ಶೀಘ್ರ ಖಜಾನೆ-ಉಪನೋಂದಣಿ ಕಚೇರಿ
Team Udayavani, Sep 15, 2019, 11:53 AM IST
ಕನಕಗಿರಿ: ಪಶು ಆಸ್ಪತ್ರೆ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಬಸವರಾಜ ದಢೇಸುಗೂರು ಭೂಮಿಪೂಜೆ ನೆರವೇರಿಸಿದರು.
ಕನಕಗಿರಿ: ಪಟ್ಟಣದಲ್ಲಿ ಖಜಾನೆ ಮತ್ತು ಉಪ ನೋಂದಣಿ ಕಚೇರಿಯನ್ನು ಪ್ರಾರಂಭಿಸಲು ಈಗಾಗಲೇ ಬಾಡಿಗೆ ಕಟ್ಟಡ ಪಡೆಯಲಾಗಿದೆ. ಶೀಘ್ರವೇ ಕಚೇರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳೀದರು.
ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ 2018-19ನೇ ಸಾಲಿನ ಆರ್‌ಐಡಿಎಫ್-24 ಯೋಜನೆಯಡಿ 40 ಲಕ್ಷ ರೂ. ವೆಚ್ಚದ ನೂತನ ಕಟ್ಟಡಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಲಿಕೇರಿ, ಜೀರಾಳ ಸೇರಿದಂತೆ 14 ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಡಿಪಿಆರ್ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಅವಶ್ಯವಿದ್ದರೆ ಪುನಃ ಗೋಶಾಲೆ ಪ್ರಾರಂಭಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕನಕಗಿರಿಯ ಲಕ್ಷ್ಮೀ ದೇವಿ ಮತ್ತು ಕಾಟಾಪುರ ಕೆರೆಗಳಿಗೆ ನದಿಯಿಂದ ನೀರನ್ನು ಹರಿಸಲಾಗುತ್ತಿದೆ. ಕೆರೆಗಳನ್ನು ಭರ್ತಿ ಮಾಡಿ ಉಳಿದ ಕೆರೆಗಳಿಗೆ ನೀರು ಬಿಡಲಾಗುವುದು ಎಂದರು.
ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಪ್ರಮುಖರಾದ ದೊಡ್ಡಯ್ಯ ಅರವಟಗಿಮಠ, ಅಮರಗುಂಡಪ್ಪ ತೆಗ್ಗಿನಮನಿ, ಅಮರಪ್ಪ ಗದ್ದಿ, ಅಶ್ವಿನಿ ದೇಸಾಯಿ, ಸಣ್ಣ ಕನಕಪ್ಪ, ಹುಲಿಗೆಮ್ಮ ನಾಯಕ, ಪ್ರಕಾಶ ಹಾದಿಮನಿ, ಸುಭಾಷ, ಗ್ಯಾನಪ್ಪ ಚಿಕ್ಕಖೇಡಾ, ಗುರುನಗೌಡ, ರಮೇಶರೆಡ್ಡಿ ಓಣಿಮನಿ, ಸಂತೋಷ ಹಾದಿಮನಿ, ಆನಂದ ಭತ್ತದ್, ಹರೀಶ ಪೂಜಾರ, ತಾಲೂಕು ಪಶು ವೈದ್ಯಾಧಿಕಾರಿ ಮಲ್ಲಯ್ಯ, ಪಪಂ ಮುಖ್ಯಾಧಿಕಾರಿ ಸಂಕನಗೌಡ, ಪಶು ವೈದ್ಯಾಧಿಕಾರಿಗಳಾದ ಶಿವಪೂಜೆ, ಮಲ್ಲಕಪ್ಪ, ಕಾವ್ಯ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.