ಬಿಜಕಲ್ ಗ್ರಾಮದಲ್ಲಿ ಬಸ್ಸಿಗಾಗಿ ಪ್ರತಿಭಟನೆ: 3 ಗಂಟೆ ಬಸ್ ತಡೆದ ವಿದ್ಯಾರ್ಥಿಗಳು


Team Udayavani, Dec 17, 2022, 3:43 PM IST

news incident 1

ದೋಟಿಹಾಳ: ಬೆಳಗ್ಗೆ ದೋಟಿಹಾಳದಿಂದ ಬಿಜಕಲ್ ಮೂಲಕ  ಕುಷ್ಟಗಿಗೆ ಶಾಲಾ ಕಾಲೇಜು ಹೋಗಲು ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಬಿಜಕಲ್ ಗ್ರಾಮದ ವಿದ್ಯಾರ್ಥಿಗಳು ಶನಿವಾರ ಬಸ್ ತಡೆದು ಸುಮಾರು 3 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಲಾ ವಿಧ್ಯಾರ್ಥಿನಿ ನಮ್ಮ ಗ್ರಾಮದಿಂದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಷ್ಟಗಿ ಪಟ್ಟಣಕ್ಕೆ ಶಾಲಾ ಕಾಲಾಜಿಗೆ ಹೋಗುತ್ತೇವೆ. ನಮಗೆ ಬೆಳಿಗ್ಗೆ ಶಾಲೆಗೆ ಹೋಗಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ ಹಾಗೂ ಬಸ್ಸಿನಲ್ಲಿ ಹತ್ತುವರೆಗೂ ಚಾಲಕ ಬಸ್ ನಿಲ್ಲಿಸುವದಿಲ್ಲ. ನಿನ್ನೆ ಬಸ್ ಹತ್ತುವ ವೇಳೆ ನನ್ನ ಗೆಳತಿಯರಿಬ್ಬರೂ ಬಸ್ಸಿನಿಂದ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇವರಿಗೆ ನಮ್ಮ ಬಗ್ಗೆ ಕಾಳಜಿ ಇಲ್ಲ, ಬಸ್ಸಿನ ಕಂಡಕ್ಟರ್ ವಿದ್ಯಾರ್ಥಿನಿಯರಿಗೆ ಏಕವಚನದಿಂದಲೇ ಮಾತನಾಡಿಸುತ್ತಾರೆ. ಶಾಲೆಗೆ ತಡವಾಗಿ ಹೋದರೆ ಶಾಲೆಯಲ್ಲಿ ಶಿಕ್ಷಕರು ಬೈಯುತ್ತಾರೆ. ಬಸ್ ಇಲ್ಲದೆ ಮನೆಗೆ ಹೋದರೆ ಪಾಲಕರು ಬಯ್ಯುತ್ತಾರೆ ನಾವು ಏನು ಮಾಡಬೇಕೆಂಬ ಸ್ಥಿತಿಯಲ್ಲಿದ್ದೇವೆ ಎಂದು ವಿದ್ಯಾರ್ಥಿನಿಯರು ತನ್ನ ಅಳಲನ್ನು ತೋಡಿಕೊಂಡರು.

