ಜಿಲ್ಲೆಯಲ್ಲಿ 3.03 ಲಕ್ಷ ಜನರ ಸ್ಕ್ರೀನಿಂಗ್
ಗುಳೆ ಹೋಗಿದ್ದ 51,994 ಜನ ಜಿಲ್ಲೆಗೆ ವಾಪಾಸ್
Team Udayavani, Jun 11, 2020, 5:12 PM IST
ಸಾಂದರ್ಭಿಕ ಚಿತ್ರ
ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಲಾಕ್‌ಡೌನ್ ಜಾರಿಯಾದ ದಿನದಿಂದ ಈ ವರೆಗೂ ಬರೊಬ್ಬರಿ 3,03,675 ಜನರನ್ನು ಸ್ಕ್ರೀನಿಂಗ್ ಮಾಡಿದೆ. ಅನ್ಯ ಜಿಲ್ಲೆ, ರಾಜ್ಯ ಸೇರಿದಂತೆ ವಿದೇಶದಿಂದ ಬಂದವರ ಮೇಲೂ ನಿಗಾ ಇರಿಸಿ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನಿಸಿದೆ.
ಕೊಪ್ಪಳ ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶ. ಈ ಭಾಗದಲ್ಲಿ ಮಳೆಯಾಗುವುದೇ ಕಡಿಮೆ ಎನ್ನುವ ಸ್ಥಿತಿಗೆ ಬಂದಿದೆ. ಹಾಗಾಗಿ ಜಿಲ್ಲೆಯ ಸಾವಿರಾರು ಜನರು ತುತ್ತಿನ ಬದುಕಿಗಾಗಿ ದೂರದ ಊರುಗಳಿಗೆ ಗುಳೆ ಹೋಗಿ ಜೀವನ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಮಹಾಮಾರಿ ಕೋವಿಡ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದೆ.
ಭಾರತಕ್ಕೆ ಕೋವಿಡ್ ಕಾಲಿಡುತ್ತಿದ್ದಂತೆ ಕೇಂದ್ರ ಸರ್ಕಾರವು ದಿಟ್ಟ ನಿರ್ಧಾರ ಕೈಗೊಳ್ಳುತ್ತಲೇ ಬಂದಿತು. ಬಳಿಕ ರಾಜ್ಯ ಸರ್ಕಾರವೂ ಲಾಕ್‌ಡೌನ್ ಘೋಷಣೆಯ ನಿರ್ಧಾರ ಮಾಡಿತು. ಅಲ್ಲದೇ ಕೋವಿಡ್ ನಿಯಂತ್ರಣಕ್ಕೆ ಗುಳೆ ಹೋಗಿದ್ದವರು ಪುನಃ ತವರು ಜಿಲ್ಲೆ, ಊರುಗಳಿಗೆ ತೆರಳಿ ಎನ್ನುವ ಸಂದೇಶ ನೀಡಿತು. ಬರೊಬ್ಬರಿ ಎರಡು ತಿಂಗಳ ಲಾಕ್ ಡೌನ್ ಜಾರಿಯಾದ ಬಳಿ ಜಿಲ್ಲೆಯಿಂದ ದೂರದ ಊರುಗಳಿಗೆ ಗುಳೆ ಹೋಗಿದ್ದ ಸಾವಿರಾರು ಜನರು ಸಂಕಷ್ಟ ಎದುರಿಸಿ ಪುನಃ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಕೆಲವು ಕಾರ್ಮಿಕರಿಗೆ ಸರ್ಕಾರ ಬಸ್ ವ್ಯವಸ್ಥೆ ಮಾಡಿದರೆ, ಇನ್ನೂ ಕೆಲ ಕಾರ್ಮಿಕರ ಬಗ್ಗೆ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ನಿಗಾ ವಹಿಸಿ ಆಯಾ ಜಿಲ್ಲೆಗಳಲ್ಲಿಯೇ ವಸತಿ ವ್ಯವಸ್ಥೆ ಮಾಡಿದ್ದರು. ಆದರೂ ಜನತೆ ಅನ್ಯ ಮಾರ್ಗಗಳ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ.
