ಗ್ರಾಮೀಣ ಕಲೆ ಉಳಿಸಿ-ಬೆಳೆಸಿ
Team Udayavani, Sep 16, 2019, 12:17 PM IST
ಕೊಪ್ಪಳ: ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ದ್ಯಾಮವ್ವ ದೇವಸ್ಥಾನ ಆವರಣದಲ್ಲಿ ನಡೆದ ತೊಗಲುಬೊಂಬೆಯಾಟ ಪ್ರದರ್ಶನವನ್ನು ಸಂತೋಷ ದೇಶಪಾಂಡೆ ಉದ್ಘಾಟಿಸಿದರು.
ಕೊಪ್ಪಳ: ದೇಶದ ಸಂಸ್ಕೃತಿ ಹಾಗೂ ಗ್ರಾಮೀಣ ಕಲೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಸಂತೋಷ ದೇಶಪಾಂಡೆ ಹೇಳಿದರು.
ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ದ್ಯಾಮವ್ವ ದೇವಸ್ಥಾನ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ತೊಗಲು ಬೊಂಬೆಯಾಟದ ವಿರಾಟ ಪರ್ವ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಂಸ್ಕೃತಿ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿ ಉಳಿದಿದ್ದು, ಅಂತಹ ಕಲೆಯನ್ನು ಬೆಳೆಸುವುದು ಅಗತ್ಯ. ಬಯಲಾಟ, ಸಾಮಾಜಿಕ ನಾಟಕ, ತೊಗಲುಬೊಂಬೆಯಾಟ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಜನರನ್ನು ಉತ್ತಮ ಸಂದೇಶ ನೀಡುವ ಕಾರ್ಯ ಮಾಡುತ್ತಿವೆ. ಅಳಿವಿನ ಅಂಚಿನಲ್ಲಿ ಇರುವ ಇಂತಹ ಕಲೆಗಳನ್ನು ಯುವಕರು ತಿಳಿದುಕೊಳ್ಳುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಇಂದಿನ ಯುವ ಜನತೆ ಕೇವಲ ಮೊಬೈಲ್ನಲ್ಲೇ ಕಾಲ ಕಳೆಯುತ್ತಿದ್ದಾರೆ. ಪ್ರಾಚೀನ ಭಾರತದ ಇತಿಹಾಸವು ತೊಗಲುಬೊಂಬೆಯಾಟ, ಗೀಗೀ ಪದ, ಜನಪದ, ಪುರಾಣ ಸೇರಿದಂತೆ ಹಲವು ವಿಷಯಗಳಿಂದ ಉಳಿದಿದೆ. ಹಿಂದಿನ ಕಾಲದಲ್ಲಿ ಅನಕ್ಷರಸ್ಥರು ಇದ್ದರೂ ಸಹ ಇಂತಹ ಕಲೆಗಳ ಪ್ರದರ್ಶನ ನೀಡುವ ಮೂಲಕ ಅವರಿಗೆ ತಿಳಿವಳಿಕೆ ನೀಡಲಾಗುತ್ತಿತ್ತು. ಭಾರತ ದೇಶ ವಿಶ್ವಕ್ಕೆ ಗುರುವಾಗಿರುವುದಕ್ಕೆ ಗ್ರಾಮೀಣ ಬದುಕಿನ ಸಾಹಿತ್ಯ, ಸಂಸ್ಕೃತಿಯೇ ಮೂಲ ಕಾರಣವಾಗಿದೆ ಎಂದರು.
ಪಿಕಾಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಯಲ್ಲಪ್ಪ ಮೇಟಿ ಮಾತನಾಡಿ, ಗ್ರಾಮೀಣ ಕಲೆ ಅಳಿವಿನ ಅಂಚಿಗೆ ತಲುಪಿದ್ದು, ಯುವಕರು ಇಂತಹ ಕಲೆಯನ್ನು ಬೆಳೆಸಬೇಕು. ಕೇವಲ ಮೊಬೈಲ್ ಹಾಗೂ ಟಿವಿ ಮಾಧ್ಯಮದಿಂದ ರಂಗಭೂಮಿ ಕಲೆ ಮರೆಯಾಗುತ್ತಿದೆ. ಇದನ್ನು ಬೆಳೆಸುವುದು ಅಗತ್ಯವಿದೆ ಎಂದರು.
ಗ್ರಾಮ ಪಂಚಾಯಿತ್ ಸದಸ್ಯರಾದ ರಹಿಮಾನ್‌ಸಾಬ್ ನದಾಫ್, ಪ್ರಕಾಶ ಸುಳ್ಳದ, ಮುಖಂಡರಾದ ನಿಂಗನಗೌಡ ಡಂಬಳ, ಶರಣಪ್ಪ ಕುಂಬಾರ, ಶಿವಪುತ್ರಪ್ಪ ಮುದ್ಲಾಪುರ, ಕಲ್ಲಯ್ಯ ಗೊಂಡಬಾಳ, ಫಕೀರಪ್ಪ ಮಂಡಲಗೇರಿ, ವಿರೂಪಾಕ್ಷಪ್ಪ ಶೆಟ್ಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೋರನಾಳ ಗ್ರಾಮದ ಕೇಶಪ್ಪ ಕಿಳೇಕ್ಯಾತರ್, ವಸಂತಕುಮಾರ ಕಿಳೇಕ್ಯಾತರ್ ಅವರು ತೊಗಲು ಬೊಂಬೆಯಾಟದ ವಿರಾಟ ಪರ್ವ ಪ್ರದರ್ಶನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.