ದೋಟಿಹಾಳ: ಶಿರಗುಂಪಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭ ಯಾವಾಗ?
Team Udayavani, Feb 11, 2022, 7:11 PM IST
ದೋಟಿಹಾಳ: ದೇಶದ ಎಲ್ಲಾ ಗ್ರಾಮಗಳು ಬಯಲು ಶೌಚ ಮುಕ್ತವಾಗಬೇಕು, ಕಸ-ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಸ್ವಚ್ಛ ಭಾರತ್ ಅಭಿಯಾನ ಆರಂಭಿಸಿದೆ. ಇದರ ಅಡಿಯಲ್ಲಿ ಗ್ರಾಪಂಗಳಿಗೆ ಒಂದು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಗೆ ಸರಕಾರಗಳು ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ ಆದರೆ ಶಿರಗುಂಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಒಂದುವರೆ ವರ್ಷಗಳಿಂದ ಆಮೆಗತಿಯಲ್ಲಿ ಕಾಮಗಾರಿ ನಡೆದಿದೆ.
ಈ ಘಟಕವನ್ನು ತಾಲೂಕಿನಲ್ಲಿ ಒಂದು ಮಾದರಿ ತ್ಯಾಜ್ಯ ವಿಲೇವಾರಿ ಘಟಕವಾಗಬೇಕು ಎಂದು 2020ರಲ್ಲಿ ಚಾಲನೆ ನೀಡಿದರು. ಇದುವರೆಗೂ ತ್ಯಾಜ್ಯ ವಿಲೇವಾರಿ ಘಟಕ ಇನ್ನೂ ಆರಂಭವಾಗಿ. ರಾಜ್ಯದ ಎಲ್ಲಾ ಗ್ರಾಪಂಗಳ ಗ್ರಾಮಗಳು ಸ್ವಚ್ಛತೆಯ ಜೊತಗೆ ನಿಮ್ಮ ಆರೋಗ್ಯ ರಕ್ಷಣ ಮಾಡುವ ಉದ್ದೇಶದಿಂದ ಸರಕಾರ ಈ ಯೋಜನೆಯನ್ನು ಜಾರಿಗೆ ತಂದ್ದಿದೆ. ಇದರಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ. ಗ್ರಾಪಂಗಳಿAದ ಪ್ರತಿ ಮನೆಗಳಿಗೆ ಎರಡರಂತೆ ಕಸದ ಬುಟ್ಟಿಗಳನ್ನು ನೀಡಲಾಗುತ್ತದೆ. ಒಂದರಲ್ಲಿ ಒಣಗಿದ ಕಸ ಹಾಗೂ ಇನ್ನೊಂದರಲ್ಲಿ ಹಸಿ ಕಸ ಹಾಕಬೇಕು. ಇದನ್ನು ಕಸದ ವಾಹನ ಬಂದಾಗ ಅದರಲ್ಲಿ ಹಾಕಬೇಕು. ಪ್ರತಿ ಗ್ರಾಪಂಗೆ ತಲಾ 20 ಲಕ್ಷ ರೂ. ನೆರವು ನೀಡುತ್ತಾರೆ. ಇದರಲ್ಲಿ ಕಸ ಸಂಗ್ರಹಣೆಯ ವಾಹನ, ಕಸದ ಬುಟ್ಟಿ, ಮತ್ತಿತರ ಪರಿಕರಗಳನ್ನು ಖರೀದಿ ಮಾಡಬಹುದು, ಜೊತಗೆ ಹಣದ ಕೊರತೆಯಾದರೇ ಎನ್‌ಆರ್‌ಜಿ ಯೋಜನೆಯಲ್ಲಿ ಹಣ ಖರ್ಚು ಮಾಡಬಹುದು.
ಗ್ರಾಪಂಗಳಲ್ಲಿ ಕಸದ ಬುಟ್ಟೆಗಳು: ತ್ಯಾಜ್ಯ ವಿಲೇವಾರಗೆ ಪ್ರತಿ ಗ್ರಾಪಂಗಳಿಗೆ ಸರಕಾರ ಲಕ್ಷಾಂತರ ರೂ,ಗಳ ಹಣ ಬಿಡುಗಡೆ ಮಾಡಿದೆ. ಘಟಕ ಆರಂಭಕ್ಕೆ ಮುಂಚಿತವಾಗಿ ಒಂದು ವರ್ಷದ ಹಿಂದೆ ಕಸದ ಬಟ್ಟಿಗಳನ್ನು ಗ್ರಾಪಂಗಳಿಗೆ ಸರಬರಾಜು ಮಾಡಲಾಗಿದೆ. ಕೆಲವು ಗ್ರಾಪಂಗಳಲ್ಲಿ ಬಟ್ಟೆಗಳನ್ನು ವಿತರಣೆ ಮಾಡಿದರೇ.. ಇನ್ನೂ ಕೆಲವು ಗ್ರಾಪಂಗಳಲ್ಲಿ ಕಸದ ಬಟ್ಟಿಗಳನ್ನು ವಿತರಣೆ ಮಾಡದೇ ವರ್ಷಗಳಿಂದ ಹಾಗೆ ಇಟ್ಟಿರುವುದು ಕಂಡುಬರುತ್ತಿದೆ.
