ಗಿಡಗಳ ಕಡಿತಕ್ಕೆ ದಂಡ, ಊಟದ ಕೊಠಡಿಗೆ ತಡೆ

ಶಾಲಾ ಆವರಣದಲ್ಲಿದ್ದ ಗಿಡಗಳ ತೆರವು; ಸಮರ್ಪಕ ಮಾಹಿತಿ ಸಿಗದ್ದಕ್ಕೆ ಪಾಲಕರ ಕಿಡಿ

Team Udayavani, Oct 30, 2022, 7:24 PM IST

11

ಹನುಮಸಾಗರ: ಯರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಊಟದ ಕೊಠಡಿ ನಿರ್ಮಾಣಕ್ಕಾಗಿ ಗಿಡ-ಮರಗಳನ್ನು ಕಡಿದ ಹಿನ್ನೆಲೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಹನ್ನೆರಡು ಸಾವಿರ ರೂ. ದಂಡ ಹಾಕಲಾಗಿದೆ.

ಶಾಲಾ ಆವರಣದ ಅಡುಗೆ ಕೊಠಡಿ ಪಕ್ಕ ಊಟದ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳಲು ಗ್ರಾಪಂ ಸದಸ್ಯರು ನಿರ್ಣಯಿಸಿದ್ದರು. ಅದಕ್ಕಾಗಿ ಮೂರು ಬೇವಿನ ಮರ ಮತ್ತು ಎರಡು ಆಕಾಶ ಮಲ್ಲಿಗೆ ಗಿಡಗಳನ್ನು ಕತ್ತರಿಸಲಾಗಿತ್ತು. ವಿಷಯ ತಿಳಿಯುತ್ತಲೇ ಅರಣ್ಯಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ಗಿಡಗಳ ಮಾರಣ ಹೋಮ ಹಾಗೂ ಸರ್ಕಾರಿ ಆಸ್ತಿ ಹಾಳು ಮಾಡಲಾಗಿದೆ ಎಂದು ಈ ಕ್ರಮ ಜರುಗಿಸಿದ್ದಾರೆ.

ಈ ಊಟದ ಕೊಠಡಿ ಕಾಮಗಾರಿ ಬಗ್ಗೆ ಎಸ್‌ಡಿಎಂಸಿ ಸದಸ್ಯರಾಗಲಿ, ಗ್ರಾಪಂ ಸದಸ್ಯರಾಗಲಿ ಯಾವುದೇ ಮಾಹಿತಿ ನೀಡಿಲ್ಲ ಎನ್ನುತ್ತಾರೆ ಮುಖ್ಯಶಿಕ್ಷಕ ಹೇಮಲೆಪ್ಪ ನಾಯಕ್‌. ಈ ನಡುವೆ ಸ್ಪಷ್ಟ-ಸಮರ್ಪಕ ಮಾಹಿತಿ ಸಿಗದ ಕಾರಣ ಪಾಲಕರು ಕಾಮಗಾರಿ ತಡೆದಿದ್ದಾರೆ.

ಊಟದ ಕೊಠಡಿ ನಿರ್ಮಾಣ ಜಾಗದಲ್ಲಿರುವ ಕೊಳವೆಬಾವಿಗೆ ಮೋಟಾರ್‌ ಇಳಿಸಿದರೆ ನೀರು ದೊರೆಯುತ್ತಿತ್ತು. ಆದರೆ ಅದನ್ನು ಮುಚ್ಚಿದ್ದಾರೆ. ಗ್ರಾಪಂನಿಂದ ಎನ್‌ಆರ್‌ಐಜಿ ಯೋಜನೆಯಡಿ 19 ಲಕ್ಷ ರೂ. ಅನುದಾನ ಮೀಸಲಿಟ್ಟು ಕಾಮಗಾರಿ ಶುರು ಮಾಡಿದ್ದರು. ಈ ಸ್ಥಳದಲ್ಲಿ ಬಾತರೂಮ್‌ ಪಿಟ್‌ ಇದ್ದರೂ ಲೆಕ್ಕಿಸದೇ ಕಾಲಂ ಹಾಕಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಅತಂತ್ರ: ಕಳೆದ ಆರು ತಿಂಗಳಿನಿಂದ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನ ಖಾಲಿ ಇದೆ. ಎಸ್‌ಡಿಎಂಸಿ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ನಡೆದ ಹಿನ್ನೆಲೆಯಲ್ಲಿ ಆ ಸ್ಥಾನ ಖಾಲಿ ಉಳಿದಿದೆ. ಎಸ್‌ಡಿಎಂಸಿ 15 ಸದಸ್ಯರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಳಿಕ ವಾಪಸ್‌ ಪಡೆಯುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ಮನವಿ ಸಲ್ಲಿಸಿದ್ದಾರೆ. ಮುಖ್ಯಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ರಾಜೀನಾಮೆ ವಾಪಸು ಪಡೆಯುವ ಅರ್ಜಿಗಳನ್ನು ವರದಿ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಇಂತಹ ಸಮಯದಲ್ಲಿ ಕಾಮಗಾರಿ ಬೇಡವೆಂದರೂ ನಡೆಸಲಾಗುತ್ತಿದೆ ಎಂದು ಎಸ್‌ಡಿಎಂಸಿ ಉಪಾಧ್ಯಕ್ಷೆ ಶರಣಮ್ಮ ಕನಕಪ್ಪ ಯಲಬುಣಚಿ ಆರೋಪಿಸಿದ್ದಾರೆ.

ಊಟದ ಕೊಠಡಿ ಕಾಮಗಾರಿ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರನ್ನು ಕೇಳಿದರೂ ಸಮರ್ಪಕ ಮಾಹಿತಿ ಸಿಗುತ್ತಿಲ್ಲ.  -ಶರಣಪ್ಪ ಕಟಾಪುರ, ಪರಶುರಾಮ ಉಪ್ಪಾರ, ಶರಣಪ್ಪ ಮಂಡಲಮರಿ ಪಾಲಕರು

ಕೆಲ ದಿನಗಳ ಹಿಂದೆ ಕೊಳವೆ ಬಾವಿಯನ್ನು ಪರೀಕ್ಷಿಸಿದಾಗ ನೀರು ಇರುವುದು ಕಂಡುಬಂದಿತ್ತು. ಆದರೆ ಮೋಟಾರ್‌ ಸುಟ್ಟು ಹೋಗಿದ್ದರಿಂದ ಅದನ್ನು ಹಾಗೆ ಬಿಡಲಾಗಿತ್ತು. -ಶೇಖದಾದು, ಯರಗೇರಿ ಗ್ರಾಪಂ ಪಿಡಿಒ

ಊಟದ ಕೊಠಡಿಗೆ ಸಂಬಂಧಿಸಿದಂತೆ ಸೋಮವಾರ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.  -ಸುರೇಂದ್ರ ಕಾಂಬ್ಳೆ, ಕುಷ್ಟಗಿ ಬಿಇಒ

„ವಸಂತಕುಮಾರ ಸಿನ್ನೂರ

ಟಾಪ್ ನ್ಯೂಸ್

BGT 2024-25: Australia’s Squad For 1st Test against India announced

BGT: ಭಾರತ ವಿರುದ್ದದ ಮೊದಲ ಟೆಸ್ಟ್‌ ಗೆ ಆಸೀಸ್‌ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ

Pilikulka-Kambala

Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!

BS-yadiyurappa

Covid Scam: ಕೋವಿಡ್‌ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ

Palimaru-Swamji

Waqf Notice: ವಕ್ಫ್ ಬೋರ್ಡ್‌ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

Eidu-1

Karkala: ಈದು ಗ್ರಾಮವನ್ನು ಮರೆತು ಬಿಟ್ಟಿದೆಯೇ ಸರಕಾರ?

BJP-JDS-congress-Party

Election Campaign: ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ

Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ

ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!

ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು

ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

BGT 2024-25: Australia’s Squad For 1st Test against India announced

BGT: ಭಾರತ ವಿರುದ್ದದ ಮೊದಲ ಟೆಸ್ಟ್‌ ಗೆ ಆಸೀಸ್‌ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ

Pilikulka-Kambala

Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!

BS-yadiyurappa

Covid Scam: ಕೋವಿಡ್‌ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ

Palimaru-Swamji

Waqf Notice: ವಕ್ಫ್ ಬೋರ್ಡ್‌ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.