ಇದನ್ನೂ ಓದಿ: ಪ್ರಧಾನಿ ವಿರುದ್ಧ ಬಿಲಾವಲ್ ಭುಟ್ಟೋ ಹೇಳಿಕೆ ಖಂಡಿಸಿದ ಸೂಫಿ ಕೌನ್ಸಿಲ್

ದೋಟಿಹಾಳ ಗ್ರಾಮದ ಕಡೆಯಿಂದ ಬೆಳಿಗ್ಗೆ ಒಟ್ಟು ನಾಲ್ಕು ಬಸ್ಸುಗಳು ಕುಷ್ಟಗಿ ಪಟ್ಟಣಕ್ಕೆ ಹೋಗುತ್ತವೆ ಆದರೆ ಎಲ್ಲಾ ಬಸ್ಸುಗಳು ಫುಲ್ ಆಗಿ ಬರುತ್ತವೆ. ಕೆಲವು ಬಸ್ಸು ಇಲ್ಲಿ ನಿಲ್ಲಿಸುತ್ತವೆ ಇನ್ನು ಕೆಲವು ಬಸ್ಸುಗಳು ಹಾಗೆ ಹೊರಟು ಹೋಗುತ್ತವೆ.  ಬಸ್ ಫುಲ್ ಆಗಿ ಬಂದಾಗ ನಾವು ಜೊತು ಬಿದ್ದು ಬಸ್ಸಿನಲ್ಲಿ ಹತ್ತಿ ಕೊಂಡು ಹೋಗಬೇಕು. ಈ ವೇಳೆ ಕೆಲವರು ಕಾಲು ಜಾರಿ ಬಿದ್ದ ಘಟನೆಯೂ ನಡೆದಿದೆ. ಹೀಗಾಗಿ ನಮಗೆ ಒಂದು ಪ್ರತ್ಯೇಕ ಬಸ್ ಬಿಡಬೇಕು. ಅಲ್ಲಿಯವರೆಗೆ ನಾವು ಈ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಸ್ಥಳಕ್ಕೆ ಕುಷ್ಟಗಿ ರಸ್ತೆ ಸಾರಿಗೆ ಘಟಕದ ವ್ಯವಸ್ಥಾಪಕ ಸಂತೋಷ ಕುಮಾರ ಆಗಮಿಸಿ. ಪ್ರತಿಭಟನಾಕಾರರ ಸಮಸ್ಯೆಯನ್ನು ಕೇಳಿ ಮಾತನಾಡಿದ ಅವರು ದೋಟಿಹಾಳ ಗ್ರಾಮದಿಂದ ಕುಷ್ಟಗಿಗೆ ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಸುಮಾರು ನಾಲ್ಕು ಬಸ್ಸುಗಳು ಈ ಮಾರ್ಗವಾಗಿ ಸಂಚರಿಸುತ್ತೇವೆ. ಹೆಚ್ಚಿನ ಬಸ್ಸಿನ ಬಿಡಲು ಸಾಧ್ಯವಿಲ್ಲ. ಒಂದು ವೇಳೆ ನಿಮಗೆ ಬಸ್ಸಿನ ಅವಶ್ಯಕತೆ ಇದ್ದರೆ. ಇಲ್ಲಿಗೆ  ನಮ್ಮ ಸಿಬ್ಬಂದಿಯನ್ನು ಕೆಲವು ದಿನಗಳ ಕಾಲ ಇಲ್ಲಿನ ಸ್ಥಿತಿ ಪರಿಶೀಲನೆಗೆ ಕಳಿಸುತ್ತೇನೆ. ಅವರಿಂದ ಬಂದ ವರದಿಯ ಮೇಲೆ ಒಂದು ಬಸ್ಸಿನ ವ್ಯವಸ್ಥೆ ಮಾಡಲು ಮೇಲಿಧಿಕಾರಿಗಳಿಗೆ ಗಮನಕ್ಕೆ ತರುತ್ತೇನೆ ಎಂದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಅಧಿಕಾರಿಗಳ ಜೊತೆ ಮಾತಿನ ಚಕಾಮಿಕೆ ನಡೆಯಿತು ಒಂದು ಹಂತದಲ್ಲಿ ಅಧಿಕಾರಿ ಬೇಸತ್ತು ನಡೆದುಕೊಂಡೆ ಕುಷ್ಟಗಿ ಹೋಗಿ ದೂರ ನೀಡುತ್ತೇನೆ ಎಂದು ಹೇಳಿ ಹೊರಟರು. ಆಗ ಪ್ರತಿಭಟನಾಕಾರರು ಅವರ ಹಿಂದೆ ಹೊರಟರು ದಾರಿಯ ಮಧ್ಯದಲ್ಲಿ ಕುಷ್ಟಗಿ ಪಿಎಸ್ಐ ಮೌನೇಶ ರಾಠೋಡ ಅವರು ಆಗಮಿಸಿ ಪ್ರತಿಭಟನಾಕಾರರನ್ನು ಮನವಲಿಸಿ, ಅಧಿಕಾರಿಗಳ ಮಾತಿಗೆ ಬೆಲೆ ನೀಡಿ. ಕೆಲವು ದಿನ ಕಾಲಾವಕಾಶ ನೀಡಿ ನಂತರ ಇದರ ಬಗ್ಗೆ ಮಾತನಾಡೋಣ. ಈಗ ಏಕಾಏಕಿ ಬಸ್ ತಡೆದು ಪ್ರತಿಭಟನೆ ಮಾಡುವುದು ತಪ್ಪು ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಇಂಥ ಪ್ರತಿಭಟನೆಯಿಂದ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಹೀಗಾಗಿ ಕಾನೂನು ಪಾಲಿಸಿ ಎಂದು ತಿಳಿಮಾತು ಹೇಳಿದರು. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.

