ಸಿದ್ದಾಪುರ: ಕಾಯಕಲ್ಪಕ್ಕೆ ಕಾದಿರುವ ಕೃಷಿ ಮಾರುಕಟ್ಟೆ
ಮಲಮೂತ್ರ ವಿಸರ್ಜನೆಗೆ ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರು ಸಂಕಷ್ಟ ಎದುರಿಸಬೇಕಾಗಿದೆ.
Team Udayavani, Dec 2, 2024, 6:03 PM IST
ಉದಯವಾಣಿ ಸಮಾಚಾರ
ಸಿದ್ದಾಪುರ: ಗ್ರಾಮದ ಗಂಗಾವತಿ-ರಾಯಚೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಕೃಷಿ ಉತ್ಪನ್ನ ಉಪ-ಮಾರುಕಟ್ಟೆ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದೆ. ರೈತರ, ಕಾರ್ಮಿಕರ ಪ್ರಮುಖ ಕೇಂದ್ರವಾದ ಮಾರುಕಟ್ಟೆಯಲ್ಲಿ ವಿಶಾಲವಾದ ಸಿಸಿ ರಸ್ತೆ, ಅಗಲವಾದ ಬೃಹತ್ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ತೀವ್ರ ಅಗತ್ಯವಾಗಿರುವ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಭವನ ಇಲ್ಲದೇ ಇಡೀ ಮಾರುಕಟ್ಟೆಯನ್ನು ಅಣಕಿಸುವಂತಿದೆ.
ಜನರ, ಕೂಲಿ ಕಾರ್ಮಿಕರ, ಅನ್ನದಾತರ ನೀರಿನ ದಾಹ ತೀರಿಸಲು ಉಪ ಮಾರುಕಟ್ಟೆಯ ಆವರಣದಲ್ಲಿ ಅಂದಾಜು 5-6 ವರ್ಷಗಳ ಹಿಂದೆಯೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರೂ ಸಹ ಇಲ್ಲಿಯವರೆಗೆ ಘಟಕ ಆರಂಭಗೊಳ್ಳದಿರುವುದು ರೈತರು ಹಾಗೂ ವ್ಯಾಪಾರಿಗಳಲ್ಲಿ ತೀರ ಬೇಸರ ಮೂಡಿಸಿದೆ.
ಮಲಮೂತ್ರ ವಿಸರ್ಜನೆಗೆ ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರು ಸಂಕಷ್ಟ ಎದುರಿಸಬೇಕಾಗಿದೆ. ಮಹಿಳಾ ಕಾರ್ಮಿಕರು ಪಡುವ ಪಾಡಂತೂ ಹೇಳತೀರದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕೂಲಿ ಕಾರ್ಮಿಕರು, ರೈತರು ಅಳಲು ತೋಡಿಕೊಂಡರು. ಇನ್ನೂ
ಜಾನುವಾರುಗಳಿಗೆ ನೀರು ಕುಡಿಯಲು ನಿರ್ಮಿಸಿರುವ ತೊಟ್ಟಿಗಳು ನೀರಿಲ್ಲದೆ ಸೊರಗಿವೆ. ಇನ್ನೂ ಮಾರುಕಟ್ಟೆಯ ಆವರಣದಲ್ಲಿ 2000 ನೇ ಇಸವಿಯಲ್ಲಿ ಲಕ್ಷಾಂತರ ರೂ ಮೋತ್ತದಲ್ಲಿ ನಿರ್ಮಿಸಿರುವ 24 ಗ್ರಾಮೀಣ ಸಂತೆ ಮಾರುಕಟ್ಟೆಯ ಮಳಿಗೆಗಳು ಪಾಳು ಬಿದ್ದಿದ್ದು, ಈಗಾ ಅವುಗಳು ಸಾರ್ವಜನಿಕ ಮಲ ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿವೆ.
ನ್ಯೂ ಮಾರುಕಟ್ಟೆಯ ಆವರಣದ ಸಿಸಿ ರಸ್ತೆ ಮಧ್ಯೆಯೇ ಒಂದೇ ಒಂದು ದೊಡ್ಡದಾಡ ಹೈಮಾಸ್ಟ್ ಬೀದಿ ದೀಪ ಅಳಡಿಸಲಾಗಿದೆ ಆದರೆ ಒಂದು ದೀನ ಬೆಳಗಲೆ ಇಲ್ಲ ಎಂದು ವ್ಯಂಗ್ಯವಾಡುತ್ತಾರೆ ರೈತರು. ಬೀದಿ ದೀಪ ವ್ಯವಸ್ಥೆ ಇಲ್ಲದೆ ಇರುವ ಪರಿಣಾಮ ಸಂಜೆಯಾಗುತ್ತಲೆ ಮಾರುಕಟ್ಟೆಯಲ್ಲಿ ರೈತರು, ಕೃಷಿ ಕೂಲಿ ಕಾರ್ಮಿಕರು, ಸಾರ್ವಜನಿಕರು ಕಣ್ಣಿದ್ದು ಕುರುಡರಾಗಿ ತಿರುಗಾಡಬೇಕಾಗಿದೆ.
