ಬೆಳೆವಿಮೆ ಪಾವತಿ ಆಮೆಗತಿ
•61,885 ರೈತರಿಂದ 8.4 ಕೋಟಿ ಪಾವತಿ•ಇಲಾಖೆಯಿಂದ ಕಂಪನಿಗೆ ಈಗಷ್ಟೇ ವರ್ಗ
Team Udayavani, Jun 26, 2019, 11:13 AM IST
ಕೊಪ್ಪಳ: ಜಿಲ್ಲೆಯ ರೈತರು ಬರದ ಪರಿಸ್ಥಿತಿಯಲ್ಲಿ ಬೆಳೆ ಹಾನಿಯಾದರೆ ನಮಗೆ ಬೆಳೆ ವಿಮೆ ಮೊತ್ತವಾದರೂ ಕೈ ಹಿಡಿಯಲಿದೆ ಎಂದು ವಿವಿಧೆಡೆ ಹಗಲು-ರಾತ್ರಿ ಎನ್ನದೆ ನಿದ್ದೆಗೆಟ್ಟು ವಿಮೆ ಮೊತ್ತ ಪಾವತಿ ಮಾಡಿದ್ದರೆ ಕಂಪನಿಗಳ ಚೆಲ್ಲಾಟ, ಅಧಿಕಾರಿಗಳ ನಿಧಾನಗತಿಗೆ ಸಕಾಲಕ್ಕೆ ರೈತನ ಖಾತೆಗೆ ವಿಮೆ ಮೊತ್ತ ಪಾವತಿಯಾಗುತ್ತಿಲ್ಲ.
ಹೌದು. ವಿಮಾ ಕಂಪನಿಗಳು ಆಡಿದ್ದೇ ಆಟ.. ಕೊಟ್ಟಿದ್ದೇ ಲೆಕ್ಕ ಎನ್ನುವಂತಾಗಿವೆ. ಸರ್ಕಾರದ ಮಟ್ಟದಲ್ಲಿಯೂ ಇದಕ್ಕೆ ಸರಿಯಾದ ಮೂಗುದಾರ ಹಾಕುವವರೇ ಇಲ್ಲದಂತಾಗಿವೆ. ಇತ್ತ ರೈತ ಪ್ರತಿ ವರ್ಷ ವಿಮೆ ಕಟ್ಟುತ್ತಲೇ ವಿಮೆ ಬರಲಿದೆ ಎಂದು ಜಾತಕ ಪಕ್ಷಿಯಂತೆ ಕಾದು ಕಾದು ಸುತ್ತು ಹೊಡೆಯುತ್ತಿದ್ದಾನೆ. ಕೃಷಿ ಇಲಾಖೆ-ಬ್ಯಾಂಕ್-ವಿಮಾ ಕಂಪನಿಗಳ ಮಧ್ಯದ ನಿಧಾನಗತಿ ಕಾರ್ಯ ವೈಖರಿಗೆ ಹಲವೆಡೆ ರೈತ ಸಮೂಹ ಆಕ್ರೋಶ ವ್ಯಕ್ತಪಡಿಸುತ್ತಲೇ ಇದೆ.
ಇದಕ್ಕೆ ತಾಜಾ ಸಾಕ್ಷಿ ಎಂಬಂತೆ, ಕಳೆದ 2018-19ನಲ್ಲಿ ರೈತರು ಜಿಲ್ಲೆಯಾದ್ಯಂತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ 61,885 ರೈತರು 8.40 ಕೋಟಿ ರೂ. ನಷ್ಟು ಬ್ಯಾಂಕ್ ಸೇರಿದಂತೆ ವಿವಿಧ ಸಿಎಸ್‌ಸಿ ಕೇಂದ್ರಗಳಲ್ಲಿ ವಿಮೆ ಪಾವತಿ ಮಾಡಿದ್ದಾರೆ. ಆಗ ಬರದ ಪರಿಸ್ಥಿತಿ ಆವರಿಸಿ ರೈತರ ಸಂಪೂರ್ಣ ಬೆಳೆ ಹಾನಿಯಾಗಿದೆ. ಇದರಿಂದ ನಷ್ಟದಲ್ಲೇ ನರಳಾಡಿದ ಅನ್ನದಾತ ವಿಮಾ ಮೊತ್ತಕ್ಕಾಗಿ ಕಾಯುತ್ತಿದ್ದಾನೆ. ಆದರೆ ರೈತ ತುಂಬಿದ ವಿಮಾದ ಪ್ರಕ್ರಿಯೆ ಇನ್ನೂ ಕೃಷಿ ಇಲಾಖೆಯಿಂದ ಈಗಷ್ಟೆ ವಿಮಾ ಕಂಪನಿಗೆ ವರ್ಗವಾಗಿದೆ.
