ಉತ್ತರ ಕರ್ನಾಟಕದ ಮನೆ ಮನೆಯಲ್ಲೂ ರೊಟ್ಟಿ ಹಬ್ಬದ ಸಂಭ್ರಮ
ಕೋವಿಡ್ ಮಧ್ಯೆಯೂ ಹಬ್ಬದ ಸಡಗರದಲ್ಲಿ ಜನಮನೆ ಮಂದಿಯಲ್ಲ ಸವಿದರು ರುಚಿಕರ ರೊಟ್ಟಿ
Team Udayavani, Aug 12, 2021, 9:20 PM IST
ಕೊಪ್ಪಳ: ಉತ್ತರ ಕರ್ನಾಟಕದ ವಿಶೇಷ ಹಬ್ಬ ಎಂದೆನಿಸಿದ ರೊಟ್ಟಿ ಹಬ್ಬವು ಜಿಲ್ಲಾದ್ಯಂತ ಕೋವಿಡ್ ಮಧ್ಯೆ ಸಂಭ್ರಮದಿಂದಲೇ ಜರುಗಿತು. ನಗರ ಸೇರಿ ಗ್ರಾಮೀಣ ಪ್ರದೇಶದಲ್ಲೂ ಮನೆ ಮನೆಯಲ್ಲಿ ನಾರಿಯರು ಎಳ್ಳು ರೊಟ್ಟಿ, ಶೇಂಗಾ ಪುಡಿ, ಕಾಳು, ಬದನೆ ಪಲ್ಲೆಯೊಂದಿಗೆ ಅಕ್ಕಪಕ್ಕದ ಮನೆಯವರೊಂದಿಗೆ ರೊಟ್ಟಿಗಳ ವಿನಿಮಯ ಮಾಡಿಕೊಂಡು ರೊಟ್ಟಿ ಹಬ್ಬ ಆಚರಿಸಿದರು.
ಎರಡು ವರ್ಷಗಳಿಂದ ಇಡೀ ಜಗತ್ತಿನಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸಿ ಒಬ್ಬರ ಮನೆಗೆ ಒಬ್ಬರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬ ಹರಿದಿನಗಳ ಸಂಭ್ರಮ ಮಂಕಾಗಿದೆ. ಆದರೆ ಕೋವಿಡ್ ಎರಡನೇ ಅಲೆ ನಿಯಂತ್ರಣದ ಬಳಿಕ ಸರ್ಕಾರವು ಕೆಲ ವಿನಾಯತಿ ನೀಡಿದ್ದು, ಜನತೆ ಸಹಜ ಸ್ಥಿತಿಗೆ ಮರಳುವಂತೆ ಮಾಡಿದೆ. ಈ ಮಧ್ಯೆಯೂ ಕೊರೊನಾ ಮೂರನೇ ಅಲೆ ಭೀತಿ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಎರಡು ವರ್ಷಗಳಿಂದ ಹಬ್ಬದ ಸಂಭ್ರಮವನ್ನೇ ಮರೆತಿದ್ದ ಜಿಲ್ಲೆಯ ಜನರು ನಾಗರ ಪಂಚಮಿಯಲ್ಲಿನ ರೊಟ್ಟಿ ಹಬ್ಬವನ್ನು ಜಿಲ್ಲಾದ್ಯಂತ ಸಂಭ್ರಮ, ಸಡಗರದಿಂದಲೇ ಆಚರಣೆ ಮಾಡಿದ್ದು ಕಂಡುಬಂತು. ಹಬ್ಬ ಬರುವ ಮೊದಲೇ ಮನೆ ಮನೆಯಲ್ಲಿನ ಮಹಿಳೆಯರು ಹದಿನೈದು ದಿನ ಮುಂಚಿತವಾಗಿ ಎಳ್ಳು ರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಅರಿಶಿನ ರೊಟ್ಟಿ ಹೀಗೆ ನಾನಾ ಬಗೆಯ ರೊಟ್ಟಿಗಳನ್ನು ತಟ್ಟಿಟ್ಟುಕೊಂಡಿದ್ದರು.
ರೊಟ್ಟಿ ಹಬ್ಬದ ದಿನದಂದು ಮನೆಯಲ್ಲಿ ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ ಪಲ್ಲೆ, ಚವಳೆಕಾಯಿ ಪಲ್ಲೆ, ಹೆಸರು, ಮಡಿಕೆ, ಅಲಸಂದಿ ಕಾಳು, ಶೇಂಗಾ, ಗುರೆಳ್ಳು, ಅಗಸೆ ಪುಡಿಯನ್ನು ಸಿದ್ಧಪಡಿಸಿಟ್ಟುಕೊಂಡು ರೊಟ್ಟಿಗೆ ಅದೆಲ್ಲವನ್ನು ಬಡಿಸಿಕೊಂಡು ತಮ್ಮ ಓಣಿಯ, ಸ್ನೇಹ ಬಳಗಕ್ಕೆ, ಗ್ರಾಮದಲ್ಲಿ ಸಂಬಂಧಿಗಳ ಮನೆ ಮನೆಗೆ ತೆರಳಿ ಕೊಟ್ಟು ಅವರ ಮನೆಯ ರೊಟ್ಟಿಗಳನ್ನು ಪಡೆದು ರೊಟ್ಟಿ ಹಬ್ಬವನ್ನು ಆಚರಣೆ ಮಾಡಿದರು.
ನಾಗರ ಪಂಚಮಿಯಲ್ಲಿನ ರೊಟ್ಟಿ ಹಬ್ಬವು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷತೆ ಪಡೆದಿದೆ. ಒಟ್ಟಿನಲ್ಲಿ ಜಿಲ್ಲಾದ್ಯಂತ ರೊಟ್ಟಿಗಳ ಸಪ್ಪಳವೂ ಜೋರಾಗಿಯೇ ನಡೆಯಿತು. ಮನೆಯ ನಾರಿಯರು ತಮ್ಮ ಸ್ನೇಹ ಬಳಗಕ್ಕೆ, ಸಂಬಂಧಿ ಕರಿಗೆ, ಮನೆ ಪಕ್ಕದಲ್ಲಿನ ಆತ್ಮೀಯರಿಗೆ ರೊಟ್ಟಿಗಳ ವಿನಿಮಯ ಮಾಡಿ ನಾವೆಲ್ಲರೂ ಸಂತೋಷದಿಂದ ಹೀಗೆ ಇರೋಣ. ಸುಖಮಯ ಜೀವನ ನಡೆಸೋಣ. ಎಲ್ಲರೂ ಭಾವೈಕ್ಯತೆಯಿಂದ ಬಾಳ್ಳೋಣ ಎನ್ನುವ ಸಂದೇಶ ಸಾರುವ ಮೂಲಕ ರೊಟ್ಟಿಯ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.