ಇನ್ನೂ ಮಾರುಕಟ್ಟೆಯ ಆವರಣದಲ್ಲಿ ನಿತ್ಯ ನೂರಾರು ರೈತರು, ಕೂಲಿಕಾರ್ಮಿಕರು ತಿರುಗಾಡುವ ರಸ್ಥೆಯ ಪಕ್ಕ ನಿರ್ಮಿಸಿದ್ದ ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಈಗಾಗಲೇ ಪಿಲ್ಲರ್‌ನಲ್ಲಿರುವ ಕಬ್ಬಿಣದ ಸರಳು ಹೊರಬಂದಿದೆ. ಒಂದು ಕಡೆ ವಾಲಿದಂತೆ ಕಾಣುತ್ತಿದೆ. ಈಗಲೋ ಆಗಲೋ ಕುಸಿದುಬಿಳುವ ಆತಂಕ ಎದುರಾಗಿದೆ. ಕೂಡಲೇ ಸಂಬಂಧಿಸಿದ
ಅ ಕಾರಿಗಳು ಈ ಶಿಥಿಲಾವಸ್ಥೆಯಲ್ಲಿರುವ ಈ ಟ್ಯಾಂಕ್ ನೆಲಸಮಗೊಳಿಸಬೇಕು. ಇಲ್ಲವಾದರೆ ಆಗುವ ಅನಾಹುತಕ್ಕೆ ಯಾರು ಹೊಣೆ ಎಂದು ರೈತರು ಪ್ರಶ್ನಿಸುತ್ತಾರೆ.
ಇನ್ನೂ ಮಾರುಕಟ್ಟೆಯ ಆವರಣದಲ್ಲಿ ಮುಖ್ಯ ರಸ್ತೆಯಲ್ಲಿ ವರ್ಷಗಳ ಹಿಂದೆ ನಿರ್ಮಿಸಿರುವ 13 ವಾಣಿಜ್ಯ ಮಳಿಗೆಗಳು ಅದ್ಯಾವ ಕಾರಣಕ್ಕೆ ಉದ್ಘಾಟನೆ ಭಾಗ್ಯ ಕಾಣುತ್ತಿಲ್ಲ ಎಂಬ ಕಾರಣ ಯಾರಿಗೂ ತಿಳಿದಿಲ್ಲ.
ಸಂಬಂಧಪಟ್ಟವರು ಶೀಘ್ರದಲ್ಲಿ ಮಾರುಕಟ್ಟೆಯಲ್ಲಿ ರೈತರು, ಕಾರ್ಮಿಕರಿಗೆ ದೊರೆಯಬೇಕಾದ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು.
ಹನುಮೇಶ, ರೈತ, ಸಿದ್ದಾಪುರ
ಸದ್ಯ ಎಂಜಿನಿಯರ್‌ಗೆ ಹೇಳಿ ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ಸುತ್ತ ಯಾರು ಹೊಗದಂತೆ ತಂತಿ ಬೇಲಿ ಹಾಕಿಸಿ ಬಳಿಕ ಕೆಡವಲಾಗುವುದು. ಹೈಮಾಸ್ಟ್ ಬೆಳಗದಿರುವ ಬಗ್ಗೆ ನಮ್ಮ ಸಿಬ್ಬಂದಿಗೆ ಸೂಚಿಸಲಾಗುತ್ತದೆ. ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಮತ್ತು ಮಾರುಕಟ್ಟೆಯಲ್ಲಿ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ
ಕೈಗೊಳ್ಳಲಾಗುವುದು.
ನಂಜುಂಡಸ್ವಾಮಿ, ವಿಶೇಷ ಕೃಷಿ
ಉತ್ಪನ್ನ ಮಾರುಕಟ್ಟೆ ಸಮಿತಿ
ಕಾರ್ಯದರ್ಶಿ, ಕಾರಟಗಿ
■ ಸಿದ್ದನಗೌಡ ಹೊಸಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.