ಟಿಬಿ ಡ್ಯಾಂ ನೀರು ಆಂಧ್ರ-ತೆಲಂಗಾಣ ಪಾಲು
| ಅಚ್ಚುಕಟ್ಟು ಪ್ರದೇಶದ ಅನ್ನದಾತರು ಕಂಗಾಲು | 15 ದಿನಗಳಿಂದ 3.7 ಟಿಎಂಸಿ ಅಡಿ ನೀರು ಹರಿ ಬಿಟ್ಟ ಅಧಿಕಾರಿಗಳು
Team Udayavani, Mar 23, 2021, 1:06 PM IST
ಗಂಗಾವತಿ: ಪ್ರತಿ ಬಾರಿಯಂತೆ ಈ ಬಾರಿಯೂ ತುಂಗಭದ್ರಾ ಡ್ಯಾಂ ನೀರು ಬಿಡುವ ವಿಷಯದಲ್ಲಿ ಯಡವಟ್ಟು ನಡೆದಿದೆ. ನೀರಿನ ಸಂಗ್ರಹ ಪ್ರಮಾಣ ಕಡಿಮೆಇದ್ದರೂ ಆಂಧ್ರ ಮತ್ತು ತೆಲಂಗಾಣಕ್ಕೆ ನೀರು ಹರಿಸಲಾಗಿದೆ.
ತುಂಗಭದ್ರಾ ಡ್ಯಾಂನಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಕಾಲುವೆ ಮತ್ತು ನದಿ ಮೂಲಕ ನೀರು ಈಗಾಗಲೇ ಆಂಧ್ರಪ್ರದೇಶ-ತೆಲಂಗಾಣ ರಾಜ್ಯದ ಡ್ಯಾಂಗಳಿಗೆ ನೀರು ಹರಿಸಲಾಗಿದೆ.ಬೇಸಿಗೆ ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆ ರೈತರ ಕೈ ಸೇರಲು ಏ.30ರವರೆಗೆ ಕಡ್ಡಾಯವಾಗಿ ಕಾಲುವೆಗಳಿಗೆ ನೀರು ಹರಿಸಲೇ ಬೇಕಿದ್ದು ಸದ್ಯ ಡ್ಯಾಂನಲ್ಲಿ ಕೇವಲ 16 ಟಿಎಂಸಿ ನೀರು ಸಂಗ್ರಹವಿದೆ. ಪರಿಸ್ಥಿತಿ ಹೀಗಿದ್ದರೂ ಆಂಧ್ರ ಮತ್ತುತೆಲಂಗಾಣ ಕೋಟಾದ ನೀರನ್ನು ಕಳೆದ 15ದಿನಗಳಿಂದ ಹಗಲು-ರಾತ್ರಿ ನದಿ ಮೂಲಕಬಿಡಲಾಗುತ್ತಿದೆ. ಡ್ಯಾಂನಲ್ಲಿ ಬೇಗ ನೀರು ಖಾಲಿ ಮಾಡುವ ದುರುದ್ದೇಶ ಅಧಿಕಾರಿ ವಲಯದಲ್ಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ಯಾಂನಲ್ಲಿ ನೀರಿನ ಕೊರತೆ ಇದ್ದು ಭದ್ರಾ ಡ್ಯಾಂನಿಂದ ಕನಿಷ್ಟ 10 ಟಿಎಂಸಿ ನೀರು ಪಡೆಯುವಂತೆ ಅಚ್ಚುಕಟ್ಟು ರೈತರುಸಚಿವರು, ಶಾಸಕರು, ಸಂಸದರು ಸೇರಿದಂತೆಇತ್ತೀಚೆಗೆ ಸಿಂಧನೂರಿಗೆ ಭೇಟಿ ನೀಡಿದ್ದಸಿಎಂ ಯಡಿಯೂರಪ್ಪ ಅವರಲ್ಲೂ ಮನವಿಮಾಡಿದ್ದಾರೆ. ಈ ಮಧ್ಯೆ ಜಲಸಂಪನ್ಮೂಲಇಲಾಖೆ ಮತ್ತು ತುಂಗಭದ್ರಾಡ್ಯಾಂನಲ್ಲಿರುವ ಅಧಿಕಾರಿಗಳು ತುಂಗಭದ್ರಾ ಬೋರ್ಡ್ ಜತೆ ಸೇರಿ ಏಪ್ರಿಲ್ ನಂತರ ನದಿ ಮೂಲಕ ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಕೋಟಾದ ನೀರನ್ನು ಈಗಲೇಹರಿಸುವ ಮೂಲಕ ರಾಜ್ಯದ ಅಚ್ಚುಕಟ್ಟುಪ್ರದೇಶ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ.
