ನಿಯಮ ಉಲ್ಲಂಘನೆ: ಬೆತ್ತ ಹಿಡಿದ ನಗರಸಭೆ ನೌಕರರು
Team Udayavani, May 6, 2020, 6:12 PM IST
ಕೊಪ್ಪಳ: ಕೊಪ್ಪಳದಲ್ಲಿ ಲಾಕ್ ಡೌನ್ ಉಲ್ಲಂಘಿಸಿದ ಜನರಿಗೆ ನಗರಸಭೆ ಅಧಿಕಾರಿಗಳೇ ಬಿಸಿ ಮುಟ್ಟಿಸಲು ಬೆತ್ತದ ರುಚಿ ತೋರಿಸುತ್ತಿದ್ದಾರೆ. ಮಂಗಳವಾರ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಸಾಮಾಜಿಕ ಅಂತರ ಕಾಪಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಜನತೆಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಿದ್ದು, ಈ ಮಧ್ಯೆಯೂ ಸರ್ಕಾರವು ಕೆಲವೊಂದು ವಿನಾಯತಿ ನೀಡಿದೆ. ಅಲ್ಲದೇ, ಜಿಲ್ಲೆಯು ಗ್ರೀನ್ ಜೋನ್ ನಲ್ಲಿರುವುದರಿಂದ ಸರ್ಕಾರವು ಹೆಚ್ಚು ಕಾರ್ಯ ಚಟುವಟಿಕೆ ಕೈಗೊಳ್ಳಲು ಅಸ್ತು ಎಂದಿದೆ. ಹೀಗಾಗಿ ಜನತೆ ನಗರ ಪ್ರದೇಶಕ್ಕೆ ಆಗಮಿಸಿ, ನಿತ್ಯದ ವಹಿವಾಟಿನಲ್ಲಿ ಪಾಲ್ಗೊಂಡಿದೆ. ಹಲವು ಅಂಗಡಿ ಮುಂಗಟ್ಟುಗಳ ಮುಂದೆ ಜನರು ಸಾಮಾಜಿಕ ಅಂತರವನ್ನೂ ಮರೆತು ನಿಲ್ಲುತ್ತಿರುವುದರಿಂದ ಪೊಲೀಸರು ಅವರಿಗೆ ಹೇಳಿ ಹೇಳಿಯೂ ಸುಸ್ತು ಹೊಡೆದಿದ್ದಾರೆ.
ಅಲ್ಲದೇ, ಇದರಿಂದ ನಗರಸಭೆ ನೌಕರರು ಪೊಲೀಸರೊಂದಿಗೆ ಕೈ ಜೋಡಿಸಿ ಸಾಮಾಜಿಕ ಅಂತರ ಕಾಪಾಡದ ಜನರಿಗೆ ಬೆತ್ತದ ಬಿಸಿ ತೋರಿಸಲು ಅವರೂ ಬೆತ್ತವನ್ನು ಹಿಡಿದು ಅಂಗಡಿ ಮುಂಗಟ್ಟುಗಳಿಗೆ ತೆರಳಿ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇದಲ್ಲದೇ ಅಂಗಡಿ ಮಾಲೀಕರಿಗೂ ಎಚ್ಚರಿಕೆ ಮೂಡಿಸುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ಸ್ಯಾನಿಟೈಜರ್‌ನಿಂದ ತೊಳೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.