3,03,675 ಜನರಿಗೆ ಸ್ಕ್ರೀನಿಂಗ್: ಜಿಲ್ಲಾಡಳಿತವು ವಿವಿಧ ಮಾರ್ಗಗಳ ಮೂಲಕ ಜಿಲ್ಲೆ ಪ್ರವೇಶಿಸುವವರ ಮೇಲೆ ಹೆಚ್ಚಿನ ನಿಗಾ ವಹಿಸಿ ಕೋವಿಡ್ ಬಾರದಂತೆ ನೋಡಿಕೊಳ್ಳಲು ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡಿದೆ. ಲಾಕ್ ಡೌನ್‌ಯಿಂದ ಈ ವರೆಗೂ 3,03,675 ಜನರ ಸ್ಕ್ರೀನಿಂಗ್ ಮಾಡಿದೆ. ಈ ಪೈಕಿ ರೈಲ್ವೇ ನಿಲ್ದಾಣದಲ್ಲಿ 894 ಜನ, ಬಸ್ ನಿಲ್ದಾಣದಲ್ಲಿ 7279 ಜನ, ಚೆಕ್‌ಪೋಸ್ಟ್ ನಲ್ಲಿ 1,31,329 ಜನ, ಕಂಟೇನ್ಮೆಂಟ್ ಝೋನ್‌ನಿಂದ ಬಂದವರ 9760 ಜನ, ಇತರೆ ಏರಿಯಾದಿಂದ ಬಂದ 1,02,419 ಜನ, ವಲಸೆ ಕಾರ್ಮಿಕರು 51,994 ಜನರು ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಅವರೆಲ್ಲರನ್ನೂ ಜಿಲ್ಲಾಡಳಿತವು ಸ್ಕ್ರೀನಿಂಗ್ ಮಾಡಿದೆಯಲ್ಲದೇ ಅವರೆಲ್ಲರನ್ನೂ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ. ಬಹುಪಾಲು ಇವರಲ್ಲಿ ಕ್ವಾರಂಟೈನ್ ಅವಧಿಯನ್ನೂ ಪೂರೈಸಿದ್ದಾರೆ.
5,281 ಜನರ ವರದಿ ನೆಗಟಿವ್: ಇನ್ನೂ ಗುಳೆ ಹೋಗಿ ಜಿಲ್ಲೆಗೆ ವಾಪಸ್ಸಾದ, ಅನ್ಯ ಜಿಲ್ಲೆ, ರಾಜ್ಯಗಳಿಂದ ಬಂದ ಜನರ ಪೈಕಿ 5449 ಜನರ ಗಂಟಲು ದ್ರವ ಸಂಗ್ರಹ ಮಾಡಿರುವ ಜಿಲ್ಲಾಡಳಿತವು ಪ್ರಯೋಗಾಲಯಕ್ಕೆ ರವಾನೆ ಮಾಡಿದೆ. ಇವರಲ್ಲಿ 5,281 ಜನರ ವರದಿ ನೆಗೆಟಿವ್ ಬಂದಿವೆ. ಇನ್ನೂ 12 ಜನರಿಗೆ ಪಾಸಿಟಿವ್ ಕೇಸ್ ಬಂದಿದ್ದು, ಇವರಲ್ಲಿ 4 ಜನ ಈಗಾಗಲೇ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 156 ಜನರ ವರದಿ ಬರುವುದು ಬಾಕಿಯಿದೆ.
ಒಟ್ಟಿನಲ್ಲಿ ಜಿಲ್ಲಾಡಳಿತವು ಪ್ರತಿಯೊಬ್ಬರ ಮೇಲೂ ನಿಗಾ ವಹಿಸಿದ್ದು, ಆರೋಗ್ಯ ಇಲಾಖೆಯಂತೂ ಹಗಲು-ರಾತ್ರಿ ಕೆಲಸದಲ್ಲಿ ತಲ್ಲೀನವಾಗಿವೆ. ಕೋವಿಡ್ ಸೋಂಕು ದೃಢಪಡುತ್ತಿದ್ದಂತೆ ಆ ಕ್ಷೇತ್ರವನ್ನು ಸೀಲ್ ಡೌನ್ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರ ತಂಡವೂ ಸೋಂಕಿತರಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.