Gangavathi ಪ್ರಾಚಾರ್ಯರ ಹುದ್ದೆ ಪ್ರಭಾರ ದಶಕಗಳಿಂದ ನಿಗದಿಯಾಗದ ನಿಯಮ

ಕಣ್ಮುಚ್ಚಿ ಕುಳಿತ ಉನ್ನತ ಶಿಕ್ಷಣ ಇಲಾಖೆ; ಬೆರಳೆಣಿಕೆಯಷ್ಟು ಖಾಯಂ ಪ್ರಾಚಾರ್ಯರು ಕರ್ತವ್ಯ ನಿರ್ವಹಣೆ

Team Udayavani, Aug 29, 2023, 4:36 PM IST

Gangavathi ಪ್ರಾಚಾರ್ಯರ ಹುದ್ದೆ ಪ್ರಭಾರ ದಶಕಗಳಿಂದ ನಿಗದಿಯಾಗದ ನಿಯಮ

ಗಂಗಾವತಿ: ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇದ್ದು ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿರುವ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಮತ್ತು ಅಲ್ಲಿರುವ ಪಠ್ಯಪುಸ್ತಕ ಮತ್ತು ಮೂಲಸೌಕರ್ಯಗಳ ಬಗ್ಗೆ ದೇಶದ ಹಲವು ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

ಸರಕಾರಿ ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರ ಸಂಖ್ಯೆ ಕಡಿಮೆ ಇದ್ದು ಬಹುತೇಕ ಸರಕಾರಿ ಮಹಾವಿದ್ಯಾಲಯಗಳಲ್ಲಿ ಪ್ರಾಚಾರ್ಯರ ಹುದ್ದೆ ಪ್ರಭಾರವಾಗಿದೆ ಅನೇಕ ಕಡೆ ಪ್ರಭಾರ ಪ್ರಾಚಾರ್ಯರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ .

ಹಲವು ದಶಕಗಳಿಂದ ಖಾಯಂ ಪ್ರಾಚಾರ್ಯರ ಕೊರತೆ ರಾಜ್ಯದ ಸರ್ಕಾರಿ ಮಹಾವಿದ್ಯಾಲಯಗಳಲ್ಲಿದ್ದು ಅಲ್ಲಿರುವ ಪ್ರಾಧ್ಯಾಪಕರೊಬ್ಬರು ಪ್ರಭಾವಿ ಪ್ರಾಚಾರ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಾರೆ .ಆದರೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮತ್ತು ಸರಕಾರ ಸರಕಾರಿ ಮಹಾವಿದ್ಯಾಲಯಗಳಲ್ಲಿ ಪ್ರಭಾರಿ ಪ್ರಾಚಾರ್ಯ ಹುದ್ದೆಯನ್ನು ಯಾರಿಗೆ ಕೊಡಬೇಕು, ನಿಯಮಾವಳಿಗಳೇನು ಎನ್ನುವ ಕುರಿತು ಸ್ಪಷ್ಟವಾದಂತ ಸುತ್ತೋಲೆಯನ್ನು ಹೊರಡಿಸಿಲ್ಲವಾದ್ದರಿಂದ ಸರಕಾರಿ ಮಹಾವಿದ್ಯಾಲಯಗಳಲ್ಲಿ ಪ್ರಭಾರಿ ಪ್ರಾಚಾರ್ಯರು ವರ್ಗವಾದಾಗ, ಅನಾರೋಗ್ಯಪೀಡಿತರಾದ ಸಂದರ್ಭದಲ್ಲಿ ಯಾರಿಗೆ ಮತ್ತೊಬ್ಬರಿಗೆ ಪ್ರಭಾರ ವಹಿಸುವ ಸಂದರ್ಭದಲ್ಲಿ ಈಗಿರುವ ನಿಯಮಗಳನ್ನು ಉಲ್ಲಂಘಿಸಿ ತಮಗೆ ಬೇಕಾಗಿರುವ ಅಥವಾ ತಮ್ಮ ಜಾತಿಯವರಿಗೆ ಪ್ರಭಾರ ವಹಿಸುವುದರಿಂದ ಅಲ್ಲಿರುವ ಅರ್ಹ ಪ್ರಾಧ್ಯಾಪಕರಿಗೆ ಇರುಸು ಮುರುಸಾಗಿ ಗೊಂದಲ ಸೃಷ್ಠಿಯಾಗಿ ಶೈಕ್ಷಣಿಕ ವ್ಯವಸ್ಥೆ ಮೇಲೆ ಹೆಚ್ಚಿನ ಪ್ರಮಾಣ ಬೀರುತ್ತಿದೆ.

