ದಾರೆ. ಅವರ ಮಾತು ಕೇಳಬೇಡಿ. ಅವರು ಇಲ್ಲದ್ದನ್ನೇ ಹೇಳುತ್ತಾರೆ. ಒಂದೇ ಒಂದು ಸದಸ್ಯತ್ವ ಮಾಡಿಸದಿದ್ದರೂ ಕಿವಿ ಕಚ್ಚುವುದು ಬಹಳ. ಅಂತಹವರ ಮಾತು ಕೇಳಬೇಡಿ. ಕೆಲವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ದುಡಿಯುವುದು ಮಾತ್ರ ಬಿಜೆಪಿಯವರಿಗೆ. ಅಂತಹವರ ಬಗ್ಗೆಯೂ ಎಚ್ಚರ ಇರಬೇಕು. –ಇಕ್ಬಾಲ್ ಅನ್ಸಾರಿ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.