ಹಿಪ್ನಾಟಿಸಂ ಮೂಲಕ ಮಹಿಳೆಯ ಹಣ ದೋಚಿದ ವ್ಯಕ್ತಿಯ ಬಂಧನ
Team Udayavani, Mar 10, 2022, 12:15 PM IST
ಗಂಗಾವತಿ: ಹಿಪ್ನಾಟಿಸಂ ಮೂಲಕ ಮಹಿಳೆಯಿಂದ 40 ಸಾವಿರ ಹಣ ದೋಚಿದ ವ್ಯಕ್ತಿಯನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಂದ ಕುಮಾರ್ ಬಂಧಿತ ಆರೋಪಿ. ನಗರದ ಆನೆಗೊಂದಿ ರಸ್ತೆಯಲ್ಲಿರುವ ಮುಖಂಡರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಚಕ್ರವರ್ತಿ ನಾಯಕ್ ಇವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಚಕ್ರವರ್ತಿ ನಾಯಕ್ ಅವರ ಪತ್ನಿ ಸರೋಜಮ್ಮ ಬಳಿ ಹೋಗಿ ಹಣೆಗೆ ವಿಭೂತಿ ಹಚ್ಚಿ ಹಿಪ್ನಾಟಿಸಂ ಮಾಡಿ ಅವರಿಗೆ ತಿಳಿಯದಂತೆ ಅವರ ಬಳಿಯಲ್ಲಿದ್ದ 40 ಸಾವಿರ ರೂ. ಹಣವನ್ನು ದೋಚಿ ಪರಾರಿಯಾಗಿದ್ದ.
ಪ್ರಕರಣ ಕುರಿತು ಚಕ್ರವರ್ತಿ ನಾಯಕ್ ಹಾಗೂ ಅವರ ಪತ್ನಿ ಸರೋಜಮ್ಮ ನಗರ ಠಾಣೆಯಲ್ಲಿ ನಂದಕುಮಾರ್ ಇವರ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಸ್ ದಾಖಲಿಸಿದ್ದರು.
ಇದನ್ನೂ ಓದಿ:ಗೋವಾಕ್ಕೆ ಶಾಸಕರ ರಕ್ಷಣೆಗೆ ಸೂತ್ರಧಾರರನ್ನು ಕಳಿಸಿದ್ದಾರಲ್ಲ : ಎಚ್ ಡಿಕೆ ವ್ಯಂಗ್ಯ
ಪೊಲೀಸರು ಚಕ್ರವರ್ತಿ ನಾಯಕ್ ಹಾಗೂ ಅವರ ಆಪ್ತರ ನೆರವಿನಿಂದ ನಂದಕುಮಾರ್ ಅವರನ್ನು ಬಂಧಿಸಿದ್ದು, ಬಂಧಿತ ವ್ಯಕ್ತಿ ನಗರದ ಲಾಡ್ಜ್ ವೊಂದರಲ್ಲಿ ಜ್ಯೋತಿಷ್ಯಾಲಯವನ್ನು ನಡೆಸುತ್ತಿದ್ದು ಅನೇಕರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬಂಧಿತ ನಂದಕುಮಾರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಇಂಥ ಅನೇಕ ಜನರಿಗೆ ಈ ವ್ಯಕ್ತಿ ಮೋಸ ಮಾಡಿರುವ ಕುರಿತು ದೂರಿನಲ್ಲಿ ವಿವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ಉದಯವಾಣಿಗೆ ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.