ಕೊಪ್ಪಳ: ಏತ ನೀರಾವರಿ ಯೋಜನೆಗೆ ಆಮೆ ವೇಗ
ಬಲಭಾಗಕ್ಕೆ ಇರುವ ನೀರಾವರಿ ಎಡ ಭಾಗಕ್ಕೆ ಏಕಿಲ್ಲ? | ಜಾತಕ ಪಕ್ಷಿಯಂತೆ ಕಾಯುತ್ತಿರುವ ಜನ
Team Udayavani, Oct 13, 2021, 9:25 PM IST
ವರದಿ: ದತ್ತು ಕಮ್ಮಾರ
ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆ ಆರಂಭವಾಗಿ ದಶಕವೇ ಕಳೆದಿದೆ. ಬಲ ಭಾಗ ನೀರಾವರಿ ಸೌಲಭ್ಯ ಕಂಡಿದೆ. ಆದರೆ ಎಡ ಭಾಗದಲ್ಲಿ ನೀರಾವರಿ ಯೋಜನೆ ನಿಧಾನಗತಿಯಲ್ಲಿ ಸಾಗಿದೆ. ಎಡ ಭಾಗವನ್ನು ಹರಿ ನೀರಾವರಿ ಬದಲಿಗೆ, ಹನಿ ನೀರಾವರಿಯನ್ನಾಗಿ ಪರಿವರ್ತಿಸಿ ಹೆಕ್ಟೇರ್ ಪ್ರದೇಶ ವಿಸ್ತರಿಸಿದೆ. ಆದರೆ ಮುಂಡಗಿ-ಕೊಪ್ಪಳ-ಯಲಬುರ್ಗಾ ಭಾಗದಲ್ಲಿನ ಜನರು ಇಂದಿಗೂ ನೀರಾವರಿ ಕನಸು ಕಾಣುತ್ತಲೇ ಇದ್ದಾರೆ. ಅದು ಸಕಾರಗೊಂಡಿಲ್ಲ.
ಹೌದು. ಬರದ ನಾಡಿನ ಭಾಗದ ರೈತರ ಜಮೀನುಗಳಿಗೆ ನೀರು ಹರಿಸಿ ಅವರ ಬದುಕು ಹಸನ ಮಾಡುವ ಉದ್ದೇಶದಿಂದ 1992ರಲ್ಲೇ ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿಗೊಳಿಸಿದೆ. ಹೂವಿನಹಡಗಲಿ ಭಾಗದ ರೈತರು ನೀರಾವರಿ ಬಹುಪಾಲು ಪೂರ್ಣಗೊಂಡಿದೆ. ಆದರೆ ಎಡ ಭಾಗದಲ್ಲಿನ ಗದಗ-ಮುಂಡರಗಿ, ಕೊಪ್ಪಳ ಹಾಗೂ ಯಲಬುರ್ಗಾ ಭಾಗದಲ್ಲಿ ಬಹುಪಾಲು ನೀರಾವರಿ ಪ್ರದೇಶಕ್ಕೆ ನೀರು ಹರಿಯಬೇಕಿದ್ದರೂ ಇಲ್ಲಿವರೆಗೂ ರೈತರ ಜಮೀನಿಗೆ ನೀರೇ ಹರಿಯುತ್ತಿಲ್ಲ. ಇಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯತನವೂ? ಏನು ಎಂಬುದು ತಿಳಿಯದಂತಾಗಿದೆ. ಮುಂಡರಗಿ ಹಾಗೂ ಕೊಪ್ಪಳ ಭಾಗದ ರೈತ ಸಮೂಹಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಬಿಳಿ ಆನೆ ಎಂಬಂತೆ ಭಾಸವಾಗಿ ತೋರಿಕೆಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ.
ಹನಿ ನೀರಾವರಿಗೆ: ಕೆಲವು ವರ್ಷಗಳ ಹಿಂದೆ ಈ ಯೋಜನೆಯಡಿ ಎಡ ಭಾಗದ ಜಮೀನುಗಳಿಗೂ ಕಾಲುವೆ ಮೂಲಕ ಹರಿ ನೀರಾವರಿ ಯೋಜನೆ ರೂಪಿಸಲಾಗಿತ್ತು. ಆದರೆ ಯೋಜನೆ ಪ್ರದೇಶ ವಿಸ್ತರಿಸಲು ಹರಿ ನೀರಾವರಿಯಿಂದ ಹನಿ ನೀರಾವರಿಗೆ ಯೋಜನೆ ಪರಿವರ್ತನೆಗೊಳಿಸಿದ್ದಾರೆ. ಹೂವಿನಹಡಗಲಿಯ ಬಲ ಭಾಗ ಮಾತ್ರ ಹರಿ ನೀರಾವರಿಯಾಗಿದೆ. ಆದರೆ ಎಡ ಭಾಗದಲ್ಲಿನ ಗದ ಗ-ಮುಂಡರಗಿ-ಕೊಪ್ಪಳ-ಯಲಬುರ್ಗಾ ಭಾಗವು ಸಂಪೂರ್ಣ ಹನಿ ನೀರಾವರಿಗೆ ಪರಿವರ್ತಿಸಲಾಗಿದೆ. ಒಂದು ಹಂತದಲ್ಲಿ ಹನಿ ನೀರಾವರಿ ಯೋಜನೆ ಏಷ್ಟು ಯಶಸ್ವಿಯಾಗಿದೆ? ಎನ್ನುವ ಪ್ರಶ್ನೆ ರೈತ ಸಮೂಹದಲ್ಲೂ ಮೂಡಿದೆ. ಹೀಗಾದರೆ ರೈತರ ಜಮೀನಿಗೆ ನೀರು ಬರುವುದಾದರೂ ಹೇಗೆ ಎನ್ನುವ ಚರ್ಚೆ ಶುರುವಾಗಿದೆ.
