ಗಂಗಾವತಿ: ದೀಪಾವಳಿ ಪಟಾಕಿ ಮಾರಾಟ; ಕಾಲೇಜು ಮೈದಾನ ಮಲಿನಗೊಳಿಸಿದ ಪಟಾಕಿ ವ್ಯಾಪಾರಸ್ಥರು
Team Udayavani, Oct 28, 2022, 9:55 AM IST
ಗಂಗಾವತಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಕರೆಯ ಮೂಲಕ ಮಾಲಿನ್ಯ ತಡೆಯುವ ಕಾರ್ಯ ಮಾಡುತ್ತಿದ್ದರೆ. ಗಂಗಾವತಿಯ ಪಟಾಕಿ ವ್ಯಾಪಾರಸ್ಥರು ದೀಪಾವಳಿಯ ಸಂದರ್ಭದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ಹಾಕಿ ವಾರಗಳ ಕಾಲ ಭರ್ಜರಿ ವ್ಯಾಪಾರ ಮಾಡಿ ಲಾಭ ಮಾಡಿಕೊಂಡು ಇದೀಗ ಇಡೀ ಮೈದಾನವನ್ನು ಮಲೀನಗೊಳಿಸಿದ್ದಾರೆ.
ಮೈದಾನದ ಸುತ್ತ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಪಟಾಕಿಯ ಡಬ್ಬಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದ ದೃಶ್ಯ ಕಂಡು ಬಂದಿದೆ. ನಗರ ಸಭೆಯವರು ಪಟಾಕಿ ಮಾರಾಟ ಮಾಡಲು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸ್ವಲ್ಪ ಜಾಗವನ್ನು ಪ್ರತಿ ವರ್ಷ ಪಟಾಕಿ ವ್ಯಾಪರಸ್ಥರಿಗೆ ಕೆಲವು ಷರತ್ತುಗಳೊಂದಿಗೆ ವಹಿಸುತ್ತಾರೆ. ಪ್ರತಿ ವರ್ಷವೂ ಪಟಾಕಿ ವ್ಯಾಪರಸ್ಥರು ದೀಪಾವಳಿ ಭರ್ಜರಿ ವ್ಯಾಪಾರ ಮಾಡಿಕೊಂಡು ನಂತರ ಪ್ರದೇಶವನ್ನು ಮಾಲಿನ್ಯಗೊಳಿಸಿ ಹೋಗುತ್ತಾರೆ. ಪಟಾಕಿ ವ್ಯಾಪಾರಸ್ಥರು ಲಾಭ ಮಾಡಿಕೊಂಡು ಕಾಲೇಜು ಮೈದಾನ ಸ್ವಚ್ಛಗೊಳಿಸುವ ಜವಾಬ್ದಾರಿ ನಗರಸಭೆಯವರಿಗೆ ವಹಿಸಲಾಗುತ್ತಿತ್ತು. ಲಾಭ ವ್ಯಾಪಾರಸ್ಥರಿಗೆ ಆಗುವುದರಿಂದ ಸ್ವಚ್ಛಗೊಳಿಸುವ ಕಾಯಕ ಮಾತ್ರ ನಗರ ಸಭೆಯವರಿಗೆ ನೀಡುವುದು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿತ್ತು.
ನಿತ್ಯವೂ ಸಾವಿರಾರು ಜನ ಜೂನಿಯರ್ ಕಾಲೇಜ್ ಮೈದಾನದಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡ್ತಾರೆ. ಜೂನಿಯರ್ ಕಾಲೇಜ್ ಮೈದಾನದಲ್ಲಿ ಎಂ.ಎನ್.ಎಂ. ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹೈಸ್ಕೂಲ್, ಮೌಲನಾ ಅಬ್ದುಲ್ ಕಲಾಂ ಆಜಾದ್ ಶಾಲೆ, ಉರ್ದುಶಾಲೆ, ಲಯನ್ಸ್ ಕ್ಲಬ್ ಶಾಲೆ, ಜೂನಿಯರ್ ಕಾಲೇಜು ಮತ್ತು ಹೈಸ್ಕೂಲ್ ವಿಭಾಗ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ನಿತ್ಯವೂ ಇಲ್ಲಿ ಸಂಚಾರ ಮಾಡುತ್ತಾರೆ. ಈ ಮಾಲಿನ್ಯದಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಜೂನಿಯರ್ ಕಾಲೇಜು ಮೈದಾನವನ್ನು ಮಲಿನಗೊಳಿಸಿದ ಪಟಾಕಿ ವ್ಯಾಪಾರಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸುವುದರ ಜೊತೆಗೆ ಇಡೀ ಮೈದಾನವನ್ನು ಸ್ವಚ್ಚಗೊಳಿಸುವ ಜವಾಬ್ದಾರಿಯನ್ನು ಪಟಾಕಿ ವ್ಯಾಪರಸ್ಥರಿಗೆ ವಹಿಸುವಂತೆ ಸಾರ್ವಜನಿಕರು ನಗರಸಭೆ ಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.