ತಾಯಿಯೊಂದಿಗೆ ವಿಮಾನಯಾನ ಮಾಡಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಗ
Team Udayavani, Jul 25, 2023, 6:28 PM IST
ಕುಷ್ಟಗಿ: ಕುಷ್ಟಗಿ ಪುರಸಭೆ ಸದಸ್ಯ ತಮ್ಮ 42ನೇ ಹುಟ್ಟು ಹಬ್ಬವನ್ನು ಹೆತ್ತ ತಾಯಿಯೊಂದಿಗೆ ವಿಮಾನಯಾನ ಮಾಡುವ ಮೂಲಕ ಆಚರಿಸಿಕೊಂಡರು.
ಪುರಸಭೆ ಸದಸ್ಯ ಕಲ್ಲೇಶ ತಾಳದ್, ತಾಯಿ ನಾಗಮ್ಮ ಅವರೊಂದಿಗೆ ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಹತ್ತಿ ಇಂಡಿಗೋ ವಿಮಾನದಲ್ಲಿ 8.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದರು.
ವಿಮಾನಯಾನದ ಸಂದರ್ಭದಲ್ಲಿ ಗಗನಸಖಿಯರು ಹಾಗೂ ಪ್ರಯಾಣಿಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಹೆತ್ತ ತಾಯಿಯ ವಿಮಾನಯಾನದ ಆಸೆ ಈಡೀರಿಸಿದ ಪುತ್ರನ ಕಾರ್ಯಕ್ಕೆ ಅಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದರು.
ಇದೇ ವೇಳೆ ಉದಯವಾಣಿಯೊಂದಿಗೆ ಮಾತನಾಡಿದ ಕಲ್ಲೇಶ ತಾಳದ್ ಅವರು, ನನ್ನ ತಾಯಿ ಬಸ್ ಪ್ರಯಾಣ, ರೈಲ್ವೆ ಪ್ರಯಾಣ, ನೌಕಾಯಾನ ಮಾಡಿದ್ದಾರೆ. ಆದರೆ ವಿಮಾನಯಾನ ಮಾಡಿರಲಿಲ್ಲ. ನನ್ನ ಹುಟ್ಟು ಹಬ್ಬವನ್ನು ಸ್ಮರಣೀಯಗೊಳಿಸಲು ವಿಮಾನಯಾನದಲ್ಲಿ ಹೆತ್ತವ್ವಳೊಂದಿಗೆ ಮಾಡಿರುವುದು ನನ್ನ ಸೌಭಾಗ್ಯವೆನಿಸಿದ್ದು, ವಿಮಾನಯಾನದ ವೇಳೆ ನನ್ನ ತಾಯಿ ಖುಷಿ ಅನುಭವಿಸಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.