ಕ್ಲಸ್ಟರ್ ಮಾದರಿಯ ಘಟಕ: ಈ ತ್ಯಾಜ್ಯ ವಿಲೇವಾರಿ ಘಟಕ ಬಿಜಕಲ್, ದೋಟಿಹಾಳ, ಕೇಸೂರ, ಕ್ಯಾದಿಗುಪ್ಪಾ ಮತ್ತು ಶಿರಗುಂಪಿ ಗ್ರಾಪಂಗಳ ಸೇರಿ ಒಂದು ಕ್ಲಸ್ಟರ್ ಮಾದರಿಯ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಲಾಗುತ್ತಿದೆ. ಇದನ್ನು ತಾಲೂಕಿನಲ್ಲಿ ಒಂದು ಮಾದರಿ ತ್ಯಾಜ್ಯ ವಿಲೇವಾರಿ ಘಟಕವಾಗಬೇಕು ಎಂದು ಆಧಿಕಾರಿಗಳು ಕನಸು ನನಸಾಗಲಿಲ್ಲ. ಕಾರಣ ಈ ಘಟಕದ ಕಾಮಗಾರಿ ಆಮೆಗತಿ ನಡೆಯುತ್ತಿದೆ. ಹೀಗಾಗಲೇ ತಾಲೂಕಿನ ಅನೇಕ ಕಡೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳು ಆರಂಭವಾಗಿವೆ.
ಹಳ್ಳಿಗಳಲ್ಲಿ ಕಸದ ರಾಶಿಗಳು: ಐದು ಗ್ರಾಪಂಗಳ ಪತ್ರಿ ಹಳ್ಳಿಗಳಲ್ಲಿ ಕಂಡಕAಡಲೇ ಕಸದ ರಾಶಿಗಳು ಕಾಣುತ್ತಿವೆ. ಇದನ್ನು ಪ್ರತಿ ನಿತ್ಯ ಸ್ವಚ್ಛತೆ ಮಾಡುವುದೇ ಗ್ರಾಪಂ ಸಿಬ್ಬಂದಿಗಳಿಗೆ ದೊಡ್ಡ ತಲೆನೋವಾಗಿದೆ. ಯಾವಾಗ ಘನ ತ್ಯಾಜ್ಯ ವಿಲೇವಾರಿ ಘಟಕ ಯಾವುಗ ಆರಂಭವಾಗುತ್ತದೆ ಎಂದು ಸಾರ್ವಜನಿಕರು ಮತ್ತು ಗ್ರಾಪಂ ಸಿಬ್ಬಂದಿಗಳು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.
ಘನ ತ್ಯಾಜ್ಯ ವಿಲೇವಾರಿ ಘಟಕದ ಭವನ ನಿರ್ಮಾಣ ಅಂತದಲ್ಲಿ ಇದೆ. ಘಟಕ ನಿರ್ಮಾಣದ ವೇಳೆ ಭೂದಾನಿಗಳಿಂದ ತೊಂದರೆ ಬಂದ ಕಾರಣ ಇಷ್ಟು ದಿನ ಕಾಮಗಾರಿ ಸ್ಥಗಿತಗೊಂಡಿತ್ತು. ಸದ್ಯ ಸಮಸ್ಯೆಯನ್ನು ಸರಿಪಡಿಸಿ ಕಾಮಗಾರಿ ಆರಂಭವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭ ಮಾಡುತ್ತೇವೆ.- ಡಾ.ಜಯರಾಮ್ ಚೌವ್ಹಾಣ,ತಾ.ಪಂ ಇಒ ಕುಷ್ಟಗಿ.
ಕೂಡಲೇ ಶಿರಗುಂಪಿ ಘನ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ತಾಪಂನಿಂದ ಮಾಹಿತಿ ಪಡೆದುಕೊಂಡು ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ.–ಬಿ. ಫೌಜಿಯಾ ತರನ್ನುಮ್, ಸಿಇಓ, ಜಿಪಂ ಕೊಪ್ಪಳ
-ವರದಿ: ಮಲ್ಲಿಕಾರ್ಜುನ ಮೆದಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.