13 ದಿನಗಳಿಂದ ತರಗತಿಗಳು ಬಂದ್
Team Udayavani, Dec 23, 2021, 1:42 PM IST
ಕೊಪ್ಪಳ: ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಪಾಠ ಮಾಡುವಂಥ ಅತಿಥಿ ಉಪನ್ಯಾಸಕರಿಗೆ ಜೀವನದಲ್ಲಿ ಭದ್ರತೆ ಇಲ್ಲದಂತಾಗಿದೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿಕಳೆದ ಹತ್ತು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿಸೇವೆ ಸಲ್ಲಿಸುತ್ತಿರುವವರನ್ನು ಸರ್ಕಾರ ಕಣ್ತೆರೆದು ನೋಡುತ್ತಿಲ್ಲ.
13 ದಿನಗಳಿಂದ ರಾಜ್ಯದಲ್ಲೆಡೆ ಅತಿಥಿ ಉಪನ್ಯಾಸಕರು ತರಗತಿಗಳ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದು, ಇತ್ತವಿದ್ಯಾರ್ಥಿಗಳಿಗೆ ಪಾಠ ಹೇಳುವವರೇ ಇಲ್ಲದಂತಾಗಿದೆ. ಹೌದು. ರಾಜ್ಯಾದ್ಯಂತ ಬಹುತೇಕ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆಯೇ ನಡೆಯುತ್ತಿವೆ. ನೇಮಕಾತಿ ಹೊಂದಿದ ಉಪನ್ಯಾಸಕರಸಂಖ್ಯೆಯೇ ಕಡಿಮೆಯಿದೆ. ಸರ್ಕಾರವೂ ಅತಿಥಿ ಉಪನ್ಯಾಸಕರ ಮೇಲೆಯೇ ಪದವಿ ಕಾಲೇಜುಗಳನ್ನು ಮುನ್ನಡೆಸುತ್ತಿರುವುದರಲ್ಲಿ ಎರಡು ಮಾತಿಲ್ಲ.
ರಾಜ್ಯಾದ್ಯಂತ 434 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇದರಲ್ಲಿ 19 ಸಾವಿರ ಅತಿಥಿಉಪನ್ಯಾಸಕ ವರ್ಗವು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದೆ. ಬಹುಪಾಲು ಇವರಿಂದಲೇಕಾಲೇಜುಗಳು ನಡೆದಿವೆ ಎಂದರೂ ತಪ್ಪಾಗಲಾರದು. ಸರ್ಕಾರ ಉಪನ್ಯಾಸಕರ ನೇಮಕಾತಿಯನ್ನು ಅತ್ಯಂತ ನಿಧಾನಗತಿಯಲ್ಲಿಯೇ ನಡೆಸುತ್ತಿದೆ.
ಕಳೆದ ಹತ್ತಾರು ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದಉಪನ್ಯಾಸಕರು ನಮಗೆ ಸೇವಾ ಭದ್ರತೆ ಕೊಡಿ, ಸೇವಾವಿಲೀನತೆಯಾಗಲಿ ಎಂದು ನಿರಂತರ ಸರ್ಕಾರಕ್ಕೆ ತಮ್ಮಹಕ್ಕೊತ್ತಾಯ ಮಾಡುತ್ತಲೇ ಬಂದಿದ್ದಾರೆ. ಸರ್ಕಾರಮಾತ್ರ ಒಂದೊಂದು ಕಾರಣ ಹೇಳುತ್ತಲೇ ಮುಂದೆ ಹಾಕುತ್ತಿದೆ.
ನೇಮಕಾತಿಗೂ ಹೈಕೋರ್ಟ್ ನಿರ್ದೇಶನ: ಕಳೆದ 10 ವರ್ಷದಿಂದ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ನೇಮಕಾತಿ ಮಾಡಿಕೊಳ್ಳುವಂತೆಯೂ ಕಳೆದ ಕೆಲವುತಿಂಗಳ ಹಿಂದೆ ಧಾರವಾಡ, ಕಲಬುರ್ಗಿಯ ಹೈಕೋಟ್‌ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರವು ಕೋರ್ಟ್ ನಿರ್ದೇಶನವನ್ನೂ ಮನ್ನಿಸದೇ ಇರುವುದು ನಿಜಕ್ಕೂ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
13 ದಿನಗಳಿಂದ ತರಗತಿ ಬಂದ್: ಅತಿಥಿ ಉಪನ್ಯಾಸಕರು ಬೇಡಿಕೆ ಈಡೇರಿಕೆಗಾಗಿ ನಾನಾ ರೂಪದಲ್ಲಿ ಹೋರಾಟ ಮಾಡಿ, ಈಗ ಅಂತಿಮಹಂತದಲ್ಲಿ ತರಗತಿಗಳ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದಾರೆ. ಡಿ. 10ರಿಂದ ರಾಜ್ಯಾದ್ಯಂತ ತರಗತಿಗಳು ಬಂದ್ ಆಗಿವೆ. ಒಂದೆಡೆ ಕೊರೊನಾ ಅಬ್ಬರಕ್ಕೆ ತರಗತಿಗಳಲ್ಲಿ ಪಾಠವನ್ನೇ ಕೇಳದ ವಿದ್ಯಾರ್ಥಿಗಳು ಈಗಷ್ಟೇ ಕಾಲೇಜು ಮುಖ ನೋಡಿದ್ದರೆ, ಇತ್ತ ಅತಿಥಿ ಉಪನ್ಯಾಸಕರ ಧರಣಿಯಿಂದಾಗಿ ಕ್ಲಾಸ್‌ಗಳು ಇಲ್ಲದಂತಾಗಿವೆ.