ಹನಿ ನೀರಾವರಿ ಪ್ರದೇಶವೆಷ್ಟು?: ಸಿಂಗಟಾಲೂರು ಏತ ನೀರಾವರಿ ಅಡಿ ಗದಗ ತಾಲೂಕಿಗೆ 66,827 ಎಕರೆ, ಮುಂಡರಗಿ ತಾಲೂಕಿನಲ್ಲಿ 92,281 ಎಕರೆ, ಕೊಪ್ಪಳ ತಾಲೂಕಿನಲ್ಲಿ 55,706 ಎಕರೆ, ಯಲಬುರ್ಗಾ ತಾಲೂಕಿನಲ್ಲಿ 14,624 ಎಕರೆ ಪ್ರದೇಶವು ಸೇರಿ ಒಟ್ಟಾರೆ 4 ತಾಲೂಕು ಸೇರಿ ಒಟ್ಟಾರೆ 2,29,438 ಎಕರೆ ಪ್ರದೇಶ ಹನಿ ನೀರಾವರಿಗೆ ಒಳಪಡಲಿದೆ. ಇನ್ನೂ ಕೊಪ್ಪಳ-ಯಲಬುರ್ಗಾ ತಾಲೂಕಿನಲ್ಲಿಯೇ 70,330 ಎಕರೆ ಪ್ರದೇಶ ನೀರಾವರಿ ಸೌಲಭ್ಯ ಕಾಣಬೇಕಿದೆ. ಅದು ಹನಿ ನೀರಾವರಿ ಮೂಲಕವೇ ಎನ್ನುವುದು ಗಮನಾರ್ಹ ಸಂಗತಿ. 33 ಕಿ.ಮೀ.
ಕಾಲುವೆ ಮಾತ್ರ ನಿರ್ಮಾಣ: ಏತ ನೀರಾವರಿ ಯೋಜನೆಯಡಿ ಮುಂಡರಗಿ ತಾಲೂಕು ವ್ಯಾಪ್ತಿವರೆಗೂ 33 ಕಿ.ಮೀ. ಕಾಲುವೆಯ ಕಾಮಗಾರಿ ನಿರ್ಮಾಣಗೊಂಡಿದ್ದರೆ, ಅಲ್ಲಿಂದ ಕೊಪ್ಪಳ ತಾಲೂಕು ವ್ಯಾಪ್ತಿವರೆಗೂ 33 ಕಿಲೊ ಮೀಟರ್ ನಿಂದ 72 ಕಿಲೊ ಮೀಟರ್ ಕಾಲುವೆ ನಿರ್ಮಾಣ ಮಾಡಲಾಗಿದೆ. ಅಂದರೆ ಕೊಪ್ಪಳ ತಾಲೂಕಿನಲ್ಲಿ ಕೇವಲ 33 ಕಿ.ಮೀ. ಕಾಲುವೆ ನಿರ್ಮಾಣ ಮಾಡಲು ಒಂದು ದಶಕ ಕಾಲಹರಣ ಮಾಡಲಾಗಿದೆ. ಹನಿ ನೀರಾವರಿಯಾದರೂ ರೈತರ ಜಮೀನಿಗೆ ಬಂದೇ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಕಾಲಾವಧಿ ಯಲ್ಲಿ ಯೋಜನೆ ಪರಿಷ್ಕೃತಗೊಳಿಸಿ 5,768 ಕೋಟಿ ರೂ.ಗೆ ಅಂದಾಜು ಯೋಜನಾ ವರದಿ ಅನುಮೋದನೆಗೊಂಡಿದೆ. ಈ ಪೈಕಿ 2084 ಕೋಟಿ ವೆಚ್ಚಾಗಿದೆ. ಇತ್ತೀಚೆಗೆ ಮಾಹಿತಿ ಹಕ್ಕಿನಲ್ಲಿ ಲಭ್ಯವಾದ ಮಾಹಿತಿಯಂತೆ 3 ಸಾವಿರ ಕೋಟಿಯಷ್ಟು ಖರ್ಚಾಗಿದೆ. ಕೋಟಿ ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೂ ಎಡ ಭಾಗದ ರೈತರ ಜಮೀನಿಗೆ ಹನಿ ನೀರು ಬರದೇ ಇರುವುದು ದುರಂತವೇ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.