ಸಂಗಣ್ಣ ಕರಡಿ ಕುಣಿತ ಶುರು
Team Udayavani, Apr 4, 2019, 5:42 PM IST
ಕೊಪ್ಪಳ: ಲೋಕಸಭೆ ಚುನಾವಣೆ ಸಮರದ ಕಾವು ಬಿಸಿಲಿನ ಮಧ್ಯೆಯೂ ಜೋರಾಗುತ್ತಿದೆ. ಬುಧವಾರ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಸಿ, ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ನಗರದ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ ಸಂಗಣ್ಣ ಕರಡಿ ಅವರು ಬೆಂಬಲಿಗರೊಂದಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬಳಿಕ ಗವಿಮಠಕ್ಕೆ ತೆರಳಿ ಮಠದ ಮುಂಭಾಗದಲ್ಲಿ ನಮಸ್ಕರಿಸಿ ಪ್ರಚಾರ ಕಾರ್ಯಕ್ಕೆ ಅಣಿಯಾದರು. ಮಧ್ಯಾಹ್ನ 1:40ರಿಂದ ಆರಂಭವಾದ ರೋಡ್ ಶೋನಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.
ಮೆರವಣಿಗೆ ಸಾಗಿದ ರಸ್ತೆಗಳು ಕೇಸರಿಮಯವಾಗಿದ್ದವು. ಬಿಜೆಪಿ ಕಾರ್ಯಕರ್ತರು ಭಾವುಟ ಹಿಡಿದು ಮೋದಿ.. ಮೋದಿ .. ಎಂದು ಘೋಷಣೆ ಕೂಗುತ್ತ ಎಲ್ಲರ ಗಮನ ಸೆಳೆದರು. ಸಂಗಣ್ಣ ಕರಡಿಗೆ ಮತ ನೀಡಿ ಎನ್ನುವ ಘೋಷಣೆಯೂ ಅಲ್ಲಲ್ಲಿ ಕೇಳಿ ಬಂದಿತು. ಆರಂಭದಲ್ಲಿ ಪಾಲ್ಗೊಂಡ ಶಾಸಕ ಬಿ. ಶ್ರೀರಾಮುಲು ಅವರು ಗಡಿಯಾರ ಕಂಬದ ಮಾರ್ಗದತ್ತ ಮೆರವಣಿಗೆ ಸಾಗುತ್ತಿದ್ದಂತೆ ಅಲ್ಲಿಂದ ಬೇರೆಡೆ ತೆರಳಿದರು.
ಆದರೆ ಮುರಗೇಶ ನಿರಾಣಿ, ಹಾಲಪ್ಪ ಆಚಾರ್, ಪರಣ್ಣ ಸೇರಿ ಇತರೆ ನಾಯಕರು ಸಂಗಣ್ಣ ಕರಡಿಗೆ ಸಾಥ್ ನೀಡಿದರು.
ಬಿಸಿಲಿನ ತಾಪಕ್ಕೆ ಬೆಚ್ಚಿದ ಜನ: ಬಿರು ಬಿಸಿಲಿನ ಮಧ್ಯೆ ಮರವಣಿಗೆ ಸಾಗುತ್ತಿದ್ದಂತೆ ಬಿಸಿಲಿನ ಪ್ರಖರತೆಗೆ ಬೆಚ್ಚಿದ ಜನರು ಟೋಪಿ ಹಾಕಿಕೊಂಡೇ ಮೆರವಣಿಗೆಯ ಉದ್ದಕ್ಕೂ ಸಾಗಿದರು. ಹಲವರಂತೂ ನೆರಳು ಸಿಕ್ಕದ್ದಲ್ಲಿ ನಿಂತುಕೊಂಡರು. ತೆರೆದ ವಾಹನದಲ್ಲಿ ನಿಂತಿದ್ದ ಮುಖಂಡರ ಬೆವರಿಳಿಯುತ್ತಿತ್ತು. ಅದರ ಮಧ್ಯೆಯೂ ಮುಖಂಡರು ಇರುವ ಕಡೆ ಕೈ ಮಾಡುತ್ತಾ ಜೈಕಾರ ಕೂಗುತ್ತಿದ್ದರು.
ಅಶೋಕ ವೃತ್ತದತ್ತ ಸಾಗಿದ ಮೆರವಣಿಗೆ ಜೋರಾಗಿ ನಡೆಯಿತು. ಮೆರವಣಿಗೆ ಬಳಿಕ ಮಧ್ಯಾಹ್ನ 3 ಗಂಟೆ ವೇಳೆ ಸಂಗಣ್ಣ ಕರಡಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮತ್ತೂಮ್ಮೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇನ್ನೂ ಮೆರವಣಿಗೆಯಲ್ಲಿ ಲಂಭಾಣಿ ಮಹಿಳೆಯರು ಬಿಜೆಪಿ ಭಾವುಟ ಹಿಡಿದು ಜೈಕಾರ ಕೂಗುತ್ತಲೇ ಮೆರವಣಿಗೆಯಲ್ಲಿ ಸಾಗಿದರು. ವೇಷಧಾರಿಗಳು, ಮಜಲು ಗೊಂಬೆಗಳು ಗಮನ ಸೆಳೆದವು. ಯುವಕರು ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ಜೈಕಾರ ಹಾಕಿದರು.
ನಾಮಪತ್ರ ಹಾಗೂ ರೋಡ್ ಶೋನಲ್ಲಿ ಮಾಜಿ ಸಚಿವ ಲಕ್ಷ್ಮಣ್ಣ ಸವದಿ, ಮುರಗೇಶ ನಿರಾಣಿ, ಗೋವಿಂದ ಕಾರಜೋಳ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರ, ಹಾಲಪ್ಪ ಆಚಾರ್, ಪಕ್ಷದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಅದರಂತೆ ಸಂಗಣ್ಣ ಕರಡಿ ಅವರು ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಮಾಡಿದ ಅಭಿವೃದ್ಧಿಯೇ ಅವರ ಗೆಲವಿಗೆ ಶ್ರೀರಕ್ಷೆಯಾಗಲಿದೆ. ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ಸಂಗಣ್ಣ ಕರಡಿಗೆ ಮತ ನೀಡಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು.
ಬಿ. ಶ್ರೀರಾಮುಲು, ಶಾಸಕ
ನನ್ನ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಇಂದು ಜನತೆ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಲು ಬಯಸಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ರೈಲ್ವೆ ಸೇರಿ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಾವಿರಾರು ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಎಂಟೂ ಕ್ಷೇತ್ರಗಳಲ್ಲೂ ನನಗೆ ಅಭೂತಪೂರ್ವ ಮತಗಳನ್ನು ಜನರು ನೀಡಲಿದ್ದಾರೆ ಎನ್ನುವ ವಿಶ್ವಾಸವನ್ನಿಟ್ಟಿದ್ದೇನೆ.
ಸಂಗಣ್ಣ ಕರಡಿ, ಬಿಜೆಪಿ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.