ಸರಕಾರ ಕೂಡಲೇ ಪದವಿ ಕಾಲೇಜು ಪ್ರಭಾರಿ ಪ್ರಾಚಾರ್ಯರ ಹುದ್ದೆ ವಹಿಸಿಕೊಳ್ಳುವ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಸುತ್ತೋಲೆ ಮೂಲಕ ಹೊರಡಿಸುವಂತೆ ರಾಜ್ಯ ಪ್ರಾಧ್ಯಾಪಕರ ಸಂಘವು ಹಲವು ದಶಕಗಳಿಂದ ಒತ್ತಾಯ ಮಾಡುತ್ತಾ ಬಂದರೂ ಆಳುವ ಸರಕಾರಗಳು ಸೂಕ್ತ ನಿರ್ದೇಶನ ನೀಡುವಲ್ಲಿ ವಿಫಲವಾಗಿವೆ.ಪದವಿ ಕಾಲೇಜುಗಳ ಆಡಳಿತದಲ್ಲಿ ಗೊಂದಲವುಂಟಾಗಿ ಶೈಕ್ಷಣಿಕ ವ್ಯವಸ್ಥೆ ಹದಗೆಡದಂತೆ ಮಾಡುವುದು ಅವಶ್ಯ.

ಅನ್ಯಾಯವಾಗದಂತೆ ನಿಯಮಗಳು ಅಗತ್ಯ
ಖಾಯಂ ಪ್ರಾಚಾರ್ಯರು ಇರದ ಪದವಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರು ಪ್ರಭಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಕನ್ನಡ,ಇಂಗ್ಲಿಷ್ ಹಾಗೂ ಕೋರ್ ವಿಷಯಗಳ ಪ್ರಾಧ್ಯಾಪಕರಿಗೆ ಅನ್ಯಾಯವಾಗದಂತೆ ನಿಯಮ ರೂಪಿಸುವುದು ಅಗತ್ಯವಿದೆ.ಪ್ರಭಾರ ವಹಿಸಿಕೊಂಡಿರುವ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಕನ್ನಡ,ವಿಜ್ಞಾನ ವಿಷಯಗಳ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚಿದೆ.ಆದ್ದರಿಂದ ಉನ್ನತ ಶಿಕ್ಷಣ ಇಲಾಖೆ ಎಲ್ಲಾ ವಿಷಯಗಳ ಕುರಿತು ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆ ಜತೆ ಶಿಕ್ಷಣ ತಜ್ಞರ ಮತ್ತು ನಿವೃತ್ತ ಪ್ರಾಧ್ಯಾಪಕರ ಅಭಿಪ್ರಾಯ ಪಡೆದು ನಿಯಮ ರೂಪಿಸುವುದು ಉತ್ತಮ.

