ತುಂಗಭದ್ರಾ ಹೂಳಿನ ಜಾತ್ರೆಗೆ ಚಾಲನೆ
•ರೈತರಿಂದ ಹಸಿರು ಶಾಲು ಪ್ರದರ್ಶನ-ಜಯಘೋಷ •ಹೂಳೆತ್ತುವ ಕಾರ್ಯಕ್ಕೆ ದೇಣಿಗೆ ನೀಡಿ ಜನರ ಬೆಂಬಲ
Team Udayavani, May 31, 2019, 2:59 PM IST
ಹೊಸಪೇಟೆ: ಮೂರನೇ ವರ್ಷವೂ ತುಂಗಭದ್ರಾ ಜಲಾಶಯದ ಹೂಳಿನ ಜಾತ್ರೆಗೆ ಉಜ್ಜಯಿನಿ ಜಗದ್ಗುರು ಶ್ರೀಗಳು ಸೇರಿದಂತೆ ವಿವಿಧ ಜಿಲ್ಲೆಯ ಮಠಾಧೀಶರು ಗುರುವಾರ ಚಾಲನೆ ನೀಡಿದರು. ಈ ಮೂಲಕ ಕಳೆದೆರಡು ವರುಷಗಳಿಂದ ಬೇಸಿಗೆಯಲ್ಲಿ ಇದೇ ರೀತಿ ಹೂಳು ತೆಗೆದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮುಂದುವರಿಸಿದರು.
ಈ ವೇಳೆ ತುಂಗಭದ್ರಾ ರೈತ ಸಂಘದಿಂದ ವ್ಯಾಸನಕೆರೆಯ ತುಂಗಭದ್ರಾ ಹಿನ್ನೀರಿನ ಪ್ರದೇಶದಲ್ಲಿ ನಡೆದ ಹೂಳೆತ್ತುವ ಜಾತ್ರೆ ಕಾರ್ಯಕ್ರಮದಲ್ಲಿ ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಸರ ರಕ್ಷಣೆಗೆ ಗಂಭೀರ ಚಿಂತನೆ ನಡೆದ ಹಿನ್ನೆಲೆಯಲ್ಲಿ ಸತತ ಪರಿಸರ ಹಾಗೂ ಜೀವ ಸಂಕುಲ ಅವನತಿ ಹಾದಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸದಾ ಪರಿಸರ ನಾಶಕ್ಕೆ ಕಾರಣವಾಗುವ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಪ್ರಕೃತಿ ವಿಕೋಪಕ್ಕೆ ಎಣೆ ಮಾಡಿಕೊಟ್ಟಿದೆ. ಅರಣ್ಯ ಇಲಾಖೆ ಅರಣ್ಯ ಬೆಳೆಸುವ ಇಚ್ಛಾಶಕ್ತಿ ತೋರುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಗಣಿಗಾರಿಕೆಯ ಪ್ರಭಾವದಿಂದ ಸಾಕಷ್ಟು ಅರಣ್ಯ ನಾಶವಾಗಿದೆ. ಆದರೆ ಅರಣ್ಯ ಇಲಾಖೆಯು ಅದನ್ನು ಪುನರ್ ನಿರ್ಮಿಸುವ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದರು.
ದೇಶದಲ್ಲಿ ನದಿಗಳ ಜೋಡಣೆಯ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ನದಿ ಜೋಡಣೆ ಕಾರ್ಯ ಮಾಡದಿದ್ದರೆ, ಮುಂದಿನ ಭವಿಷ್ಯ ಕರಾಳವಾಗಿರುತ್ತದೆ. ಪರಿಸರ ಸಂರಕ್ಷಣೆ ಹಾಗೂ ನದಿ ಜೋಡಣೆ ಕಾರ್ಯಕ್ಕೆ ರೈತರು, ಮಠಾಧೀಶರು, ಪ್ರಜ್ಞಾವಂತರು ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು.
ಪಟ್ಟಣದ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ಹೋರಾಟಕ್ಕೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಧಾನ ಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಲು ರೈತರೊಂದಿಗೆ ಮಠಾಧೀಶರ ಪರಿಷತ್ತು ಅಣಿಯಾಗಲಿದೆ ಎಂದು ಬೆಂಬಲ ಸೂಚಿಸಿದರು. ನದಿಗಳ ಜೋಡಣೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶಯವಾಗಿತ್ತು. ಅದು ಇದುವರೆಗೂ ಈಡೇರಿಸಲು ಸರ್ಕಾರಗಳು ಮುಂದಾಗುತ್ತಿಲ್ಲವೆಂದು ಸರ್ಕಾರಗಳ ನಡೆಗೆ ಬೇಸರ ವ್ಯಕ್ತಪಡಿಸಿದರು.
ಹಾಲಶಂಕರ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಂಗ್ಲೆ ಮಲ್ಲಿಕಾರ್ಜುನ, ಸಾಮಾಜಿಕ ಕಾರ್ಯಕರ್ತರಾದ ಅನುಪಮಶೆಣೈ, ರಾಜಶೇಖರ ಮುಲಾಲಿ ಮಾತನಾಡಿದರು. ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಗಾದೆಪ್ಪ, ರೈತ ಮುಖಂಡರಾದ ಶ್ರೀಧರ, ಶರಣಪ್ಪ, ವೀರೇಶಯ್ಯ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.