ಕುಷ್ಟಗಿ: ಸಮಗ್ರ ಶೈಕ್ಷಣಿಕ ಅಭಿವೃದ್ದಿಗೆ ಶಿಕ್ಷಣ ಇಲಾಖೆಗೆ 82 ಕೋಟಿ ರೂ. ವಿನಿಯೋಗ
Team Udayavani, Sep 5, 2022, 3:12 PM IST
ಕುಷ್ಟಗಿ: ತಾಲೂಕಿನ ಸಮಗ್ರ ಶೈಕ್ಷಣಿಕ ಅಭಿವೃದ್ದಿಗೆ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯಿಂದ ಶಿಕ್ಷಣ ಇಲಾಖೆಗೆ 82 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಇಲ್ಲಿನ ಕ್ರೈಸ್ತ ದಿ ಕಿಂಗ್ ಶಾಲೆಯ ಸಭಾಂಗಣದಲ್ಲಿ ತಾ.ಪಂ. ಕುಷ್ಟಗಿ, ಜಿ.ಪಂ. ಕೊಪ್ಪಳ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 134ನೇ ಜನ್ಮದಿನಾಚರಣೆ ಪಯುಕ್ತ ಕುಷ್ಟಗಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ-2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ ಇಲಾಖೆಗೆ ಶಾಲಾ ಕಟ್ಟಡ, ಶಾಲೆಗೆ ಹೋಗುವ ರಸ್ತೆ, ಭೋಧನಾ, ಆಟೋಪಕರಣ, ಪ್ರಾಯೋಗಾಲಯಕ್ಕೆ ವಿನಿಯೋಗಿಸಲಾಗಿದೆ. ಕುಷ್ಟಗಿ ತಾಲೂಕು ಶೈಕ್ಷಣಿಕ ಅಭಿವೃದ್ಧಿ, ಸ್ಮಾರ್ಟ ಕ್ಲಾಸ್ ಸೌಲಭ್ಯ ಹಾಗೂ ಉತ್ತಮ ಫಲಿತಾಂಶ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಶಿಕ್ಷಕರೇ ಪ್ರೇರಣೆಯಾಗಿದ್ದಾರೆ. ಶಿಕ್ಷಕರ ಪ್ರೇರಣೆಯಿಂದ 50 ಶಾಲೆಗಳು ಗ್ರಾಮಸ್ಥರ ವಂತಿಗೆಯಲ್ಲಿ ಸ್ಟಾರ್ಟ್ ಕ್ಲಾಸ್ ಕೊಠಡಿ ಹೊಂದಿವೆ. ಇದನೇ ಪ್ರೇರಣೆಯಾಗಿ 150 ಶಾಲೆಗಳಲ್ಲಿ ಸ್ಮಾರ್ಟ ಕ್ಲಾಸ್ ಅಳವಡಿಸಲಾಗಿದೆ ಎಂದರು.
ಬಸವನ ಬಾಗೇವಾಡಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಅಶೋಕ ಹಂಚಲಿ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ತಹಶಿಲ್ದಾರ ಗುರುರಾಜ್ ಚಲವಾದಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಬಿ.ಆರ್.ಸಿ. ಸಮನ್ವಯಾಧಿಕಾರಿ ಜಗದೀಶ ಎಂ., ದೈಹಿಕ ಶಿಕ್ಷಣ ಪರಿವೀಕ್ಷಕ ಧರ್ಮಕುಮಾರ ಕಂಬಳಿ, ಅಕ್ಷರ ದಾಸೋಹ ಯೋಜನಾಧಿಕಾರಿ ಕೆ.ಶೆರಣಪ್ಪ, ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಪ್ಪ ಅಂಗಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಪೂಜಾರ, ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಎಮ್.ಎಮ್.ಗೊಣ್ಣಾಗರ, ಕ್ರೈಸ್ತ ಕಿಂಗ್ ಶಾಲೆಯ ಮುಖ್ಯ ಶಿಕ್ಷಕಿ ಕನ್ಯೀಕಾ ಮೇರಿ, ನೀಲನಗೌಡ ಹೊಸಗೌಡ್ರು, ಕಳಕಮಲ್ಲೇಶ ಭೋಗಿ, ಶಾಕೀರಬಾಬಾ, ಯಮನಪ್ಪ ಚೂರಿ ಮತ್ತಿತ್ತರರಿದ್ದರು.
ನಾಡಗೀತೆ, ರೈತಗೀತೆಯನ್ನು ಶಿಕ್ಷಕರು ಪ್ರಸ್ತುತ ಪಡಿಸಿದರು.ಶರಣಪ್ಪ ತೆಮ್ಮಿನಾಳ ಸ್ವಾಗತಿಸಿದರು. ಜೀವನಸಾಬ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.