ಕೊನೆ ದಿನದ ಪ್ರವಚನಕ್ಕೆ ಜನಸಾಗರ
Team Udayavani, Nov 25, 2019, 2:27 PM IST
ಕಾರಟಗಿ: ಪಟ್ಟಣದಲ್ಲಿ ನಡೆದ ಕೊಪ್ಪಳದ ಗವಿಶ್ರೀಗಳ ಕೊನೆಯ ದಿನದ ಪ್ರವಚನದ ಅಂಗವಾಗಿ ಪಟ್ಟಣದ ಶ್ರೀ ಸಿದ್ದೇಶ್ವರ ಬಯಲು ರಂಗಮಂದಿರದಲ್ಲಿ ರವಿವಾರ ಸಂಜೆ ಅಪಾರ ಸಂಖ್ಯೆಯ ಜನಸ್ತೋಮ ನೆರೆದಿತ್ತು. ಇದು ಗವಿಸಿದ್ದೇಶ್ವರರ ಜಾತ್ರೆ ನಡೆದಿದೆ ಎಂಬಂತೆ ಭಾಸವಾಗುತ್ತಿತ್ತು. ಆದರೆ ರಥೋತ್ಸವ ಮಾತ್ರ ಇರಲಿಲ್ಲ.
ಕಳೆದ 10 ದಿನಗಳಿಂದ ನಡೆದ ಪ್ರವಚನ ಕಾರ್ಯಕ್ರಮಕ್ಕೆ ಸುತ್ತಲಿನ ಗ್ರಾಮಗಳು ಸೇರಿದಂತೆ ತಾಲೂಕು, ಹೊರ ಜಿಲ್ಲೆಗಳಿಂದಲೂ ನಿತ್ಯ ಭಕ್ತರು ಆಗಮಿಸುತ್ತಿದ್ದರು. ಆದರೆ ರವಿವಾರ ದಿನಕ್ಕಿಂತ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರವಚನ ಆಲಿಸಲು ಆಗಮಿಸಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟ್ರ್ಯಾಕ್ಟರ್, ಕಾರು, ಟಾಂಟಾಂ, ಟ್ರ್ಯಾಕ್ಸ್, ಆಟೋ ಸೇರಿದಂತೆ ವಿವಿಧ ವಾಹನಗಳಲ್ಲಿ ಭಕ್ತರ ಆಗಮಿಸಿದ್ದ ಪರಿಣಾಮ್ ಸಂಚಾರ ದಟ್ಟಣೆಯಾಗಿತ್ತು. ಆರ್.ಜಿ. ಮುಖ್ಯೆ ರಸ್ತೆಯ ಇಕ್ಕೆಲಗಳ ಅಂಗಡಿಗಳ ಮುಂದೆ ನೂರಾರು ದ್ವಿಚಕ್ರವಾಹನ ನಿಲ್ಲಿಸಲಾಗಿತ್ತು. ಪ್ರವಚನಕ್ಕೆ ಪಾಲಕರೊಂದಿಗೆ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಂಜೆ 4 ಗಂಟೆಯಿಂದ ಆಗಮಿಸುತ್ತಿದ್ದ ಭಕ್ತರು ಪ್ರವಚನ ಆರಂಭಗೊಂಡು ಮುಕ್ಕಾಲು ಗಂಟೆಯಾದರೂ ಬರುತ್ತಿದ್ದರು. ಕನಕದಾಸ ವೃತ್ತ ಮತ್ತು ಹಳೆ ಬಸ್ ನಿಲ್ದಾಣಗಳಲ್ಲಿ ವಾಹನ ಹಾಗೂ ಭಕ್ತರನ್ನು ನಿಯಂತ್ರಿಸಲೂ ಪೊಲೀಸರು ಹರಸಾಹಸ ಪಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.