ಇದನ್ನೂ ಓದಿ: ಭೂಪಟದಲ್ಲಿ ಪಾಕಿಸ್ತಾನ ಅಳಿಸಿ ಹೋಗಿ, ಅಖಂಡ ಭಾರತವಾಗುತ್ತದೆ: ಕೆ.ಎಸ್.ಈಶ್ವರಪ್ಪ

ಈ ಪ್ರತಿಭಟನೆಯಿಂದ ಸುಮಾರು 8ಕ್ಕೂ ಹೆಚ್ಚು ಸಾರಿಗೆ ಬಸ್ಸುಗಳು ರಸ್ತೆ ಮಧ್ಯದಲ್ಲಿ ನಿಂತಿದ್ದವು ಇದರಿಂದ  3-4 ತಾಸು  ಪ್ರಯಾಣಿಕರು ತೊಂದರೆ ಅನುಭವಿಸಿದರು.

ಪ್ರತಿನಿತ್ಯ ದೋಟಿಹಾಳ ಗ್ರಾಮದಿಂದ ಕುಷ್ಟಗಿಗೆ ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಸುಮಾರು ನಾಲ್ಕು ಬಸ್ಸುಗಳು ಈ ಮಾರ್ಗವಾಗಿ ಸಂಚರಿಸುತ್ತೇವೆ. ಈ ವೇಳೆ ಹೆಚ್ಚುವರಿ ಬಸ್ ಬಿಡಲು ಸಾಧ್ಯವಿಲ್ಲ. ಕಾರಣ ತಾಲೂಕಿನ ಎಲ್ಲಾ ಹಳ್ಳಿಗಳ ಶಾಲಾ ಮಕ್ಕಳು ಇದೆ ವೇಳೆಗೆ ಬಸ್ ಬಿಡಿ ಎಂದರೆ. ಬಸ್ಸಿನ ಸಮಸ್ಯೆಯಾಗುತ್ತದೆ ಹೀಗಾಗಿ ವಿದ್ಯಾರ್ಥಿಗಳು ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಕಡೆಗೆ ಒಂದೇ ಸಮಯಕ್ಕೆ ಒಂದೊಂದು ಬಸ್ ಬಿಡಲು ತೊಂದರೆಯಾಗುತ್ತದೆ.ಸಂತೋಷ ಕುಮಾರ.ಕುಷ್ಟಗಿ ರಸ್ತೆ ಸಾರಿಗೆ ಘಟಕದ ವ್ಯವಸ್ಥಾಪಕ.

ವಿದ್ಯಾರ್ಥಿಗಳೇ ಏಕಾಏಕಿ ಬಸ್ ತಡೆದು ಪ್ರತಿಭಟನೆ ಮಾಡುವುದು ತಪ್ಪು ಕಾನೂನು ಕೈಗೆತ್ತಿಕೊಳ್ಳಬೇಡಿ.  ಮುಂದೊಂದು ದಿನ ನಿಮ್ಮ ಭವಿಷ್ಯಕ್ಕೆ ಇಂಥ ಘಟನೆಗಳು ಮುಳ್ಳಾಗುವ ಸಾಧ್ಯತೆ ಇದೆ. ಕಾನೂನು ತೊಡಕು ಇಲ್ಲದ ರೀತಿಯಲ್ಲಿ ಪ್ರತಿಭಟನೆ ಮಾಡಿ ನಿಮ್ಮ ಬೇಡಿಕೆಯನ್ನು ಪಡೆದುಕೊಳ್ಳಿ.–  ಮೌನೇಶ ರಾಠೋಡ, ಪಿಎಸ್ಐ ಕುಷ್ಟಗಿ.

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-tavaragera

Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್

4-gangavathi

Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.