ಇಲ್ಲಿ ರಾಜ್ಯ ಕೃಷಿ ಇಲಾಖೆ, ವಿಮಾ ಕಂಪನಿ ನಡುವೆ ಸಭೆ ನಡೆಯಬೇಕಿದೆ. ಇಲಾಖೆಯಿಂದ ರೈತರ ಎಲ್ಲ ಮಾಹಿತಿಯನ್ನೂ ವಿಮಾ ಕಂಪನಿ ಪಡೆಯಬೇಕಿದೆ. ಆಗ ಬೆಳೆ ಹಾನಿ ಈ ಹಿಂದಿನ ವರ್ಷಗಳಲ್ಲಿ ಬೆಳೆಯ ಇಳುವರಿ ಪ್ರಮಾಣ ಸೇರಿದಂತೆ ಹಾನಿ ನಷ್ಟದ ಲೆಕ್ಕಾಚಾರ ಹಾಕಿದ ಬಳಿಕ ಹೋಬಳಿ, ಗ್ರಾಪಂವಾರು ರೈತರಿಗೆ ಕಂಪನಿ ನೇರವಾಗಿ ರೈತನ ಖಾತೆಗೆ ವಿಮೆ ಪರಿಹಾರ ಮೊತ್ತ ಪಾವತಿಯಾಗಲಿದೆ. ಅದು ಕೆಲವೊಂದು ರೈತರಿಗೆ ಬರುತ್ತೆ, ಇನ್ನು ಕೆಲವೊಂದು ರೈತರಿಗೆ ಮೊತ್ತ ಬರಲ್ಲ. ಹೀಗಾಗಿ ವಿಮೆ ಬಗ್ಗೆ ರೈತ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾನೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ, ಕಳೆದ ವರ್ಷದ ಮುಂಗಾರಿನಲ್ಲಿ ರೈತರು ತುಂಬಿದ ವಿಮೆ ಮಾಹಿತಿಯನ್ನು ಈಗಷ್ಟೆ ವಿಮಾ ಕಂಪನಿಗೆ ಮಾಹಿತಿಯನ್ನು ವರ್ಗಾವಣೆ ಮಾಡಿದೆಯಂತೆ. ಆಗ ಕಂಪನಿ ಇದೆಲ್ಲವನ್ನೂ 2-3 ಬಾರಿ ಅವಲೋಕನ ಮಾಡಿ ಬೆಳೆ ಇಳುವರಿ ಮಾದರಿ ವರದಿ ಆಧರಿಸಿ, ಹಾನಿ, ಕೆಲವೊಂದು ಮಾನದಂಡಗಳ ಪ್ರಕಾರ ಅಳೆದು ತೂಗಿ ರೈತರಿಗೆ ಪರಿಹಾರ ಮೊತ್ತವನ್ನು ಕೊಡಲಿದೆ. ಏನಾದರೂ ವರದಿಯಲ್ಲಿ ವ್ಯತ್ಯಾಸವಾಗಿದ್ದರೆ ಮತ್ತೆ ರಾಜ್ಯ ಮಟ್ಟದಲ್ಲಿ ವಿಮೆ ಕಂಪನಿ, ಕೃಷಿ ಇಲಾಖೆ ನಡುವೆ ಸಭೆ ನಡೆಸಬೇಕಿದೆ.
