ಪಂಪಾಸರೋವರ: ಶ್ರೀಚಕ್ರ ಸಮೇತ ಜಯಲಕ್ಷ್ಮಿ ಮೂರ್ತಿ ಪುನರ್ ಪ್ರತಿಷ್ಠಾಪನೆಗೆ ಚಾಲನೆ
Team Udayavani, Jun 8, 2022, 7:23 PM IST
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಪಂಪಾಸರೋವರದಲ್ಲಿ ಗೋ ಪೂಜೆಯೊಂದಿಗೆ ಶ್ರೀಚಕ್ರ ಸಮೇತ ಜಯಲಕ್ಷ್ಮಿ ಮೂರ್ತಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ಗೋ ಪೂಜೆ ಹಾಗೂ ಗಣಪತಿ ಹೋಮ ಕಳಶ ಪೂಜೆಯೊಂದಿಗೆ ಬುಧವಾರ ಚಾಲನೆ ನೀಡಲಾಯಿತು.
ಆನೆಗೊಂದಿ ರಾಜವಂಶಸ್ಥ ಶ್ರೀಕೃಷ್ಣದೇವರಾಯ ದಂಪತಿಗಳು ಸೇರಿ 9 ದಂಪತಿಗಳು ಮಹಾ ಗಣಪತಿ,ನವಗ್ರಹ ಹೋಮದಲ್ಲಿ ಪಾಲ್ಗೊಂಡಿದ್ದರು. ಪಂಪಾಸರೋವರದ ಜೀರ್ಣೋದ್ಧಾರ ಕಾಮಗಾರಿ ಕೈಗೊಂಡಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ದಂಪತಿಗಳು ಶ್ರೀಚಕ್ರ, ಜಯಲಕ್ಷ್ಮಿ ಮೂರ್ತಿಗಳಿಗೆ ಕ್ಷೀರಾಭಿಷೇಕ ಮಾಡಿ ಕಳಶ ಪೂಜೆಯನ್ನು ಮಾಡಿದರು.
ಮೂರ್ತಿ ಪುನರ್ ಪ್ರತಿಷ್ಠಾಪನಾ ಕಾರ್ಯವನ್ನು ಬಳ್ಳಾರಿಯ ಪಂಡಿತ ಲಕ್ಷ್ಮೀ ನಾರಾಯಣಾಚಾರ್ ನೇತೃತ್ವದಲ್ಲಿ ತಮಿಳುನಾಡು, ಆಂದ್ರಪ್ರದೇಶದ 25 ಪಂಡಿತರ ತಂಡದವರು ದ್ವಾರ ಪೂಜೆ, ಯೋಗಶಾಲೆ ಪ್ರವೇಶ, ಮಹಾಸಂಕಲ್ಪ, ಕಂಕಣಪೂಜೆ, ಕಂಕಣ ದಾರಣ,ಅಂಕುರಾರ್ಪಣಾ, ಧ್ವಜಾರೋಹಣ, ,ಕಳಸಪೂಜೆ,ಆದಿವಾಸ ಪ್ರಾರಂಭ, ಜಲಾದೀವಾಸ, ಕ್ಷೀರಾಧಿವಾಸ, ಧನ್ಯಾಧಿವಾಸ, ಪುಷ್ಪಾಧಿವಾಸ, ಸ್ವಯಾಧಿವಾಸ,ನವಗ್ರಹ ಹೋಮ,ವೇದ ಪಾರಾಯಣ, ಮಹಾಮಂಗಳಾರತಿ ನೆರವೇರಿಸಲಾಯಿತು.