ಅಚ್ಚರಿಯ ವಿಷಯವೆಂದರೆ 2022ರ ಜ. 25ಕ್ಕೆ ಪದವಿ ಕಾಲೇಜಿನ ಮೊದಲ ಸೆಮಿಸ್ಟರ್ ಮುಕ್ತಾಯಗೊಳ್ಳಲಿವೆ. ಆದರೆ ಯಾವುದೇ ಕಾಲೇಜಿನಲ್ಲೂ ಶೇ. 50ರಷ್ಟು ಪಠ್ಯಬೋಧನೆಯಾಗಿಲ್ಲ. ಹೀಗಾದರೆ ವಿದ್ಯಾರ್ಥಿಗಳ ಭವಿಷ್ಯ ಹೇಗೆ ಎನ್ನುವುದು ಪಾಲಕರಲ್ಲಿ ಆತಂಕ ಮೂಡಿದೆ. ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿತ್ಯ ವಿದ್ಯಾರ್ಥಿಗಳು ಕಾಲೇಜಿಗೆ ಸುಮ್ಮನೆ ಬಂದು ಹೋಗುತ್ತಿದ್ದಾರೆ. ನಾಲ್ಕೈದು ಕಾಯಂ ಉಪನ್ಯಾಸಕ ವರ್ಗದಿಂದ 3 ಸಾವಿರ ವಿದ್ಯಾರ್ಥಿಗಳನ್ನು ನಿರ್ವಹಣೆಮಾಡುವುದು ಕಷ್ಟದ ಕೆಲಸವಾಗಿದೆ. ಉಳಿದ ಅತಿಥಿ ಉಪನ್ಯಾಸಕರು ಧರಣಿಯಲ್ಲಿ ತೊಡಗಿದ್ದಾರೆ. ಇತ್ತ ತರಗತಿಗಳು ಇಲ್ಲದ ಕಾರಣ ವಿದ್ಯಾರ್ಥಿಗಳು ಆಟವಾಡಿ ಸಮಯ ಕಳೆದು ಮನೆಗೆ ತೆರಳುತ್ತಿದ್ದಾರೆ.
ಎನ್‌ಇಪಿ ಅನುಷ್ಠಾನ ಕಷ್ಟ:
ರಾಜ್ಯ ಸರ್ಕಾರ ಎನ್‌ಇಪಿ ಜಾರಿಗೊಳಿಸಿದೆ.ಇದರಿಂದ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ ಮತ್ತಷ್ಟು ಹೊರೆಯಾಗಿದೆ. ಮೊದಲೇಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿದೆ.ಖಾಲಿ ಇರುವ ಹುದ್ದೆಗಳನ್ನೇ ಸರ್ಕಾರ ಸಕಾಲಕ್ಕೆಭರ್ತಿ ಮಾಡುತ್ತಿಲ್ಲ. ಇನ್ನು ಎನ್‌ಇಪಿ ಸಮರ್ಪಕಅನುಷ್ಠಾನಗೊಳಿಸುವುದು ಕಷ್ಟದ ಕೆಲಸವಾಗಿದೆ ಎಂದೆನ್ನುತ್ತಿದೆ ಕಾಲೇಜು ಆಡಳಿತ ವರ್ಗ.
ಸರ್ಕಾರ ನಮ್ಮ ಸೇವಾ ಭದ್ರತೆ, ಸೇವಾ ವಿಲೀನತೆ ಮಾಡುವವರೆಗೂ ತರಗತಿ ಬಹಿಷ್ಕಾರದ ಹೋರಾಟದಿಂದ ಹಿಂದೆ ಸರಿಯಲ್ಲ. ಹತ್ತಾರು ವರ್ಷದಿಂದ ನಾವು ಹೋರಾಟಮಾಡುತ್ತಿದ್ದೇವೆ. ಸರ್ಕಾರ ನಮಗೆ ಒಂದಿಲ್ಲೊಂದು ಕಾರಣ ಹೇಳುತ್ತಲೇ ಇದೆ. ಬಹುಪಾಲು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಮೇಲೆಯೇ ನಡೆಯುತ್ತಿವೆ. ನಾವೀಗ ಕೊನೆಯ ಹಂತದ ಹೋರಾಟಕ್ಕೆ ನಿಂತಿದ್ದೇವೆ. -ವೀರಣ್ಣ ಸಜ್ಜನರ್, ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಸಂಚಾಲಕ
ನಮಗೆ ಮುಂದಿನ ಜನೆವರಿಗೆ ಮೊದಲ ಸೆಮಿಸ್ಟರ್ ಮುಗಿಯಲಿದ್ದು ಇನ್ನೂ ಶೇ.50ರಷ್ಟು ಬೋಧನೆಯೇ ಆಗಿಲ್ಲ. ಮುಂದೆ ಪರೀಕ್ಷೆಬರೆಯುವುದು ಹೇಗೆ? ಅತಿಥಿ ಉಪನ್ಯಾಸಕರುಧರಣಿ ಕುಳಿತಿದ್ದಾರೆ. ನಮಗೆ ಪಾಠ ಹೇಳುವವರುಇಲ್ಲ. ಸರ್ಕಾರ ಅವರ ಬೇಡಿಕೆ ಈಡೇರಿಸಲಿ. ಇಲ್ಲವೇನಮಗೆ ಪರ್ಯಾಯ ಯಾರಿಂದಲಾದರೂ ಪಾಠ ಮಾಡಿಸಲಿ. ಕಳೆದ 13 ದಿನದಿಂದ ನಾವು ಸುಮ್ಮನೆ ಕಾಲೇಜಿಗೆ ಬಂದು ವಾಪಸ್ಸಾಗಬೇಕಿದೆ. -ಗವಿಸಿದ್ದಯ್ಯ, ಕೊಪ್ಪಳ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.