ಸಾಧ್ಯತಾ ನಿಯಮಗಳು: ಪದವಿ ಕಾಲೇಜು ಪ್ರಭಾರಿ ಪ್ರಾಚಾರ್ಯರ ಹುದ್ದೆ ವಹಿಸಿಕೊಳ್ಳಲು ಪ್ರಾಧ್ಯಾಪಕರು ಕರ್ತವ್ಯಕ್ಕೆ ಹಾಜರಾದ ದಿನಾಂಕ ಪರಿಗಣಿಸುವುದು ವೈಜ್ಞಾನಿಕವಾಗಿ ಸರಿ ಇದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಪ್ರಾಧ್ಯಾಪಕರ ನೇಮಕಾತಿ ಪಟ್ಟಿ ಪ್ರಕಟಗೊಂಡ ದಿನಾಂಕವನ್ನು ಪರಿಹಣಿಸುವಂತೆ ಪ್ರಾಧ್ಯಾಪಕರ ಇನ್ನೊಂದು ಗುಂಪು ವಾದಿಸುತ್ತದೆ. ಸ್ಥಳೀಯ ಶಾಸಕರುಗಳ ಅಧ್ಯಕ್ಷತೆಯಲ್ಲಿ ರಚನೆಯಾದ ಕಾಲೇಜು ಅಭಿವೃದ್ಧಿ ಸಮಿತಿ ಸ್ಥಳೀಯವಾಗಿ ಅಂತಿಮವಾಗಿದ್ದು ಕಾಲೇಜು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಸಕರ ವಿವೇಚನೆಯಂತೆ ಪ್ರಾಧ್ಯಾಪಕರೊಬ್ಬರಿಗೆ ಪ್ರಭಾರ ವಹಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.ಇದನ್ನು ಟೀಕಿಸಿ ಶಾಸಕರು ಕಾಲೇಜು ಶೈಕ್ಷಣಿಕ ಅಭಿವೃದ್ಧಿ ಮಾತ್ರ ಮಾಡಬೇಕು.ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ನಿರ್ದೇಶಕರ ಆದೇಶದಂತೆ ಪ್ರಭಾರಿ ವಹಿಸುವಂತಾಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲಾ ಗೊಂದಲಗಳನ್ನು ದೂರ ಮಾಡಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಭಾರಿ ಪ್ರಾಚಾರ್ಯರ ಹುದ್ದೆ ವಹಿಸಿಕೊಳ್ಳುವ ಸಂಬಂಧಪಟ್ಟ ಸೂಕ್ತ ನಿರ್ದೇಶನ ನೀಡುವ ಆದೇಶ ಹೊರಡಿಸಬೇಕಿದೆ.

ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರ ಕೊರತೆ ಇದ್ದು ಆಯಾ ಕಾಲೇಜಿನ ಪ್ರಾಧ್ಯಾಪಕರೇ ಪ್ರಭಾರಿ ವಹಿಸಿಕೊಂಡು ಆಡಳಿತ ನಡೆಸುವ ಸಂಪ್ರದಾಯವಿದ್ದು ಪ್ರಭಾರಿ ವಹಿಸಿಕೊಳ್ಳುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಉನ್ನತ ಶಿಕ್ಷಣ ಇಲಾಖೆಯಲ್ಲಿ ಸ್ಪಷ್ಟತೆ ಇಲ್ಲ.ಆದ್ದರಿಂದ ಪ್ರಭಾರಿ ವಹಿಸುವ ಸಂದರ್ಭದಲ್ಲಿ ಕಾಲೇಜುಗಳಲ್ಲಿ ಸ್ವಜನ ಪಕ್ಷಪಾತ,ಜಾತಿ,ಶಿಫಾರಸು ಕೆಲಸ ಮಾಡುತ್ತಿದ್ದು ಸಾಮಾಜಿಕ ನ್ಯಾಯ ಮತ್ತು ನೈಸರ್ಗಿಕ ನ್ಯಾಯದ ಪಾಲನೆಯಾಗುತ್ತಿಲ್ಲ.ಬಲಾಢ್ಯರು ಪ್ರಭಾವ ಬಳಸಿ ಪ್ರಭಾರಿ ಹುದ್ದೆ ಹಿಡಿಯುತ್ತಿರುವುದರಿಂದ ಭ್ರಷ್ಟಾಚಾರ ಸೇರಿ ಹಲವು ಸಮಸ್ಯೆಗಳಾಗುತ್ಯಿವೆ. ಇಲಾಖೆ ಸೂಕ್ತ ಸುತ್ತೋಲೆ ಹೊರಡಿಸಿ ದಶಕಗಳ ಸಮಸ್ಯೆ ಇತ್ಯಾರ್ಥಪಡಿಸಬೇಕಿದೆ.
-ಅಮರೇಶ ಕಡಗದ್ ಮತ್ತು ಸರ್ವಜ್ಞ ಮೂರ್ತಿ
ಮುಖಂಡರು ವಿದ್ಯಾರ್ಥಿ ಸಂಘಟನೆಗಳು.

-ಕೆ.ನಿಂಗಜ್ಜ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.