ಯೋಜನೆ ತಿಳಿಸಲು ಬೀದಿ ನಾಟಕ
Team Udayavani, Dec 10, 2019, 3:57 PM IST
ತಾವರಗೇರಾ: ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಸ್ಥಳಿಯ ಪಪಂ ಸಹಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಗಳನ್ನು ಸಾರುವುದಕ್ಕೆ ಬೀದಿ ನಾಟಕ ಮೂಲಕ ಸೋಮವಾರ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಪ್ರಧಾನಮಂತ್ರಿ ಆಶ್ರಯ ಯೋಜನೆ ಮನೆಗಳನ್ನು ಅಳವಡಿಸಿಕೊಳ್ಳವುದು, ಪರಿಸರ ಸರಂಕ್ಷಣೆ, ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸುವುದು, ನೀರಿನ ಸಂರಕ್ಷಣೆ, ಶಕ್ತಿ ಸಂಪನ್ಮೂಲ ಸಂರಕ್ಷಣೆ, ಹೊಗೆ ಮುಕ್ತ ಅಡುಗೆ ಮನೆ, ಹಸಿರಿನತ್ತ ನಡೆ, ಗಿಡಗಳನ್ನುನೆಡೋಣ, ಸಹಬಾಳ್ವೆ, ಆರೋಗ್ಯಕರ ಜೀವನ ಮುಂತಾದ ಯೋಜನೆಗಳ ಬಗ್ಗೆ ಕುಷ್ಟಗಿಯ ಜನಜಾಗೃತಿ ಕಲಾರಂಗ ಸಂಸ್ಥೆ ಯ ಕಲಾವಿದರಾದ ಯಮನೂರಪ್ಪ ಭಜಂತ್ರಿ, ಶುಕಮುನಿ ಗಡಗಿ, ಈರಯ್ಯಸ್ವಾಮಿ, ಗೋಪಾಲ ಕಲಾಲ್, ಗಿರಿಜಮ್ಮ ಸೂಡಿ, ಗೌರಮ್ಮ ಕುರಿ ಮತ್ತು ಶರಣಪ್ಪ ವಡಗೇರಿ ವಿವಿಧ ಯೋಜನೆಗಳ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿದರು. ಮುಖ್ಯಾಧಿಕಾರಿ ಶಂಕರ್ ಡಿ. ಕಾಳೆ ಬೀದಿ ನಾಟಕಕ್ಕೆ ಚಾಲನೆ ನೀಡಿದರು. ಶ್ಯಾಮೂರ್ತಿ ಕಟ್ಟಿಮನಿ, ಶರಣಬಸವ ಸೈಂದರ್, ಮರೇಶ ನಾಯಕ, ಅಂಬಣ್ಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.