ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
•ನಿಧಿ ಆಸೆಯಿಂದ ವೃಂದಾವನ ಹಾನಿಗೊಳಿಸಿದ ಕಿಡಿಗೇಡಿಗಳು •ಸ್ಮಾರಕ ಸಂರಕ್ಷಣೆ ಎಲ್ಲರ ಹೊಣೆ
Team Udayavani, Jul 21, 2019, 12:41 PM IST
ಗಂಗಾವತಿ: ವೃಂದಾವನ ಧ್ವಂಸಗೊಳಿಸಿದ್ದನ್ನು ಖಂಡಿಸಿ ಬ್ರಾಹ್ಮಣ ಸಮಾಜದವರು ಪ್ರತಿಭಟನೆ ನಡೆಸಿದರು.
ಗಂಗಾವತಿ: ತಾಲೂಕಿನ ನವವೃಂದಾವನ ಗಡ್ಡಿಯಲ್ಲಿರುವ ವ್ಯಾಸರಾಜರ ವೃಂದಾವನವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ಕ್ರಮ ಖಂಡಿಸಿ ಬ್ರಾಹ್ಮಣ ಸಮಾಜದವರು ಹಾಗೂ ಇತರ ಸಮಾಜದವರು ಪ್ರತಿಭಟನಾ ಮೆರವಣಿಗೆ ನಡೆಸಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ಶ್ರೀರಾಮನಗರದ ಸತ್ಯನಾರಾಯಣರಾವ್ ದೇಶಪಾಂಡೆ ಮಾತನಾಡಿ, ವಿಜಯನಗರದ ಅರಸರ ಗುರುಗಳಾಗಿದ್ದ ವ್ಯಾಸರಾಜ ಗುರುಗಳು ಸರ್ವ ಸಮಾಜಕ್ಕೂ ಬೇಕಾದ ಯತಿಗಳಾಗಿದ್ದರು. ಆದ್ದರಿಂದಲೇ ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯ ಅವರ ಕುಹಾ ದೋಷ ನಿವಾರಿಸಿದವರು. ಇಂತಹ ಯತಿಗಳ ವೃಂದಾವನ ಸ್ಮಾರಕವಾಗಿದ್ದು, ಇದರ ರಕ್ಷಣೆ ಎಲ್ಲರ ಹೊಣೆಯಾಗಿದೆ. ಬ್ರಾಹ್ಮಣ ಸಮಾಜ ಇಂತಹ ಕತ್ಯಗಳ ಬಗ್ಗೆ ವ್ಯಾಪಕ ಪ್ರತಿಭಟನೆ ಮಾಡಬೇಕು. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡುತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಶೇ. 80ರಷ್ಟಿದ್ದರೂ ಬ್ರಾಹ್ಮಣ ಸಮಾಜ ಸಂಘಟಿತವಾಗುತ್ತಿಲ್ಲ. ದುಷ್ಕರ್ಮಿಗಳು ಇದನ್ನೇ ವೈಫಲ್ಯ ಎಂದು ಕೊಂಡು ಮೇಲಿಂದ ಮೇಲೆ ದಾಳಿ ಮಾಡುತ್ತಿದ್ದು ಈಗಲೇ ಜಾಗೃತಿಯಾಗಬೇಕಿದೆ. ಸರಕಾರ ತನಿಖೆ ನಡೆಸಿ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಹಿಂದೂ ಧರ್ಮ ಸಂರಕ್ಷಣೆ ಮಾಡಿದವರಲ್ಲಿ ಪೂಜ್ಯ ವ್ಯಾಸರಾಜರು ಒಬ್ಬರಾಗಿದ್ದು ಇಂತಹ ಪುಣ್ಯಪುರುಷರ ವೃಂದಾವನ ನಾಶ ಮಾಡುವ ಮೂಲಕ ದುಷ್ಕರ್ಮಿಗಳು ಮಹಾ ಪಾಪ ಮಾಡಿದ್ದಾರೆ. ಇವರನ್ನು ಪೊಲೀಸ್ ಇಲಾಖೆ ಪತ್ತೆ ಮಾಡಿ ಬಂಧಿಸಬೇಕು ಎಂದರು.
ಪ್ರತಿಭಟನೆ ಮೆರವಣಿಗೆ ವೆಂಕಟೇಶ್ವರ ಗುಡಿಯಿಂದ ಶ್ರೀಕಷ್ಣದೇವರಾಯ ವತ್ತದವರೆಗೆ ಜರುಗಿತು. ಪ್ರತಿಭಟನೆಯಲ್ಲಿ ರೈತ ಹೋರಾಟಗಾರ ತಿಪ್ಪೇರುದ್ರಸ್ವಾಮಿ, ಜೋಗದ ಹನುಮಂತಪ್ಪ ನಾಯಕ, ಸಂಘ ಪರಿವಾರದ ನೀಲಕಂಠ ನಾಗಶೆಟ್ಟಿ, ನಗರಸಭೆ ಸದಸ್ಯ ವಾಸುದೇವ ನವಲಿ, ಎಸ್.ಬಿ.ಎಚ್. ನಾರಾಯಣರಾವ್, ವಿಜಯ ಹೇರೂರು, ರಾಘವೇಂದ್ರಶೆಟ್ಟಿ, ಮಂಜುನಾಥ ಪತ್ತಾರ, ನ್ಯಾಯವಾದಿ ಪ್ರಹ್ಲಾದರಾವ್ ನವಲಿ, ಶರದ್ ದಂಡಿನ್, ಯಲಬುರ್ಗಾ ರಾಮರಾಮರಾವ್, ಪತ್ರಕರ್ತರಾದ ನವಲಿ ರಾಮಮೂರ್ತಿ, ಪ್ರಸನ್ನ ದೇಸಾಯಿ, ಹರೀಶ ಕುಲಕರ್ಣಿ, ವೆಂಕಟೇಶ ಜಂತಗಲ್, ವೀರಾಪೂರ ಕೃಷ್ಣ, ಪ್ರತೀಮಾ ನವಲಿ, ಸತೀಶ ದಂಡೀನ್ ಸೇರಿ ಕನಕಗಿರಿ, ಕಾರಟಗಿ, ಶ್ರೀ ರಾಮನಗರದ ಬ್ರಾಹ್ಮಣ ಸಮಾಜದ ನೂರಾರು ಜನರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.