ಸಿಎಎ ವಿರೋಧಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ
Team Udayavani, Jan 25, 2020, 1:16 PM IST
ಕೊಪ್ಪಳ: ಸಿಎಎ, ಎನ್‌ಆರ್‌ಸಿ, ಎನ್‌ಆರ್‌ಪಿ ವಿರೋಧಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸೇರಿ ವಿವಿಧ ಸಂಘಟನೆಗಳ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕೇಂದ್ರ ಸರ್ಕಾರವು ಜನರ ವಿರೋಧದ ನಡುವೆಯೂ ಸಿಎಎ ಕಾಯ್ದೆಯನ್ನು ಜಾರಿ ಮಾಡಿದೆ. ಸಿಎಎ ಕಾಯ್ದೆ ಹಲವು ಬಾರಿ ತಿದ್ದುಪಡಿ ಮಾಡಿದ್ದರೂ ಧರ್ಮಾಧಾರಿತ ಮಾಡಿರಲಿಲ್ಲ. ಆದರೆ ಕೇಂದ್ರದ ಬಿಜೆಪಿ ಸರ್ಕಾರವು ಸಿಎಎ ಕಾಯ್ದೆಯನ್ನು ಧರ್ಮಾಧಾರಿತವಾಗಿ ಪೌರತ್ವ ನೀಡಲು ಮುಂದಾಗಿದೆ. ಇದರಿಂದ ದೇಶದ ಜಾತ್ಯತೀತ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಧರ್ಮವನ್ನು ಗುರಿಯಾಸಿಕೊಂಡು ಈ ನಿರ್ಧಾರ ಕೈಗೊಂಡಿರುವುದು ಸರಿಯಾದ ಬೆಳವಣಿಗೆಯಲ್ಲ. ದೇಶದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತಿದೆ. ದೇಶದ ಸಂವಿಧಾನವನ್ನು ಉಳಿಸಬೇಕಿದೆ ಎಂದರು.
ಸಿಎಎ ಕಾಯ್ದೆ ಜಾರಿಯಾದ ಬಳಿಕ ಎನ್‌ಆರ್‌ಸಿ, ಎನ್ ಆರ್‌ಪಿ ಅನ್ವಯ ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ಸಮುದಾಯವು ಪೌರತ್ವದಿಂದ ಹೊರಗೆ ಬರಲಿದ್ದಾರೆ. ಕೇಂದ್ರವು ಸಿಎಎ ಕಾಯ್ದೆಯನ್ನು ಚರ್ಚೆ ಮಾಡದೇ ಬಿಲ್ ಪಾಸ್ ಮಾಡಲಾಗಿದೆ. ಅದು ಸಮಗ್ರವಾಗಿ ಚರ್ಚೆ ನಡೆಯಬೇಕು. ಕೇಂದ್ರವು ಜನರ ದಾಖಲೆ ಕೇಳುತ್ತಿದೆ. ದಾಖಲೆ ಇಲ್ಲದ ವ್ಯಕ್ತಿಗಳು ಭಾರತದ ಪ್ರಜೆಗಳು ಎಲ್ಲಿಗೆ ಹೋಗಬೇಕು. ಅವರ ಪರಿಸ್ಥಿತಿ ಮುಂದೇನು? ದಾಖಲೆ ನೆಪದಲ್ಲಿ ಕೆಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಕಾನೂನು ಮಾಡಲಾಗಿದೆ. ಶ್ರೀಲಂಕಾ, ನೇಪಾಳ ಸೇರಿ ಇತರೆಡೆಯೂ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ನಿರಾಶ್ರಿತರಾದವರಿಗೂ ಪೌರತ್ವ ನೀಡಬೇಕಿತ್ತು. ಆದರೆ ಕೆಲವೇ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ಅನುಕೂಲ ಮಾಡಿಕೊಡಲಾಗಿದೆ. ಎನ್ ಆರ್‌ಸಿ ಮೂಲಕ ದೇಶದ ಜನರ ಪೌರತ್ವ ಪ್ರಶ್ನಿಸಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅಮ್ಜದ್ ಪಟೇಲ್, ಆದಿಲ್ ಪಟೇಲ್, ಯಲ್ಲಪ್ಪ ಬಳಗಾನೂರು, ಶ್ರವಣಕುಮಾರ, ರಮೇಶ ಬೆಲ್ಲದ, ಮೆಹಮೂದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.