ಹಸಿದವರಿಗೆ ಅನ್ನ ನೀಡುವ ‘ಸುಧಾ’
•ಸಾಮಾಜಿಕ ಕೆಲಸಕ್ಕೆ ಟೊಂಕ ಕಟ್ಟಿದ ಯುವಪಡೆ •ಸದ್ಯ ಕೊಪ್ಪಳದಲ್ಲಿ ಕಾರ್ಯ ನಿರ್ವಹಣೆ
Team Udayavani, May 18, 2019, 2:33 PM IST
ಕೊಪ್ಪಳ: ನಿತ್ಯವೂ ಗಂಟೆಗಟ್ಟಲೇ ಮೊಬೈಲ್ನಲ್ಲೇ ಕಾಲಹರಣ ಮಾಡುವ ಯುವಕರ ಮಧ್ಯೆಯೂ ಇಲ್ಲೊಂದು ಯುವಪಡೆ ಸಾಮಾಜಿಕ ಕೆಲಸಕ್ಕೆ ಟೊಂಕ ಕಟ್ಟಿದೆ. ಸಭೆ-ಸಮಾರಂಭಗಳಲ್ಲಿ ಉಳಿದ ಅನ್ನವನ್ನು ಹಸಿದವರಿಗೆ, ಬಡವರಿಗೆ, ನಿರ್ಗತಿಕರಿಗೆ ವಿತರಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದೆ.
ಹೌದು. ಇಲ್ಲಿಯ ಸುಧಾ ಕಲ್ಚರಲ್ ಅಕಾಡೆಮಿ ಇಂತಹ ಮಹತ್ಕಾರ್ಯ ಮುನ್ನಡೆಸಿಕೊಂಡು ಹೊರಟಿದೆ. ಜಿಲ್ಲೆಯ ಜನತೆಗೆ ದುಡಿಮೆ ಇಲ್ಲ, ಉದ್ಯೋಗವೂ ಅಷ್ಟಕ್ಕಷ್ಟೆ. ತುತ್ತಿನ ದುಡಿಮೆಗಾಗಿ ಇಂದಿಗೂ ಪರದಾಡುವ ಪರಿಸ್ಥಿತಿಯಿದೆ. ಅಲ್ಲದೇ ಅನಾಥರು, ಬಡ ಮಕ್ಕಳು, ನಾನಾ ಕಾರಣಕ್ಕೆ ಮನೆ ತೊರೆದು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ತಾಣಗಳಲ್ಲಿ ನಿತ್ಯವೂ ಊಟಕ್ಕಾಗಿ ಜನರ ಮುಂದೆ ಕೈ ಚಾಚಿ ಬೇಡುವವರಿದ್ದಾರೆ. ಇದನ್ನೆಲ್ಲ ಮನಗಂಡ ಬಸವರಾಜ ಮರಡೂರು, ಬಿ.ಎನ್. ಹೊರಪೇಟೆ ಸೇರಿದಂತೆ ಇತರೆ ಯುವಕರು ಸೇರಿಕೊಂಡು ನಿರ್ಗತಿಕರಿಗೆ, ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ನಗರ ಪ್ರದೇಶದಲ್ಲಿ ಸಭೆ-ಸಮಾರಂಭ-ಮದುವೆ ಸೇರಿ ಇನ್ನಿತರ ಕಾರ್ಯಕ್ರಮಗಳಲ್ಲಿ ಉಳಿಯುವ ಅನ್ನ, ಸಾಂಬಾರು, ಸಿಹಿ ಪದಾರ್ಥವನ್ನು ವ್ಯರ್ಥವಾಗಿ ಬಿಸಾಡುತ್ತಾರೆ. ಇದನ್ನರಿತ ಈ ಯುವಪಡೆ ಅನ್ನ ಕಸದ ಬುಟ್ಟೆ ಸೇರುವ ಬದಲು ಹಸಿದ ಹೊಟ್ಟೆ ಸೇರಿದರೆ ಅನ್ನಕ್ಕೂ ಬೆಲೆ ಸಿಗಲಿದೆ, ಹಸಿದ ಹೊಟ್ಟೆಯೂ ತಣ್ಣಗಾಗಲಿದೆ ಎನ್ನುವುದನ್ನು ಅರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಅಭಿಯಾನ ಆರಂಭಿಸಿದ್ದಾರೆ. ಇದಕ್ಕೊಂದು ಮೂರ್ತರೂಪ ಕೊಡಬೇಕೆಂದು ನಿಶ್ಚಯಿಸಿ ಕೆಲವೇ ತಿಂಗಳ ಹಿಂದಷ್ಟೆ ‘ಸುಧಾ ಕಲ್ಚರಲ್ ಅಕಾಡೆಮಿ’ ಸಂಸ್ಥೆ ಸ್ಥಾಪಿಸಿ ಇತ್ತೀಚೆಗೆ ಮೇ 12 ವಿಶ್ವ ಅಮ್ಮಂದಿರ(ತಾಯಂದಿರ) ದಿನಾಚರಣೆಯಂದೇ ಸಂಸ್ಥೆ ಉದ್ಘಾಟಿಸಿದೆ.’ಹಸಿವು ಇದ್ದ ಕಡೆ ನಮ್ಮ ನಡೆ’ಎನ್ನುವ ಧ್ಯೇಯ ವಾಕ್ಯವೇ ನಾಮಾಂಕಿತವನ್ನಿಟ್ಟು ಫೇಸ್‌ಬುಕ್-ವಾಟ್ಸ್‌ಆ್ಯಪ್ ಗ್ರುಪ್‌ನಲ್ಲಿ ಶೇರ್ ಮಾಡಿದೆ.
