ಭಾಷಣಕಾರನಿಗೆ ಆತ್ಮ ವಿಶ್ವಾಸ ಮುಖ್ಯ: ಅಂಡಗಿ

Team Udayavani, Nov 7, 2020, 9:09 PM IST

KOPALA-TDY-1

ಕೊಪ್ಪಳ: ಆತ್ಮವಿಶ್ವಾಸವಿಲ್ಲದ ಭಾಷಣಕಾರನಿಗೆ ಯಶಸ್ಸು ಸಿಗದು. ಆತನಿಗೆ ಆತ್ಮವಿಶ್ವಾಸ ಮುಖ್ಯ. ಅನೇಕ ದಿನಗಳ ಸಾಧನೆ, ನಿರಂತರ ಪ್ರಯತ್ನದಿಂದ ಭಾಷಣ ಕಲೆ ಕರಗತವಾಗಲಿದೆ. ಭಾಷಣಕಾರನಲ್ಲಿ ಕೇವಲ ಧ್ವನಿಶಕ್ತಿಯೊಂದಿದ್ದರೆ ಸಾಲದು, ಮಾತಿನಲ್ಲೊಂದು ಆಕರ್ಷಕ ಶೈಲಿ ಇರಬೇಕು ಎಂದು ಚುಸಾಪ ಅಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು.

ಕೊಪ್ಪಳದ ಪ್ರಧಾನ ಅಂಚೆ ಕಚೇರಿಯಲ್ಲಿ “ಜಾಗರೂಕತೆ ಜಾಗೃತಿ ವಾರ’ದ ಅಂಗ ವಾಗಿ ಹಮ್ಮಿಕೊಂಡ ಭಾಷಣ ಸ್ಪರ್ಧೆ ನಿರ್ಣಾಯಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಭಾಷಣಕಾರ ತನ್ನ ಮಾತಿನ ಮೂಲಕ ಕೇಳುಗರನ್ನು ಆಕರ್ಷಿಸಿ, ಅವರಲ್ಲಿ ಮುಂದಿನ ಮಾತು ಕೇಳಬೇಕೆನ್ನುವ ಕುತೂಹಲ ಹುಟ್ಟಿಸುತ್ತಾ, ಆಸಕ್ತಿ ಕೆರಳಿಸುತ್ತಾ ತನ್ನ ವಿಚಾರಗಳತ್ತ ಗಮನಸೆಳೆಯುವ ಪ್ರಯತ್ನ ಮಾಡಬೇಕು. ಭಾಷಣಕಾರ ಹೆದರದೇ, ಬೆದರದೇ, ಕಂಪಿಸದೇ, ಕಂಠಪಾಠಮಾಡದೇ ಮಾತಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಮಾತೃಭಾಷೆಯಿಂದ ಮಾತ್ರ ತಮ್ಮ ಭಾವನೆಗಳನ್ನು ನಿರ್ಭಯದಿಂದ, ನಿರರ್ಗಳ, ನಿರ್ಭೀತಿಯಿಂದ ವ್ಯಕ್ತಪಡಿಸಲು ಸಾಧ್ಯ ಎಂದರು.

ಭಾಷಣಕಾರನು ನಿತ್ಯ ಅಧ್ಯಯನ, ನಿರಂತರ ಓದು, ಬರಹ ಮಾಡುತ್ತಿರಬೇಕು. ಈ ಮೂರು ಕಾರ್ಯ ನಿಂತರೆ ಮಾತಿಗೆ ಹೊಸತನಬರದು. ಭಾಷಣಕಾರನ ವೇಷಭೂಷಣವೂ ಆಕರ್ಷಕವಾಗಿರಬೇಕು. ಭಾಷಣ ಸಂಕ್ಷಿಪ್ತ ಮತ್ತು ಹೃದಯಸ್ಪರ್ಶಿಯಾಗಿರಬೇಕು ಎಂದರು. ಮತ್ತೋರ್ವ ನಿರ್ಣಾಯಕ ರವಿ ಕಾಂತನವರ ಮಾತನಾಡಿ, ವಿದ್ಯಾರ್ಥಿಗಳು ಈಗಾಗಲೇ ಪ್ರಸಿದ್ಧರಾಗಿರುವ ಭಾಷಣಕಾರರ ಭಾಷಣಗಳನ್ನು ಕೇಳಿ ಅವುಗಳ ಅಧ್ಯಯನ ಮಾಡಬೇಕು. ಭಾಷಣಕಾರನಿಗೆ ಪ್ರಚಲಿತ ವಿದ್ಯಮಾನಗಳ ಜ್ಞಾನ, ವಿಷಯಜ್ಞಾನವಿರಬೇಕು ಎಂದರು.

