ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಹೆಸರಿಡಿ
Team Udayavani, Nov 26, 2019, 3:29 PM IST
ಕೊಪ್ಪಳ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಶ್ರೀ ಸೇವಾಲಾಲ್ ಮಹಾರಾಜರ ಹೆಸರು ನಾಮಕರಣ ಮಾಡಬೇಕೆಂದು ತಾಲೂಕಿನ ಬಂಜಾರ ಸಮುದಾಯ ಆಲ್ ಇಂಡಿಯಾ ಬಂಜಾರ್ ಸೇವಾ ಸಂಘವು ತಹಶೀಲ್ದಾರ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿತು.ತಾಲೂಕ ಅಧ್ಯಕ್ಷ ಪಂಪಣ್ಣ ಪೂಜಾರ ಮತ್ತು ತಾಪಂ ಸದಸ್ಯ ಚಂದ್ರಕಾಂತ ನಾಯ್ಕನೇತೃತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಜಿ.ಬಿ. ಮಜ್ಜಿಗೆ ಅವರಿಗೆ ಮನವಿಸಲ್ಲಿಸಲಾಯಿತು.
ಈ ವೇಳೆ ಪಂಪಣ್ಣ ಪೂಜಾರ ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣ ಸ್ಥಾಪನೆಗೆ ಬಂಜಾರ ಸಮುದಾಯದ ಎರಡು ತಾಂಡಾಗಳನ್ನು ಸರಕಾರ ವಶಪಡಿಸಿಕೊಂಡಿದೆ. 600ಕ್ಕೂ ಅ ಧಿಕ ಮನೆಗಳನ್ನು ನೆಲಸಮಮಾಡಿದ್ದಾರೆ. 769 ಎಕರೆ ಜಮೀನುಗಳನ್ನು ನಮ್ಮ ಬಂಜಾರ ಸಮಾಜ ಬಾಂಧವರು ಕಳೆದುಕೊಂಡಿರುತ್ತಾರೆ. ಮತ್ತು ಸಂತ ಶ್ರೀ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮ ದೇವಸ್ಥಾನಗಳನ್ನು ನೆಲಸಮ ಮಾಡಿದ್ದಾರೆ. ಮನೆ ಮತ್ತು ಜಮೀನುಕಳೆದುಕೊಂಡಿರುವ ನಮ್ಮ ಬಂಜಾರ ಸಮಾಜದವರಿಗೆ ಯಾವುದೇ ರೀತಿಯಉದ್ಯೋಗ ಮತ್ತು ಪರಿಹಾರ ಕೊಟ್ಟಿಲ್ಲ. ಆದರೆ ವಿಮಾನ ನಿಲ್ದಾಣಕ್ಕೆ ಸಂತ ಶ್ರೀ ಸೇವಾಲಾಲ್ ಹೆಸರಿಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ವಿಮಾನ ನಿಲ್ದಾಣಕ್ಕೆ ಸಂತ ಶ್ರೀ ಸೇವಾಲಾಲ್ ಹೆಸರಿಡಲು ತಾರತಮ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಮೇಶ ಪೂಜಾರ, ರಮೇಶ, ಶರಣಪ್ಪ ಪೂಜಾರ ತುಕಾರಾಮ ನಾಯ್ಕ, ನಾಗರಾಜ ಅಬ್ಬಿಗೇರಿ, ಪರಶುರಾಮನಾಯ್ಕ ಹೊಸಳ್ಳಿ, ನಾಗರಾಜ ಕಲಕೇರಿ, ಶಂಕರ ಗಿಣಿಗೇರಿ, ಶರಣು ಕಾರಬಾರಿ, ಶಂಕರ ನಾಯ್ಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.