ಸಂಜೆ ರುದ್ರಪಾರಾಯಣ, ರುದ್ರಾಭಿಷೇಕ, ಚಂಡಿ ಪಾರಾಯಣ, ಪಂಪಾಂಬಿಕಾ ದೇವಿ ಸಮೇತ ಶ್ರೀ ವಿರೂಪಾಕ್ಷಶ್ವರ ಸ್ವಾಮಿ ರುದ್ರಾಭಿಷೇಕ, ದೇವಾಲಯ ವಾಸ್ತು ಪೂಜೆ, ಲಕ್ಷ್ಮಿ ನರಸಿಂಹ ಹೋಮ, ಸ್ವಸ್ತಿ ವಾಚನಂ, ಮಹಾಮಂಗಳಾತಿ ಕಾರ್ಯಕ್ರಮಗಳು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಲಲಿತರಾಣಿಶ್ರೀರಂಗದೇವರಾಯಲು, ಹರಿಹರದೇವರಾಯಲು, ಶಾಸಕ ಪರಣ್ಣ ಮುನವಳ್ಳಿ, ತಹಸೀಲ್ದಾರ್ ಯು.ನಾಗರಾಜ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಬಿಜೆಪಿ ಮುಖಂಡರಾದ ಜೋಗದ ಹನುಮಂತಪ್ಪ, ಕೆಲೋಜಿ ಸಂತೋಷ, ಮುಖಂಡರಾದ ಜೋಗದ ನಾರಾಯಣಪ್ಪ, ವಡ್ರಟ್ಟಿ ವೀರಭದ್ರಪ್ಪ ನಾಯಕ, ಮಾರೆಪ್ಪ ನಾಯಕ, ಪಂಪಣ್ಣ ನಾಯಕ, ಪುರಾತತ್ವ ಇಲಾಖೆಯ ಅಭಿಯಂತರರಾದ ಚಂದ್ರಶೇಖರ ಮಸಾಳೆ, ಕುಬೇರಪ್ಪ ಸೇರಿ ಅನೇಕರಿದ್ದರು.
################################################################
ಜೀರ್ಣೋದ್ಧಾರ ಶ್ರದ್ಧೆ,ಭಕ್ತಿಯಿಂದ ಮಾಡಿದ್ದೇನೆ.ಯಾವುದೇ ತನಿಖೆಯಾದರೂ ಸಿದ್ಧ: ಬಿ.ಶ್ರೀರಾಮುಲು
ಗಂಗಾವತಿ: ಇತಿಹಾಸ ಪ್ರಸಿದ್ಧ ಪುರಾತನ ಪಂಪಾಸರೋವರ ನಮ್ಮೆಲ್ಲರ ಹೆಮ್ಮೆಯಾಗಿದೆ. ಈ ಕ್ಷೇತ್ರ ವೀಕ್ಷಣೆ ಮಾಡಲು ನಿತ್ಯವೂ ನೂರಾರು ಜನರು ಬರುತ್ತಾರೆ. ದೇಗುಲ ಶೀಥಿಲವಾಗಿತ್ತು. ಸ್ಥಳೀಯರ ಮನವಿ ಹಿನ್ನೆಲೆಯಲ್ಲಿ ಸ್ನೇಹಿತರ ಆರ್ಥಿಕ ನೆರವಿನೊಂದಿಗೆ ಪಂಪಾಸರೋವರವನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಕಾಮಗಾರಿಯನ್ನು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ನಿಗಾದಲ್ಲಿ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಸೇರಿ ಬೇರೆಯವರು ಆರೋಪಿಸುವಂತೆ ನಿಧಿಗಾಗಿ ಜೀರ್ಣೋದ್ಧಾರ ಕಾರ್ಯ ಮಾಡಿಲ್ಲ. ನ್ಯಾಯಾಂಗ ಸೇರಿ ಯಾವುದೇ ತನಿಖೆಗೂ ತಾವು ಸಿದ್ಧ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಅವರು ಬುಧವಾರ ಪಂಪಾಸರೋವರದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನಾ ಕಾರ್ಯದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಂಪಿ, ಕೋದಂಡ ರಾಮದೇವರ ಗುಡಿ, ಸೂರ್ಯದೇವರ ಗುಡಿ, ಕೋಟಿ ಮಲ್ಲೇಶ್ವರ ಗುಡಿ ಸೇರಿ ಹಲವು ಪುರಾತನ ದೇವಾಲಯಗಳನ್ನು ಪುರಾತತ್ವ ಇಲಾಖೆಯ ಪರವಾನಿಗೆಯೊಂದಿಗೆ ಜೀರ್ಣೋದ್ಧಾರ ಮಾಡಲಾಗಿದ್ದು ಅಲ್ಲಿ ಇಲ್ಲದ ಗೊಂದಲ ವಿವಾದ ಪಂಪಾಸರೋವರದಲ್ಲಿ ಯಾಕೆ ಬಂದಿದೆ. ಗೊತ್ತಿಲ್ಲ. ನಾನಂತು ಪ್ರಮಾಣಿಕವಾಗಿ ಭಕ್ತಿ ಶ್ರದ್ಧೆಯಿಂದ ಜೀರ್ಣೋದ್ಧಾರ ಕಾರ್ಯ ಮಾಡುತ್ತಿದ್ದೇನೆ, ನನ್ನ ಸ್ನೇಹಿತರು ಧನಸಹಾಯ ಮಾಡುತ್ತಾರೆ. ನಾನೂ ಮುಂದೆ ನಿಂತು ಈ ಕಾರ್ಯ ಮಾಡುತ್ತಿದ್ದೇನೆ. ನಾನೇದರೂ ತಪ್ಪು ಮಾಡಿದರೆ ದೇವರೇ ಶಿಕ್ಷೆ ಕೊಡಲಿ, ಆನೆಗೊಂದಿ ರಾಜವಂಶಸ್ಥರ ಮತ್ತು ಸಮಸ್ತ ಜನರ ವಿಶ್ವಾಸದೊಂದಿಗೆ ಕಾಮಗಾರಿಯನ್ನು ಮಾಡುತ್ತಿದ್ದೇನೆ. ನಾನು ದೇವರು ಧಾರ್ಮಿಕ ವಿಷಯದಲ್ಲಿಪೂರ್ಣ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದು ಧರ್ಮ ದ್ರೋಹಿ ಕಾರ್ಯ ಮಾಡುವುದಿಲ್ಲ. ಇದೀಗ ಈ ಭಾಗದ ಜನಪ್ರತಿನಿಧಿಗಳ ಆನೆಗೊಂದಿ ರಾಜಮನೆತನದವರು ಸ್ಥಳೀಯರು ಸೇರಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಶ್ರದ್ಧೆಯಿಂದ ಮಾಡಿ ಮುಂದಿನ 6 ತಿಂಗಳಲ್ಲಿ ಪೂರ್ಣ ಪಂಪಾಸರೋವರದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸುವ ಯೋಜನೆ ಇದೆ. ವಾಲೀಕಿಲ್ಲಾದ ಶ್ರೀ ಆದಿಶಕ್ತಿ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ಶೀಘ್ರ ಪೂರ್ಣಗೊಳಿಸಲಾಗುತ್ತಿದೆ. ಅತ್ಯುತ್ತಮ ಗುಣಮಟ್ಟದ ಕಲ್ಲಿನ ಅನಾಭವಿದ್ದು ಬೇರೆಡೆಯಿಂದ ಕಲ್ಲು ತರಿಸಿ ಕೆತ್ತನೆ ಕಾರ್ಯ ಮಾಡಿ ಆದಿಶಕ್ತಿ ದೇಗುಲಕ್ಕೆ ರವಾನೆ ಮಾಡಿ ಜೋಡಿಸಬೇಕಾಗಿದ್ದು ಪ್ರಸ್ತುತ ವಿಳಂಭವಾಗುತ್ತಿದೆ. ಅಲ್ಲಿಯೂ ಶೀಘ್ರವೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡರಾದ ಕೆಲೋಜಿ ಸಂತೋಷ, ಜೋಗದ ಹನುಮಂತಪ್ಪ, ಜೋಗದ ನಾರಾಯಣಪ್ಪ ಸೇರಿ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.