![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 21, 2021, 6:33 PM IST
ಗಂಗಾವತಿ: ಕಾರಣಾಂತರಗಳಿಂದ ಮತ್ತು ಪರಿಸ್ಥಿತಿಯ ಒತ್ತಡ ಹಿನ್ನೆಲೆಯಲ್ಲಿ ಕೆಲ ವ್ಯಕ್ತಿಗಳು ರೌಡಿಸೀಟರ್ ಆಗಿರುತ್ತಾರೆ ಅಥವಾ ಅಪರಾಧವೆಸಗಿರುತ್ತಾರೆ. ಇವರನ್ನು ಪರಿವರ್ತನೆ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಸದಾ ಇವರ ಮೇಲೆ ನಿಗಾ ಇಟ್ಟು ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಲಾಗುತ್ತದೆ.
ಅಪರಾಧಿಗಳಲ್ಲಿ ಮನಪರಿವರ್ತನೆಯಾಗಿದ್ದರೆ ಇಲಾಖೆಯ ನಿಯಮಗಳಂತೆ ಅವರನ್ನು ರೌಡಿ ಸೀಟರ್ ಅಥವಾ ಎಂಒಬಿ ಪಟ್ಟಿಯಿಂದ ಕೈ ಬಿಡಲಾಗುತ್ತದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹೇಳಿದರು.
ಅವರು ನಗರಠಾಣೆ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ದಾಖಲೆಯಲ್ಲಿರುವ ರೌಡಿ ಸೀಟರ್ ಮತ್ತು ಹಳೆಯ ಅಪರಾಧಿಗಳ (ಎಂಒಬಿ) ಪರೇಡ್ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದನ್ನೂ ಓದಿ: ಸೈನಿಕರ ತ್ಯಾಗ ಸ್ಮರಣೀಯ: ಕುಂಟೋಜಿಶ್ರೀ
ಈ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ೧೪೦೦ ರೌಡಿಸೀಟರ್ ಮತ್ತು ಹಳೆಯ ಅಪರಾಧಿಗಳಿದ್ದರು. ಅವರ ನಡತೆ ಹಾಗೂ ಸದ್ಯದ ಜೀವನ ಶೈಲಿಯನ್ನು ಗಮನಿಸಿ ಸುಮಾರು ೩೫೦ ಜನರನ್ನು ರೌಡಿಸೀಟರ್ ಮತ್ತು ಹಳೆಯ ಅಪರಾಧಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಕೆಲವರು ಸನ್ನಿವೇಶ ಒತ್ತಡಕ್ಕೆ ಮಣಿದು ರೌಡಿಸೀಟರ್ ಅಥವಾ ಅಪರಾಧಿಗಳಾಗಿರುತ್ತಾರೆ.
ಪೊಲೀಸ್ ಇಲಾಖೆ ನಿರಂತರವಾಗಿ ಇವರ ಮೇಲೆ ಮತ್ತು ಇವರ ವಿರುದ್ಧ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಕೇಸ್‌ಗಳ ವಿಚಾರಣೆಯನ್ನು ಸೂಕ್ಷ್ಮವಾಗಿ ಗಮನಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪಟ್ಟಿಯಿಂದ ತೆಗೆಯಲಾಗುತ್ತದೆ. ಇನ್ನೂ ಕೆಲವರು ಪದೇ ಪದೇ ಅಪರಾಧವೆಸಗುತ್ತಿರುವ ಮಾಹಿತಿಯನ್ನು ಇಲಾಖೆ ಪಡೆದು ಅವರ ವಿರುದ್ಧ ಇನ್ನಷ್ಟು ಕಠಿಣ ನಿಯಮಗಳಂತೆ ಕೇಸ್ ಹಾಕಲಾಗುತ್ತದೆ.
ಸದ್ಯ ಗಂಗಾವತಿ ನಗರ ಠಾಣೆಯಲ್ಲಿ ೨೫೨ ಮತ್ತು ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ೭೫ ರೌಡಿ ಸೀಟರ್‌ಗಳಿದ್ದು ಎಲ್ಲರ ಪರಾಮರ್ಸೆ ಮಾಡಲಾಗುತ್ತಿದೆ. ಇವರಲ್ಲಿ ಕೆಲವರ ಮೇಲೆ ಒಂದು ಕೇಸ್ ದಾಖಲಾಗಿರುತ್ತದೆ ನಂತರ ಇವರು ಯಾವುದೇ ಗಲಾಟೆ ಸೇರಿ ಅಹಿತಕರ ಘಟನೆಗಳಲ್ಲಿ ಪಾಲ್ಗೊಂಡಿರುವುದಿಲ್ಲ ಎಂದು ತನಿಖಾಧಿಕಾರಿಗಳು ಗಮನಿಸಿ ವರದಿ ನೀಡಿದರೆ ಅವರನ್ನು ಪಟ್ಟಿಯಿಂದ ಕೈ ಬಿಡಲು ಅವಕಾಶವಿದೆ. ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಪೊಲೀಸ್ ಅಧಿಕಾರಿಗಳಾದ ವೆಂಕಟಸ್ವಾಮಿ, ಉದಯರವಿ ಇದ್ದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.