ಯಾರಿಗೆ, ಎಷ್ಟು ನೀರು?: ಡ್ಯಾಂನಲ್ಲಿ ಸಂಗ್ರಹವಾಗುವ ನೀರಿನಲ್ಲಿ ರಾಜ್ಯದ ಪಾಲು ಶೇ.65, ಆಂಧ್ರಪ್ರದೇಶ-ತೆಲಂಗಾಣರಾಜ್ಯಗಳ ಪಾಲು ಶೇ.35ರಷ್ಟಿದ್ದು, ಆದ್ಯತೆಮೇರೆಗೆ ಆಂಧ್ರಪ್ರದೇಶದ ಪಾಲಿನ ನೀರನ್ನು ಬಿಡಬೇಕಾಗುತ್ತದೆ. ಪ್ರತಿ ವರ್ಷ ಏಪ್ರಿಲ್ ನಂತರ ಬೇಸಿಗೆಯ ಕೋಟಾವನ್ನುಬಿಡಲಾಗುತ್ತಿತ್ತು. ಈಗ ರಾಯಚೂರು,ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ 8 ಲಕ್ಷಎಕರೆ ಭೂಮಿಯಲ್ಲಿ ಭತ್ತ, ಮೆಣಸಿನಕಾಯಿ, ಹತ್ತಿ ಸೇರಿ ಇತರೆ ಬೆಳೆ ಬೆಳೆಯಲಾಗಿದೆ.ಪ್ರಸ್ತುತ ಬೆಳೆದು ನಿಂತ ಬೆಳೆಗಳು ರೈತರಕೈಸೇರಲು ಕನಿಷ್ಟ ಏ.30ರವರೆಗೆ ನೀರು ಬೇಕಾಗುತ್ತದೆ. ಸದ್ಯ ನೀರಿನ ಕೊರತೆಯಮಧ್ಯೆ ಆಂಧ್ರಪ್ರದೇಶಕ್ಕೆ ಹರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಭದ್ರಾದಿಂದ ನೀರು: ಸದ್ಯ ತುಂಗಭದ್ರಾ ಡ್ಯಾಂನಲ್ಲಿ 16 ಟಿಎಂಸಿ ನೀರು ಸಂಗ್ರಹವಿದ್ದು,ಬೆಳೆದು ನಿಂತ ಬೆಳೆಗೆ ಮತ್ತು ಮೂರೂಜಿಲ್ಲೆಗಳಿಗೆ ಬೇಸಿಗೆಯಲ್ಲಿ ಕುಡಿಯಲುನೀರು ಬೇಕಾಗುತ್ತದೆ. ಇದನ್ನು ಪರಿಗಣಿಸಿಮೂರು ಜಿಲ್ಲೆಯ ಸಂಸದರು, ಶಾಸಕರು,ಸಚಿವರು ಸಿಎಂಗೆ ಮನವಿ ಮಾಡಿದ್ದರಿಂದಯಡಿಯೂರಪ್ಪ ಅವರು ಭದ್ರಾದಿಂದನೀರು ಹರಿಸಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ
ತುಂಗಭದ್ರಾ ಡ್ಯಾಂನಲ್ಲಿ ಸದ್ಯ 16 ಟಿಎಂಸಿ ಅಡಿ ನೀರಿದ್ದು ಬೆಳೆದು ನಿಂತ ಬೆಳೆ ರೈತರ ಕೈಸೇರಲು ಈ ನೀರು ಸಾಕಾಗಲ್ಲ. ಆದರೂ ಡ್ಯಾಂ ನಿಂದ ಆಂಧ್ರಪ್ರದೇಶ ಕೋಟಾಎಂದು ನದಿಯ ಮೂಲಕ ಕಳೆದ 15 ದಿನಗಳಿಂದ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ಅಚ್ಚುಕಟ್ಟು ರೈತರು ಆತಂಕಗೊಂಡಿದ್ದಾರೆ. ಕೂಡಲೇ ನದಿಗೆಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಜತೆಗೆ ಭದ್ರಾದಿಂದ 10 ಟಿಎಂಸಿ ಅಡಿ ನೀರನ್ನು ತುಂಗಭದ್ರಾ ಡ್ಯಾಂಗೆ ಹರಿಸಬೇಕು. ಆಂಧ್ರಪ್ರದೇಶ ತೆಲಂಗಾಣದ ನೀರಿನ ಕೋಟಾವನ್ನು ಏ.10ರ ನಂತರ ಹರಿಸಬೇಕು. –ರೆಡ್ಡಿ ಶ್ರೀನಿವಾಸ, ಎಪಿಎಂಸಿ ನಿರ್ದೇಶಕ, ಅಧ್ಯಕ್ಷರು ಕನಕಗಿರಿ ಬ್ಲಾಕ್ ಕಾಂಗ್ರೆಸ್
ತುಂಗಭದ್ರಾ ಬೋರ್ಡ್ ಅಧಿಕಾರಿಗಳ ಒತ್ತಡದಿಂದ ಸದ್ಯ ಆಂಧ್ರಪ್ರದೇಶದಕೋಟಾ 3.7 ಟಿಎಂಸಿ ಅಡಿ ನೀರನ್ನು ನದಿಯ ಮೂಲಕ ಹರಿಸಲಾಗುತ್ತಿದ್ದು, ತಕ್ಷಣವೇ ನಿಲ್ಲಿಸುವಂತೆ ಸೂಚಿಸಲಾಗಿದೆ. ಏ.10 ನಂತರ ಆಂಧ್ರ ಕೋಟಾವನ್ನುನದಿಯ ಮೂಲಕ ಹರಿಸುವಂತೆ ಸೂಚನೆ ನೀಡಲಾಗಿದೆ. ಇದುವರೆಗೂ ಹರಿಸಿದ ನೀರಿನ ಲೆಕ್ಕ ಹಿಡಿದುಕೊಂಡು ಮುಂದಿನ ಏಪ್ರಿಲ್‌ನಲ್ಲಿ ಉಳಿದ ಆಂಧ್ರ ಕೋಟಾವನ್ನು ಹರಿಸಲಾಗುತ್ತದೆ. ರೈತರು ಆತಂಕ ಪಡಬಾರದು. – ತಿಪ್ಪೇರುದ್ರಸ್ವಾಮಿ, ಅಧ್ಯಕ್ಷರು, ತುಂಗಭದ್ರಾ ಕಾಡಾ ಯೋಜನೆ
- ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.