ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ
Team Udayavani, Jun 30, 2019, 12:03 PM IST
ಕೊಪ್ಪಳ: ಅಧಿಕಾರಿಗಳ ವೈಖರಿಗೆ ಬೇಸತ್ತು ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವೈ. ಸುದರ್ಶನ ದಿಢೀರ್ ಪ್ರತಿಭಟನೆ ನಡೆಸಿದರು.
ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ ಬಿಲ್ ಮಾಡದೇ ವರ್ಷದಿಂದ ಗೊಳಾಡಿಸುತ್ತಿರುವ ಅಧಿಕಾರಿಗಳ ವೈಖರಿಗೆ ಬೇಸತ್ತು ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವೈ. ಸುದರ್ಶನ ಅವರು ಡಿಡಿಪಿಐ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.
ವೈ. ಸುದರ್ಶನ ಅವರು ಜಿಲ್ಲೆಯಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಕಾಲ ಜಿಲ್ಲಾ ಪ್ರಭಾರಿ ದೈಹಿಕ ಶಿಕ್ಷಣಾಕಾರಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕಳೆದ 2018ರಲ್ಲಿ ಅವರು ನಿವೃತ್ತಿಯಾಗಿದ್ದು, ಪಿಂಚಣಿ ಬಿಟ್ಟರೆ ವಿಮೆ ಸೇರಿದಂತೆ ಇತರೆ ಕೆಲವೊಂದು ಕ್ಲೈಮ್‌ಗಳನ್ನು ಮಾಡಿಕೊಳ್ಳಲು ಪತ್ರ ವ್ಯವಹಾರ ನಡೆಸದ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಯ ನಿವೃತ್ತಿ ಹಣ ಪಡೆಯಲು ಅಲೆದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಇಲಾಖೆಗೆ ಬಂದು ಮಾಹಿತಿ ನೀಡಿ, ಮನವಿ ಕೊಟ್ಟು ತೆರಳಿದರೂ ಇಲಾಖೆ ಅಯ್ಯನಗೌಡ ಅವರು ಸ್ಪಂದಿಸುತ್ತಿಲ್ಲ. ಇದರಿಂದ ಸಾಕಾಗಿ ಹೋಗಿದೆ. ಗ್ರುಪ್ ಇನ್ಸೂರೆನ್ಸ್ ಸೇರಿ ವಿವಿಧ ಬಿಲ್ ಸೇರಿ ಒಟ್ಟು 25 ಲಕ್ಷಕ್ಕೂ ಹೆಚ್ಚು ಹಣ ನನಗೆ ಬರಬೇಕಿದೆ. ಆದರೆ ಅಯ್ಯನಗೌಡ ಅವರು ನಿಮ್ಮಿಂದ ಇನ್ನೂ ಪತ್ರ ಬಂದಿಲ್ಲ ಎಂಬ ನೆಪ ಹೇಳುತ್ತಿದ್ದಾರೆ.
ಸುಮ್ಮನೆ ಗುಲಬುರ್ಗಾ ಕಚೇರಿಯಿಂದ ಕ್ಲಿಯರೆನ್ಸ್ ಪತ್ರ ಬಂದಿಲ್ಲ ಎನ್ನುವ ಕಾರಣ ನೀಡುತ್ತಿದ್ದು ರಾಜ್ಯದ ಯಾವುದೇ ವಿಭಾಗದಲ್ಲಿ ಈ ರೀತಿಯ ನಿಯಮ ಇಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಇವರ ಗುಲಬುರ್ಗಾದಿಂದ ಕ್ಲಿಯರೆನ್ಸ್ ಬರಬೇಕು ಎನ್ನುವ ನಿಯಮ ಹೇಳುತ್ತಿದ್ದಾರೆ. ಇದರಿಂದ ಸಾಕಾಗಿ ಹೋಗಿದೆ. ಇವರ ವರ್ತನೆಗೆ ಬೇಸತ್ತಿದ್ದೇನೆ. ನಾನೂ ಇದೇ ಇಲಾಖೆಯಲ್ಲಿಯೇ ಹಲವು ವರ್ಷಗಳ ಕಾಲ ಸೇವೆ ಮಾಡಿದ್ದೇನೆ. ಆದರೂ ನನ್ನನ್ನು ಗೋಳಾಡಿಸುತ್ತಿದ್ದಾರೆ. ಇದಕ್ಕೆ ಬೇಸತ್ತು ನಾನು ಧರಣಿ ನಡೆಸುತ್ತಿದ್ದೇನೆ ಎಂದು ನಿವೃತ್ತ ಅಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಯಾರಿಗೂ ಒಂದು ಪೈಸೆ ದುಡ್ಡು ಕೊಡುವ ವ್ಯಕ್ತಿಯಲ್ಲ. ನನಗೆ ಬರಬೇಕಾದ ಹಣವು ಸಕಾಲಕ್ಕೆ ಬಾರದಿದ್ದರೆ ಕೋರ್ಟ್ ಮೋರೆ ಹೋಗುವೆನು. ಅಯ್ಯನಗೌಡ ಅವರ ವಿರುದ್ಧವೇ ಬೆಂಗಳೂರಿನಲ್ಲಿ ಕೇಸ್ ಮಾಡಿ ಕೋರ್ಟ್ ಮೂಲಕ ನಿಯಮಾನುಸಾರ ಬಾಕಿ ಬಿಲ್ ಪಡೆಯುವೆನು ಎನ್ನುವ ಮಾತನ್ನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.