ವೈಭವದ ಸದ್ಭಾವನಾ ಪಾದಯಾತ್ರೆ
Team Udayavani, Nov 23, 2019, 3:33 PM IST
ಕಾರಟಗಿ: ಸಮೀಪದ ಮೈಲಾಪೂರ ಗ್ರಾಮದಲ್ಲಿ ಶುಕ್ರವಾರ ಕೊಪ್ಪಳದ ಗವಿಶ್ರೀಗಳ 8ನೇ ದಿನದ ಸದ್ಭಾವನಾ ಪಾದಯಾತ್ರೆ ವೈಭವದಿಂದ ನಡೆಯಿತು. ಶ್ರೀಗಳ ಪಾದಯಾತ್ರೆ ನಿಮಿತ್ತ ಗ್ರಾಮದ ಎಲ್ಲ ರಸ್ತೆಗಳು ಹೂವು, ರಂಗೋಲಿ ಹಾಗೂ ತಳಿರು-ತೋರಣಗಳಿಂದ ಕಂಗೊಳಿಸುತ್ತಿದ್ದವು. ಶ್ರೀಗಳು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿಯೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಶ್ರದ್ಧಾಭಕ್ತಿಯಿಂದ ಸ್ವಾಗತಿಸಿದರು.
ಬೆಳಗ್ಗೆ 6ಕ್ಕೆ ಮೈಲಾಪೂರ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಆರಂಭವಾದ ಸದ್ಭಾವನಾ ಯಾತ್ರೆ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸುತ್ತ ನಿಜಲಿಂಗಮ್ಮ ದೇವಸ್ಥಾನ, ಶ್ರೀ ಶರಣ ಬಸವೇಶ್ವರ ದೇವಸ್ಥಾನ, ಹಿರೇದೇವತೆ ದೇವಸ್ಥಾನದ ಮೂಲಕ ಸಾಗಿ ಮರಳಿ ರಾಮಲಿಂಗೇಶ್ವರ ದೇವಸ್ಥಾನ ತಲುಪಿತು. ಯಾತ್ರೆಯಲ್ಲಿ ಗವಿಶ್ರೀಗಳಿಗೆ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲರೂ ತಲೆಬಾಗಿ ನಮಸ್ಕರಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಶ್ರೀಗಳು ಭಕ್ತ ಸಮೂಹಕ್ಕೆ ಆಶೀರ್ವದಿಸಿದರು.
ಮೆರವಣಿಗೆಯಲ್ಲಿ ಬಳಗಾನೂರಿನ ಚಿಕೇನಕೊಪ್ಪ ಮಠದ ಶ್ರೀಶಾಂತವೀರ ಶರಣರು ಭಕ್ತಿಗೀತೆ, ತತ್ವಪದಗಳನ್ನು ಹಾಡಿದರು. ಭಜನಾ ತಂಡದೊಂದಿಗೆ ಶ್ರೀಶಾಂತವೀರ ಶರಣರು ಹಾಡುತ್ತ ಹೆಜ್ಜೆಹಾಕುತ್ತಿದ್ದರು. ನಾಗನಕಲ್-ಮೈಲಾಪೂರ ಗ್ರಾಮದಲ್ಲಿ ಸದ್ಭಾವನಾ ಯಾತ್ರೆ ನಡೆಸಲು ಗವಿಶ್ರೀಗಳು ಶುಕ್ರವಾರ ಬೆಳಗ್ಗೆ ದೇವಿಕ್ಯಾಂಪ್, ರತ್ನಗಿರಿ ಪರ್ವತದಿಂದ ತೆರಳುವ ಮಾರ್ಗಮಧ್ಯದಲ್ಲಿ ಬರುವ ನಾಗನಕಲ್ ಗ್ರಾಮದಲ್ಲಿ ಸರ್ವಧರ್ಮಿಯರು ರಸ್ತೆಯ ಇಕ್ಕೇಲಗಳಲ್ಲಿ ನಿಂತು ಶ್ರೀಗಳಿಗೆ ಸ್ವಾಗತಕೋರಿ ಭಾವೈಕ್ಯ ಮೆರೆದರು. ಶಿವಲಿಂಗಯ್ಯ ಸ್ವಾಮಿಗಳು, ವೀರಭದ್ರಯ್ಯ ಸ್ವಾಮಿಗಳು, ರುದ್ರಮುನಿ ಸ್ವಾಮಿಗಳು, ಅಮರಯ್ಯಸ್ವಾಮಿ ಹಿರೇಮಠ, ಮರುಳ ಸಿದ್ಧಯ್ಯಸ್ವಾಮಿ ಹಿರೇಮಠ ಪಾಲ್ಗೊಂಡಿದ್ದರು.
ಮಾಜಿ ಸಚಿವ ಶಿವರಾಜ ತಂಗಡಗಿ,ಅನ್ನದಾನಗೌಡ, ತಿರುಪತೆಪ್ಪ ಗುಡಿತಾಳ, ಮಲ್ಲನಗೌಡ ಮೇಳಮಾಳಗಿ, ಸುಕುಮುನೆಪ್ಪ ಕಲ್ಮಂಗಿ, ಮಲ್ಲನಗೌಡ, ಯಮನಪ್ಪ ತಳವಾರ, ವೀರೇಶ ತಳವಾರ, ಅಯ್ಯನಗೌಡ ಮೇಲಮಾಳಗಿ, ಚೇರಮನ್ ವೀರನರ್ಗವಡ, ಸಂಗಪ್ಪ ದಾಸನಾಳ, ಅಮರಯ್ಯಸ್ವಾಮಿ, ಶರಣಯ್ಯಸ್ವಾಮಿ, ಅಮರೇಶ ಮೈಲಾಪೂರ, ಕೆ. ಸಿದ್ಧನಗೌಡ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.