ಆತ್ಮಹತ್ಯೆ ಮಾಡಿಕೊಂಡ ರೈತನ ಹೆಸರಲ್ಲಿ ಇನ್ನೂ ಬರುತ್ತಿದೆ ಬ್ಯಾಂಕ್ ನೋಟಿಸ್
Team Udayavani, Jun 3, 2019, 3:10 PM IST
ಕಾರಟಗಿ: ಮೃತ ಅಮರೇಶ ಸಿದ್ದಾಪುರ ಕುಟುಂಬ.
ಕಾರಟಗಿ: ಬ್ಯಾಂಕ್ ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ ಮಾಡಿಕೊಂಡು 4 ವರ್ಷಗಳಾದರೂ ಬ್ಯಾಂಕಿನವರಿಂದ ಮೃತನ ಹೆಸರಲ್ಲಿ ಹಾಗೂ ಆತನ ಕುಟುಂಬದವರಿಗೆ ಇನ್ನೂ ನೋಟಿಸ್ ಬರುತ್ತಿವೆ.
ಹುಳ್ಕಿಹಾಳ ಗ್ರಾಮದ ರೈತ ಅಮರೇಶ ಸಿದ್ದಾಪುರ 2008ರಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 30 ಸಾವಿರ ರೂ. ಸಾಲ ಮಾಡಿದ್ದ. ಅದರ ಅಸಲು ಹಾಗೂ ಬಡ್ಡಿ ಸೇರಿ 2015ರಲ್ಲಿ 62,325 ರೂ.ಗಳಾಗಿತ್ತು. ಸತತ ಬರ ಹಾಗೂ ಬೆಳೆ ಹಾನಿಯಿಂದ ನೊಂದ ರೈತ ಅಮರೇಶ ಸಾಲದ ಹೊರೆ ತಾಳಲಾರದೇ 2015 ಡಿಸೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ರೈತ ಅಮರೇಶನನ್ನೇ ಅವಲಂಬಿಸಿದ ಕುಟುಂಬ ಜೀವನ ಸಾಗಿಸುವುದೇ ದುಸ್ತರವಾಗಿದೆ.
ಮಕ್ಕಳು, ಅತ್ತೆಯನ್ನು ನೋಡಿಕೊಳ್ಳಲು ಕಷ್ಟಪಡುತ್ತಿರುವ ನಾನು ಇದೀಗ ಬ್ಯಾಂಕಿನಿಂದ ನೋಟಿಸ್‌ಗೆ ಕಂಗಾಲಾಗಿದ್ದೇನೆ. ಬ್ಯಾಂಕಿನವರ ಕಿರುಕುಳವನ್ನು ತಾಳಲಾರದೇ ತವರು ಮನೆ ಹಾದಿ ಹಿಡಿದಿದ್ದೆ. ಆದರೆ ಬ್ಯಾಂಕಿನವರು ತವರು ಮನೆಯನ್ನೂ ಪತ್ತೆ ಹಚ್ಚಿ ನನ್ನ ಹೆಸರಿನಲ್ಲಿ ನೋಟಿಸ್ ನೀಡಿದ್ದು, ಏನು ಮಾಡಬೇಕೆಂಬುದು ತಿಳಿಯದಾಗಿದೆ ಎಂಬುದು ಮೃತರ ಪತ್ನಿ ಶರಣಮ್ಮ ಅಳಲು.
ಆತ್ಮಹತ್ಯೆಗೆ ಶರಣಾದ ರೈತನ ಹೆಸರಲ್ಲೇ ಬ್ಯಾಂಕ್‌ನವರು ಇದುವರೆಗೂ ನೋಟಿಸ್ ನೀಡುತ್ತಿದ್ದಾರೆ. ಸರ್ಕಾರ ರೈತರ ಸಾಲ ಮನ್ನಾ ಮಾಡಿ ಯಾವುದೇ ನೋಟಿಸ್ ನೀಡಿ ಕಿರುಕುಳ ನೀಡದಂತೆ ಆದೇಶ ಮಾಡಿದ್ದರೂ ಸಾಲ ಮರುಪಾವತಿಸಲು ನೋಟಿಸ್ ಜಾರಿಗೊಳಿಸಿ ಕಿರುಕುಳ ನೀಡುತ್ತಿದ್ದಾರೆಂದು ಎಂದು ಶರಣಮ್ಮರ ಸಹೋದರ ಮಹಾಂತೇಶ ಅಸಹಾಯಕತೆ ವ್ಯಕ್ತಪಡಿಸಿದರು.
ರೈತ ಸಂಘಟನೆಗಳ ಆಗ್ರಹ: ಸರ್ಕಾರ ಶೀಘ್ರವೇ ಇತ್ತ ಕಡೆ ಗಮನ ಹರಿಸಿ ಬ್ಯಾಂಕ್‌ಗಳ ಇಂತಹ ಕ್ರಮಕ್ಕೆ ಕಡಿವಾಣ ಹಾಕಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.