ಕೊಪ್ಪಳದಲ್ಲಿ ಅನಗತ್ಯ ಸುತ್ತಾಡುವ ವಾಹನಗಳ ಜಪ್ತಿ
Team Udayavani, May 10, 2021, 1:05 PM IST
ಕೊಪ್ಪಳ: ಸೋಮವಾರ ಬೆಳಗಿನ ವೇಳೆ ಜನ ದಟ್ಟಣೆಯಿಂದ ಕೂಡಿದ್ದ ಕೊಪ್ಪಳ ನಗರದಲ್ಲಿ ಮಧ್ಯಾಹ್ನದ ವೇಳೆ ಪೊಲೀಸರು ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ನಗರದ ವಿವಿಧ ರಸ್ತೆಗಳಲ್ಲಿ ಅನಗತ್ಯ ಸುತ್ತಾಡುವ ಬೈಕ್ ಗಳನ್ನು ವಶಕ್ಕೆ ಪಡೆಯುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿ ಸರ್ಕಲ್, ಅಶೋಕ ವೃತ್ತ ಸೇರಿ ಇತರೆ ರಸ್ತೆಯಲ್ಲೂ ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದಾರೆ.
ಇದನ್ನೂ ಓದಿ:ಲಾಕ್ ಡೌನ್ ನಿಯಮ ಪಾಲಿಸದ ಗ್ರಾಹಕರು : ಪೊಲೀಸರಿಂದ ಎಚ್ಚರಿಕೆ
ಅನಗತ್ಯ ಸುತ್ತಾಟ ನಡೆಸುವ ಬೈಕ್ ಗಳನ್ನು ಹಿಡಿದು ದಂಡ ಹಾಕುವ ಬದಲು ಜಪ್ತಿ ಮಾಡಿ ನೇರ ಸಂಚಾರಿ ಪೊಲೀಸ್ ಠಾಣೆಗೆ ಕಳುಹಿಸುತ್ತಿದ್ದಾರೆ. ಆದರೆ ಕೆಲವು ಅಗತ್ಯ ಕಾರಣ ನೀಡಿದರೂ ಸಹಿತ ಪೊಲೀಸರು ಎಲ್ಲ ವಾಹನಗಳನ್ನು ಹಿಡಿದು ಪೊಲೀಸ್ ಠಾಣೆಗೆ ಕಳುಹಿಸುತ್ತಿದ್ದಾರೆ.
ತಹಶೀಲ್ದಾರ್ ವೃತ್ತದಲ್ಲಿ ಡಿಎಸ್ಪಿ ಗೀತಾ ಬೇವಿನಹಾಳ ಅವರೇ ಮುಂದೆ ನಿಂತು ಬಿಗಿ ಬಂದೋಬಸ್ತ್ ಗೆ ಸೂಚನೆ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.