ಯುವಪಡೆಯ ಕಾರ್ಯಕ್ಕೆ ಮೆಚ್ಚಿದ ಜನತೆ ಮೊದಲ ದಿನವೇ ಯುವಕರನ್ನು ಸಂಪರ್ಕಿಸಿ ವಿವಿಧ ಸಭೆ-ಸಮಾರಂಭಗಳಲ್ಲಿ ಉಳಿದ ಅನ್ನವನ್ನು ನೀಡಿದ್ದಾರೆ. ಈ ಯುವಕರು ಪ್ಯಾಕೆಟ್‌ನಲ್ಲಿ ಎಲ್ಲವನ್ನೂ ಸಿದ್ಧಪಡಿಸಿ ಸಾರ್ವಜನಿಕ ಸ್ಥಳದಲ್ಲಿ ಹಸಿವಿನಿಂದ ಬಳಲುವ ಬಡವರಿಗೆ, ಅಂಗವಿಕಲರಿಗೆ ಅರ್ಪಿಸಿ ಅನ್ನಕ್ಕೂ ಬೆಲೆ ಕೊಟ್ಟಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಿತ್ಯ ಒಂದೊತ್ತಿನ ಊಟಕ್ಕಾಗಿ ಬಳಲುವವರನ್ನು ಕಣ್ಣಾರೆ ನೋಡುತ್ತಿದ್ದೆವು. ಅವರಿಗೆ ನಮ್ಮ ಕೈಲಾದಷ್ಟು ಸಹಾಯ-ಸಹಕಾರ ಮಾಡಬೇಕೆಂಬ ನಿರ್ಧಾರ ಮಾಡಿ ನಮ್ಮೆಲ್ಲ ಸ್ನೇಹಿತರೊಡಗೂಡಿ ಸಭೆ-ಸಮಾರಂಭಗಳಲ್ಲಿ ಉಳಿದ ಅನ್ನವನ್ನು ವ್ಯರ್ಥ ಮಾಡದೆ ನಮಗೇ ಕೊಡುವಂತೆ ಮನವಿ ಮಾಡಿ ಆ ಅನ್ನವನ್ನು ಹಸಿದವರಿಗೆ ಕೊಡುತ್ತಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಅನ್ಯ ಜಿಲ್ಲೆಗಳಿಂದಲೂ ಕರೆಗಳು ಬರುತ್ತಿವೆ. ನಮ್ಮ ಕೈಲಾದದ್ದು ಮಾಡುತ್ತಿದ್ದೇವೆ.-ಬಸವರಾಜ ಮರಡೂರು,ಸುಧಾ ಕಲ್ಚರಲ್ ಅಕಾಡೆಮಿ ಸಂಸ್ಥಾಪಕ.
ಅಚ್ಚರಿಯ ವಿಷಯವೆಂದರೆ ಕೊಪ್ಪಳದ ಗವಿಮಠ, ಮಳೆ ಮಲ್ಲೇಶ್ವರ ದೇವಸ್ಥಾನಗಳಿಂದಲೂ ಈ ಯುವಕರಿಗೆ ಕರೆಗಳು ಬರುತ್ತಿದ್ದು, ನಿತ್ಯ ಒಂದೆರೆಡು ಗಂಟೆ ಅಳಿಲು ಸೇವೆ ಆರಂಭಿಸಿದ್ದಾರೆ. ಇವರ ಸೇವಾ ಕಾರ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಅನ್ಯ ಜಿಲ್ಲೆಗಳಿಂದಲೂ ಕರೆ ಬರುತ್ತಿವೆ. ಸದ್ಯಕ್ಕೆ ಕೊಪ್ಪಳ ನಗರ ಪ್ರದೇಶದಲ್ಲಿ ಈ ಸಾಮಾಜಿಕ ಕಾರ್ಯ ಆರಂಭಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.