ಗ್ರಂಥಪಾಲಕಿ ಮನೆ ಸೇರಿದ ಪುಸ್ತಕ
Team Udayavani, Oct 25, 2019, 2:36 PM IST
ದೋಟಿಹಾಳ: ಜುಮಲಾಪೂರದಲ್ಲಿ ಸಮುದಾಯ ಭವನದಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಗ್ರಂಥಾಲಯ ಶಿಥಿಲಗೊಂಡಿದ್ದರಿಂದ ಪುಸ್ತಕಗಳು ಸೇರಿದಂತೆ ಸಾಮಗ್ರಿಗಳು ಗ್ರಂಥಪಾಲಕಿಯ ಮನೆ ಸೇರಿವೆ.
ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲದ್ದರಿಂದ 2007-08ರಿಂದ ಸಮುದಾಯ ಭವನದಲ್ಲೇ ಕಾರ್ಯ ನಿರ್ವಹಿಸುತ್ತಿತ್ತು. ಸಮುದಾಯ ಭವನ ಈಗ ಶಿಥಿಲಗೊಂಡಿದ್ದು, ಮೇಲ್ಛಾವಣಿ ಇಂದೆಯೋ, ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ಬರುತ್ತವೆ. ಮಳೆ ಬಂದರೆ ಪುಸ್ತಕಗಳು ಹಾಳಾಗಿ ಹೋಗುತ್ತವೆ ಎಂಬ ಕಾರಣದಿಂದ ಪುಸ್ತಕ ಹಾಗೂ ಇತರೆ ಸಾಮಗ್ರಿಗಳು ಗ್ರಂಥಪಾಲಕರ ಮನೆ ಸೇರಿವೆ. ಹೀಗಾಗಿ ಗ್ರಂಥಾಲಯ ಬಂದಾಗಿ ಮೂರ್‍ನಾಲ್ಕು ತಿಂಗಳುಗಳು ಕಳೆದಿವೆ.
ಅದು ಅಲ್ಲದೇ ತಿಪ್ಪೆಗಳ ಮಧ್ಯೆಯೇ ಗ್ರಂಥಾಲಯವಿದ್ದಿದ್ದರಿಂದ ಓದುಗರು ವಾಸನೆ ಸಹಿಸಲಾಗದೇ ದೂರ ಹೋಗುವಂಥ ಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರು ದನಕರುಗಳ ಸೆಗಣಿ, ಮೂತ್ರ, ಕಸಕಡ್ಡಿ ಮತ್ತು ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಹಾಕುತ್ತಿದ್ದರಿಂದ ಓದುಗರಿಗೆ ಗಬ್ಬು ವಾಸನೆ ಉಂಟಾಗಿ ಕಿರಿಕಿರಿಯಾಗಿತ್ತು. ಸುಮಾರು 2500 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕೇವಲ 50 ಜನ ಮಾತ್ರ ಗ್ರಂಥಾಲಯ ಸದಸ್ಯತ್ವ ಹೊಂದಿದ್ದು, ಎರಡು ಪತ್ರಿಕೆ, ಮೂರು ಮಾಸಪತ್ರಿಕೆ ಬರುತ್ತಿದ್ದವು. 2152 ಪುಸ್ತಕಗಳು ಈ ಗ್ರಂಥಾಲಯದಲ್ಲಿ ಇವೆ. ಆದರೆ ಅವು ಸಹ ಈಗ ಉಪಯೋಗಕ್ಕೆ ಬಾರದಂತಾಗಿವೆ.
ಗ್ರಾಮದ ಸಮುದಾಯ ಭವನದಲ್ಲಿ ಕಳೆದ 7-8 ವರ್ಷಗಳಿಂದ ನಡೆಯುತ್ತಿದ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ನೀರು ಬರುತ್ತವೆ. ಬೇರೆ ಕಟ್ಟಡ ವ್ಯವಸ್ಥೆ ಮಾಡಿಕೊಡಲು ಗ್ರಾಪಂ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಮೂರು ತಿಂಗಳಿಂದ ನಮ್ಮ ಮನೆಯಲ್ಲೇ ಗ್ರಂಥಾಲಯ ಸಾಮಗ್ರಿ ಇಟ್ಟುಕೊಂಡಿದ್ದೇವೆ –ಅಕ್ಕಮಹಾದೇವಿ, ಗ್ರಂಥಪಾಲಕಿ.
-ಮಲ್ಲಿಕಾರ್ಜುನ ಮೆದಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.