ವಿಮೆ ಕಂಪನಿಗಳಿಗಿಲ್ಲ ಮೂಗುದಾರ: ವಿಮಾ ಕಂಪನಿಗಳು ಆಡಿದ್ದೇ ಆಟ, ಕೊಟ್ಟಿದ್ದೇ ಲೆಕ್ಕ ಎನ್ನುವಂತಾಗಿವೆ. ರೈತರಿಗೆ ಬರದಲ್ಲಿ ಸಂಕಟ. ವಿಮಾ ಕಂಪನಿಗಳಿಗೆ ಚೆಲ್ಲಾಟ ಎನ್ನುವ ಮಾತು ಗ್ರಾಮೀಣ ಪ್ರದೇಶದಲ್ಲಿ ಸರ್ವೆ ಸಾಮಾನ್ಯವಾಗಿದೆ. ವಿಮೆ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಿ ಅಧಿಕಾರಿಗಳು ಬೇಕು. ಆದರೆ ವಿಮೆ ಮೊತ್ತ ಪಾವತಿ ವಿಳಂಬವಾದರೆ ವಿಮೆ ಅಧಿಕಾರಿಗಳ ಬಳಿ ಮಾಹಿತಿಯೇ ಇರುವುದಿಲ್ಲ.
ಬೆಳೆ ಹಾನಿಯಾದ ಇಂತಿಷ್ಟು ದಿನಕ್ಕೆ ವಿಮೆ ಪರಿಹಾರ ಕೊಡುವುದು ದೂರದ ಮಾತು. ಜಿಲ್ಲಾ ಮಟ್ಟದಲ್ಲಿ ರೈತರು ನಿತ್ಯ ಕೃಷಿ ಇಲಾಖೆಗೆ ಸುತ್ತಾಡಿ ಬೆಳೆವಿಮೆ ಬಂತಾ ಎಂದು ಅಧಿಕಾರಿಗಳನ್ನ ಕೇಳಬೇಕಿದೆ. ಆದರೆ ಅಧಿಕಾರಿಗಳಿಗೆ ಏನೂ ಮಾಹಿತಿಯೇ ಇರಲ್ಲ. ಇನ್ನೂ ವಿಮಾ ಕಂಪನಿ ಬಗ್ಗೆ ವಿಚಾರಿಸಬೇಕೆಂದರೆ ಒಬ್ಬ ವಿಮಾ ಪ್ರತಿನಿಧಿಯೂ ಜಿಲ್ಲೆಯಲ್ಲಿರಲ್ಲ. ಜಿಲ್ಲಾ ಕೇಂದ್ರದಲ್ಲೂ ಅವರ ಕಚೇರಿ ಇರಲ್ಲ. ಇಲ್ಲಿ ಅಧಿಕಾರಿಗಳನ್ನು ಸಿಲುಕಿಸಿ, ವಿಮಾ ಕಂಪನಿಗಳು ಬಚಾವ್ ಆಗುತ್ತಿವೆ ಎನ್ನುವ ಆಪಾದನೆ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಕಡಿವಾಣ ಹಾಕಲೇ ಬೇಕಿದೆ ಎನ್ನುವ ಮಾತು ಕೇಳಿ ಬಂದಿವೆ.
ಜಿಲ್ಲೆಯಲ್ಲಿ ಕಳೆದ ವರ್ಷವೂ ಬರದ ಪರಿಸ್ಥಿತಿ ಆವರಿಸಿತ್ತು. ರೈತರು ಬೆಳೆವಿಮೆ ತುಂಬಿದ್ದಾರೆ. ಆ ಮಾಹಿತಿಯನ್ನು ನಾವು ವಿಮಾ ಕಂಪನಿಗೆ ವರ್ಗಾವಣೆ ಮಾಡಿದ್ದೇವೆ. ಕಂಪನಿಯಿಂದ ನಮಗೆ ವಿಮಾ ಮೊತ್ತ ಪಾವತಿಯ ಮಾಹಿತಿ ಬರಬೇಕಿದೆ. ಆದರೆ ಇನ್ನೂ ಬಂದಿಲ್ಲ.•ಶಬಾನಾ ಶೇಖ್ ಜಂಟಿ ಕೃಷಿ ನಿರ್ದೇಶಕಿ, ಕೊಪ್ಪಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
ಉದ್ಘಾಟನೆ ಭಾಗ್ಯ ನಿರೀಕ್ಷೆಯಲ್ಲಿ ಅಂಗನವಾಡಿ:4 ಕೇಂದ್ರಗಳು ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಣೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.