ಮಳೆ ಕೊರತೆ: ಆತಂಕದಲ್ಲಿ ಭತ್ತ ಬೆಳೆಗಾರರು
Team Udayavani, Jul 28, 2019, 4:34 PM IST
ಕಾರಟಗಿ: ಪಟ್ಟಣದ ಪನ್ನಾಪೂರ ರಸ್ತೆಯಲ್ಲಿ ಬೋರ್‌ವೆಲ್ ಹೊಂದಿದ ರೈತರು ಗದ್ದೆಯಲ್ಲಿ ಹಾಕಿರುವ ಭತ್ತದ ಸಸಿಗಳು.
ಕಾರಟಗಿ: ಸಕಾಲಕ್ಕೆ ಸಮರ್ಪಕ ಮಳೆಯಿಲ್ಲದೆ ಭತ್ತ ನಾಟಿ ಮಾಡುವ ಹಂತ ಬಂದರೂ ಕಾಲುವೆಗೆ ನೀರು ಹರಿಸದಿರುವುದಕ್ಕೆ ರೈತರು ತೀವ್ರ ಆತಂಕಗೊಂಡಿದ್ದಾರೆ.
ಸಮರ್ಪಕ ಮಳೆ ಬಂದಿದ್ದರೆ ಈಗಾಗಲೇ ಟಿಬಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಜಲಾಶಯ ತುಂಬುತ್ತಿಲ್ಲ. ಜಲಾಶಯದ ನೀರನ್ನೇ ಅವಲಂಬಿಸಿರುವ ಎಡಂದಡೆ ರೈತರು ಸಂಕಷ್ಟದ ಸ್ಥಿತಿ ಎದುರಿಸಬೇಕಾಗಿದೆ. ಕಾಲುವೆಗೆ ನೀರು ಬರುವ ನೀರಿಕ್ಷೆಯಲ್ಲಿಯೇ ರೈತರು ಭತ್ತದ ಸಸಿ ನಾಟಿಗೆ ಸಜ್ಜಾಗಿದ್ದರು. ಆದರೆ ನೀರಿಲ್ಲದೇ ರೈತರು ಭತ್ತ ನಾಟಿ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ.ಕಾರಟಗಿ ಹೋಬಳಿ ವ್ಯಾಪ್ತಿಯಲ್ಲಿ ಬೋರ್‌ವೆಲ್ ಹೊಂದಿರುವ ರೈತರು ಈಗಾಗಲೇ ಸಸಿ ಮಡಿ ಹಾಕಿ ಭತ್ತ ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಕಾಲುವೆ ನೀರು ಅವಲಂಭಿಸಿದ ರೈತರು ನೀರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಳೆದ ವಾರ ಜಾನುವಾರುಗಳಿಗಾಗಿ ಕುಡಿಯಲು ಎಡದಂಡೆ ನಾಲೆಗೆ ನೀರು ಬಿಡಲಾಗಿದೆ. ಆದರೆ ವಿತರಣಾ ಕಾಲುವೆಗೆ ಮಾತ್ರ ಇವರೆಗೂ ನೀರು ಹರಿಬಿಟ್ಟಿಲ್ಲ. ಒಲಾಶಯದಲ್ಲಿ ಒಳಹರಿವು ಸಣ್ಣ ಪ್ರಮಾಣದಲ್ಲಿ ಶುರುವಾಗಿದೆ. ಆದರೆ 31ನೇ ವಿತರಣಾ ನಾಲೆಗೆ ನೀರು ಬರಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಸಸಿಮಡಿ ಹಾಕಿ ಈಗಾಗಲೇ ದಿನಗಳು ಕಳೆದಿವೆ. ಅವಧಿ ಮೀರಿದರೆ ಸಸಿಮಡಿ ನಾಟಿ ಮಾಡಲು ಆಗುವುದಿಲ್ಲ. ಹೀಗೆ ರೈತರಿಗೆ ಪ್ರತಿ ವರ್ಷವೂ ಒಂದಿಲ್ಲೊಂದು ಸಮಸ್ಯೆ ಅನುಭವಿಸಬೇಕಾಗಿದೆ. ಸಸಿಮಡಿ ಹಾಕಲು. ಕ್ರೀಮಿನಾಶಕ, ರಸಗೊಬ್ಬರ ಸೇರಿ ಪ್ರತಿ ಒಂದು ಚೀಲ ಭತ್ತಕ್ಕೆ 8ರಿಂದ 10 ಸಾವಿರ ರೂ. ಖರ್ಚಾಗುತ್ತದೆ. ಸಕಾಲಕ್ಕೆ ಮಳೆ ಅಥವಾ ಕಾಲುವೆಗೆ ನೀರು ಬಂದರೆ ಯಾವುದು ತೊಂದರೆಯಾಗುವುದಿಲ್ಲ ಎನ್ನುತ್ತಾರೆ ರೈತ ಬುಡ್ಡನಗೌಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.