ಅಂಚೆ ಪಾಲಕ ಬಿ.ವಿ. ಅಂಗಡಿ ಮಾತನಾಡಿದರು. ವಿವಿಧ ಅಂಚೆ ಪಾಲಕರಾದ ವೈ.ವೈ. ಕೋಳೂರು, ಹನುಮಂತರಾವ್‌ ಕುಲಕರ್ಣಿ, ಎಂ.ಡಿ. ಸುಭಾನ ಅಂಚೆ ಇಲಾಖೆಯ ವೀಣಾ ಅಬ್ಬಿಗೇರಿ, ಎಸ್‌.ಸಿ. ಚುಳಕಿ ಸೇರಿ ಇತರರು ಇದ್ದರು. ಭಾಷಣ ಸ್ಪರ್ಧೆಯಲ್ಲಿ ಶ್ರೀರûಾ ಹನುಮಂತರಾವ್‌ ಕುಲಕರ್ಣಿ ಪ್ರಥಮ, ಮಂಥನ ಕಿರಣ ಹೆಬ್ಬಳ್ಳಿ ದ್ವಿತೀಯ, ಶರಣ್ಯ ಸರ್ವೋತ್ತಮ ಉಪಾಧ್ಯಾಯ ತೃತೀಯ ಸ್ಥಾನ ಪಡೆದರು. ದಿವ್ಯಾ ವೀರಣ್ಣ ಪತ್ತಾರ, ಅನೀಷ ಕಿರಣ ಆಶ್ರಿತ, ಧರಣಿ ಉಷಾ ಆರ್‌., ಇಕಾಮಹಮ್ಮದ್‌ ಹುಸೇನ್‌ ಫಾತೀಮಾ, ಶ್ರೀನಿವಾಸಶಂಕರ ನಾಯಕ, ಉಮಾ ಬಸವರಾಜ ತಲೆಕಾನ, ಆಫìತಾ ಮಹಮ್ಮದಗೌಸ್‌ ತಾಡಪತ್ರಿ ಸಮಾಧಾನಕರ ಬಹುಮಾನ ಪಡೆದರು.

ಕೊಪ್ಪಳ ಬಜಾರ ಉಪ ಅಂಚೆಪಾಲಕ ಜಿ.ಎನ್‌. ಹಳ್ಳಿ ನಿರೂಪಿಸಿದರು. ಶಂಕರ ನಾಯಕ ಸ್ವಾಗತಿಸಿದರು. ಅಂಚೆ ಇಲಾಖೆ ಖಜಾಂಚಿ ಲಕ್ಷ್ಮೀ ನಾರಾಯಣ ಜಹಗೀರದಾರ ವಂದಿಸಿದರು.

ಟಾಪ್ ನ್ಯೂಸ್

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ

Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ

ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!

ಗಂಗಾವತಿ: ಹಳ್ಳದ ಬದಿ ಹೊಸ್ಕೇರಾ-ಡಗ್ಗಿ ದಲಿತರ ಶವ ಸಂಸ್ಕಾರ- ಅಸ್ಪ್ರಶ್ಯತೆ ಇನ್ನೂ ಜೀವಂತ!

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು

ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.