ದೇಶದ ಆರ್ಥಿಕ ಸ್ಥಿತಿಗತಿ ಅಧ್ಯಯನಕ್ಕೆ ಗಣತಿ ಅತ್ಯವಶ್ಯ
ಗಣತಿದಾರರು ಮೇಲ್ವಿಚಾರಕರಿಗೆ ನಡೆದ ತರಬೇತಿ ಕಾರ್ಯಾಗಾರ
Team Udayavani, Jun 26, 2019, 11:27 AM IST
ಕೊಪ್ಪಳ: ಡಿಸಿ ಕಚೇರಿ ಅಡಿಟೋರಿಯಂ ಹಾಲ್ನಲ್ಲಿ ಸಿಎಸ್‌ಸಿ ಸೆಂಟರ್‌ನಿಂದ 7ನೇ ಆರ್ಥಿಕ ಗಣತಿ 2019ರ ಕೈಗೊಳ್ಳುವ ಬಗ್ಗೆ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ನಡೆದ ತರಬೇತಿಯನ್ನು ಎಡಿಸಿ ಸೈಯದಾ ಅಯಿಷಾ ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ: ದೇಶದ ಆರ್ಥಿಕ ಸ್ಥಿತಿ-ಗತಿ ಅಧ್ಯಯನಕ್ಕೆ ಗಣತಿ ಅತ್ಯವಶ್ಯಕವಾಗಿದ್ದು, ಕೇಂದ್ರ ಸರ್ಕಾರವು 7ನೇ ಆರ್ಥಿಕ ಗಣತಿಯನ್ನು ಕೈಗೊಳ್ಳಲು ಉದ್ದೇಶಿಸಿದೆ ಎಂದು ಎಡಿಸಿ ಸೈಯದಾ ಅಯಿಷಾ ಅವರು ಹೇಳಿದರು.
ನಗರದ ಡಿಸಿ ಕಚೇರಿಯ ಅಡಿಟೋರಿಯಂ ಹಾಲ್ನಲ್ಲಿ ಸಿಎಸ್‌ಸಿ ಸೆಂಟರ್‌ನಿಂದ 7ನೇ ಆರ್ಥಿಕ ಗಣತಿ 2019ರ ಕೈಗೊಳ್ಳುವ ಬಗ್ಗೆ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಗಣತಿ ಮೂಲಕ ಲಭ್ಯವಾಗುವ ಮಾಹಿತಿಗಳು ವಿವಿಧ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು, ಯೋಜನೆ ಸಿದ್ಧಪಡಿಸಲು ಸರಕಾರಕ್ಕೆ ಮೂಲ ಅಂಕಿ ಅಂಶಗಳಾಗಿÊ. ಸರ್ಕಾರದಿಂದ ಯಾವುದೇ ಹೊಸ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಲು ಆರ್ಥಿಕ ಗಣತಿ ಅತ್ಯವಶ್ಯವಾಗಿವೆ. ಭಾರತ ಸರ್ಕಾರದ ಸಾಂಖ್ಯೀಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು ಕಾಮನ ಸರ್ವಿಸ್ ಸೆಂಟರ್, ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಮೂಲಕ 7ನೇ ಆರ್ಥಿಕ ಗಣತಿಯನ್ನು ಕೈಗೊಳ್ಳಲು ಉದ್ದೇಶಿಸಿದೆ. ಈಗಾಗಲೇ 7ನೇ ಆರ್ಥಿಕ ಗಣತಿಯು ದೇಶಾದ್ಯಂತ ಚಾಲನೆಗೊಂಡಿದ್ದು, ಆರ್ಥಿಕ ಗಣತಿಯನ್ನು ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಆರ್ಥಿಕ ಗಣತಿ ಕಾರ್ಯದಲ್ಲಿ ಗಣತಿದಾರರು ತಮಗೆ ನಿರ್ದಿಷ್ಟಪಡಿಸಿದ ಗ್ರಾಮೀಣ ಅಥವಾ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆ, ಕಟ್ಟಡಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಉದ್ಯಮದ ಅಥವಾ ವ್ಯಾಪಾರ ಘಟಕದ ಎಣಿಕೆಯನ್ನು ಮೊಬೈಲ್ ಆ್ಯಪ್ ಮೂಲಕ ಮಾಡಬೇಕು ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, 7ನೇ ಆರ್ಥಿಕ ಗಣತಿ ಕಾರ್ಯವನ್ನು ಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿದೆ. ಗಣತಿ ಕಾರ್ಯವನ್ನು ಕಾಮನ ಸರ್ವಿಸ್ ಸೆಂಟರ್ (ಸಿ.ಎಸ್.ಸಿ.) ಮೂಲಕ ಕೈಗೊಳ್ಳಲಾಗುತ್ತದೆ. ನೋಂದಾಯಿತ ಗಣತಿದಾರರಿಗೆ ಹಂಚಿಕೆಯಾಗುವ ಗಣತಿ ಬ್ಲಾಕುಗಳ ವಿವರಗಳು ಮೊಬೈಲ್ ಆ್ಯಪ್ನಲ್ಲಿಯೇ ಲಭ್ಯ ಇವೆ. ಗಣತಿದಾರರು ತಮಗೆ ನೀಡಿರುವ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶಗಳ ಯಾವುದೇ ಘಟಕದಲ್ಲಿ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವಂತಹ ಉದ್ಯಮಗಳ ಪಟ್ಟಿಯನ್ನು ಮಾಡಬೇಕು ಎಂದರು.
ಕಾರ್ಯಾಗಾರದಲ್ಲಿ ಎನ್.ಎಸ್.ಎಸ್. ಅಧಿಕಾರಿ ಜಯಪ್ರಕಾಶ, ಜಿಲ್ಲಾ ಅಂಕಿ-ಸಂಖ್ಯ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ, ಸಿ.ಎಸ್.ಸಿ. ಮ್ಯಾನೇಜರ್ ಮಾರುತಿ ಹಾಗೂ ಶ್ರೀಕಾಂತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ 7ನೇ ಆರ್ಥಿಕ ಗಣತಿ ಕಾರ್ಯದ ತರಬೇತಿಯನ್ನು ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
ದೋಟಿಹಾಳ: ಅನುದಾನವಿಲ್ಲದೆ ಮುಚ್ಚುವ ಹಂತಕ್ಕೆ ತಾಂಡಾ ನಿಗಮದ ಗ್ರಂಥಾಲಯಗಳು
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್53 ಪ್ರಕರಣ -4.75 ಲಕ್ಷ ರೂ. ವಶ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.